5ನೇ ದಿನವು ಜಾತ್ರೆಯ ರಂಗು..!
– ಸಾವಿರಾರು ಜನರು ಇಂದು ಕೂಡ ಜಾತ್ರೆಗೆ ಭೇಟಿ
– ತುಂಗಾ ನದಿಯಲ್ಲಿ ಗಮನ ಸೆಳೆದ ಬೋಟಿಂಗ್ ಉತ್ಸವ
– ಜಾತ್ರೆಯಲ್ಲಿ ಜೂಜಾಡುತ್ತಿದ್ದ ಇಬ್ಬರು ಅರೆಸ್ಟ್!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಎಳ್ಳಮಾವ್ಯಾಸೆ ಜಾತ್ರೆ ಮುಗಿದಿದ್ದರೂ ಕೂಡ ಎಂದಿನಂತೆ ಜನ ಜಾತ್ರೆಯ ರಂಗನ್ನು ಹೆಚ್ಚಿಸುತ್ತಿದ್ದಾರೆ. 5ನೇ ದಿನವೂ ಕೂಡ ಜಾತ್ರೆಯಲ್ಲಿ ಜನವೋ ಜನ, ಎಂದಿನಂತೆ ಜನ ಅಂಗಡಿಗಳಲ್ಲಿ ಖರೀದಿ ಮಾಡುವುದು ಇನ್ನಷ್ಟು ಜೋರಾಗಿದೆ. ಎಲ್ಲಡೆ ಜಾತ್ರೆಯ ಸಂಭ್ರಮ ಇನ್ನಷ್ಟು ಹೆಚ್ಚಾದಂತೆ ಇದೆ. ಜಾತ್ರೆಯಲ್ಲಿ ಜಾಯಿಂಟ್ ವಿಲ್, ಕೊಲಂಬಸ್, ಬ್ರೇಕ್ ಡ್ಯಾನ್ಸ್, ಹೀಗೆ ಮಕ್ಕಳ ಆಟೋಪಕರಣಗಳಲ್ಲಿ ಹೆಚ್ಚು ಜನರು ಹಾಗೂ ಮಕ್ಕಳು ಆಟವಾಡಿ ಸಂಭ್ರಮ ಪಡುತ್ತಿದ್ದಾರೆ. ಜಾತ್ರೆಯ ಸಂಭ್ರಮ ಇನ್ನೂ ಹೆಚ್ಚಾದಂತೆ ಇದೆ. ಇಂದು ಕೂಡ ಜಾತ್ರೆಯಲ್ಲಿ ಜನ ಹೆಚ್ಚಾದಂತೆ ಇದೆ.
– ತೀರ್ಥಹಳ್ಳಿ : ತುಂಗಾ ನದಿಯಲ್ಲಿ ಇಂದು ಕೂಡ ಬೋಟಿಂಗ್ ಉತ್ಸವ
ತೀರ್ಥಹಳ್ಳಿ : ಎಳ್ಳಮಾವ್ಯಾಸೆ ಜಾತ್ರೆ ಸಂದರ್ಭದಲ್ಲಿ ತುಂಗಾ ನದಿಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಈ ಬೋಟಿಂಗ್ ಉತ್ಸವದಲ್ಲಿ ಸಾವಿರಾರು ಜನರು ಈ ಬೋಟಿಂಗ್ ನಲ್ಲಿ ಸಮಯ ಕಳೆದಿದ್ದಾರೆ ಮತ್ತು ಸಾಕಷ್ಟು ರೀತಿಯ ಸಂತೋಷವನ್ನು ಕೂಡ ಪಡೆದುಕೊಂಡಿದ್ದಾರೆ. ಸಾವಿರಾರು ಜನರ ಗಮನ ಸೆಳೆದಿರುವ ತುಂಗಾ ನದಿಯಲ್ಲಿರುವ ಬೋಟಿಂಗ್ ಶುಕ್ರವಾರ ಕೂಡ ಗಮನ ಸೆಳೆಯಿತು. ಜನರಿಂದ ಉತ್ತಮ ಸ್ಪಂದನೆ ಕೂಡ ಸಿಕ್ಕಿದೆ.
– ತೀರ್ಥಹಳ್ಳಿ : ಜಾತ್ರೆಯಲ್ಲಿ ಜೂಜಾಡುತ್ತಿದ್ದ ಇಬ್ಬರು ಅರೆಸ್ಟ್
ಪ್ರಸಿದ್ಧ ತೀರ್ಥಹಳ್ಳಿ ರಾಮೇಶ್ವರ ಜಾತ್ರೆಯಲ್ಲಿ ಜೂಜಾಡುತ್ತಿದ್ದ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಬಾಲ್ ಆಟವನ್ನು ಹಣದ ಮೂಲಕ ಜೂಜಾಡುತ್ತಿದ್ದ ಇಬ್ಬರನ್ನ ತೀರ್ಥಹಳ್ಳಿ ಪೊಲೀಸರು ಮಹಜರು ಮಾಡಿ ವಶಕ್ಕೆ ಪಡೆದಿದ್ದಾರೆ. ಇನ್ಸ್ಪೆಕ್ಟರ್ ಪೊಲೀಸ್ ಸಿಬ್ಬಂದಿ ದೀಪಕ್, ಇವರ ತಂಡ ಇಬ್ಬರನ್ನು ಬಂಧಿಸಿ ಹಣ ಮತ್ತು ಜೂಜಿಗೆ ಬಳಸುತ್ತಿದ್ದ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ಈ ಇಬ್ಬರು ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.