ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಗಮನಸೆಳೆದ ಆಲೆಮನೆ ಕೋಣ..!!
– ಸ್ಥಳದಲ್ಲೇ ಆಲೆಮನೆ ಮಾಡಿ,ಕಬ್ಬಿನ ಹಾಲು ವಿತರಣತೆ
– ಆಲೆಮನೆ ಕಬ್ಬಿನಹಾಲು ಕುಡಿಯಲು ಮುಗಿಬಿದ್ದ ಜನರು,ಎಲ್ಲರಿಂದ ಮೆಚ್ಚುಗೆ
NAMMUR EXPRESS NEWS
ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ತೀರ್ಥಹಳ್ಳಿ ಶ್ರೀರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಆಲೆಮನೆ ಕಬ್ಬಿನಹಾಲು,ಹಾಗೂ ಆಲೆಮನೆ ಕೋಣ ಎಲ್ಲರ ಗಮನ ಸೆಳೆದಿದೆ.
ಆರಗ ಮೂಲದ ವ್ಯಕ್ತಿಯೊಬ್ಬರು ಜಾತ್ರೆಯಲ್ಲಿ ಆಲೆಮನೆ ನಿರ್ಮಿಸಿ,ಕೋಣ ಕಟ್ಟಿ ಗಾಣ ತಿರುಗಿಸಿ ಕಬ್ಬಿನ ಹಾಲನ್ನು ಸಾಂಪ್ರದಾಯಿಕವಾಗಿ ತೆಗೆದು ಕೊಡುತ್ತಿದ್ದು. ಈ ಸಾಂಪ್ರದಾಯಿಕವಾಗಿ ತೆಗೆದ ರುಚಿಯಾದ ಕಬ್ಬಿನ ಹಾಲನ್ನು ಕುಡಿಯಲು ಜನರು ಮುಗಿಬೀಳುತ್ತಿದ್ದು, ಕಳೆದ ಮೂರು ದಿನಗಳಿಂದ ಸಾವಿರಾರು ಜನರು ಬಂದು ರುಚಿಯಾದ ಕಬ್ಬಿನ ಹಾಲು ಕುಡಿದಿದ್ದಾರೆ. ಯಾಂತ್ರೀಕೃತ ಕಬ್ಬಿನ ಹಾಲು ತೆಗಿಯುತ್ತಿರೋ ಈ ಸಮಯದಲ್ಲಿ ಇಲ್ಲೊಬ್ಬ ರೈತನ ಈ ವಿಶೇಷ ಪ್ರಯತ್ನ ಎಲ್ಲರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರವಾಗಿದೆ.