ರಾಮೇಶ್ವರ ಜಾತ್ರೆಗೆ ಬೆಳಕಿನ ರಂಗು: ತೀರ್ಥಹಳ್ಳಿ ಜಗಮಗ!
– ಬೆಳಕಿನ ಚಿತ್ತಾರದಲ್ಲಿ ತುಂಗಾ ಹಳೆ ಸೇತುವೆ ಸೊಬಗು
– ದೇವಸ್ಥಾನ, ತುಂಗಾ ತೀರ, ರಾಮ ಮಂಟಪ ಮೆರುಗು
– ಅಂಗಡಿ, ಸರ್ಕಾರಿ ಕಚೇರಿ, ಮುಖ್ಯ ರಸ್ತೆಗೆ ಬೆಳಕಿನ ಅಲಂಕಾರ
ವಿಶೇಷ ವರದಿ: ಉಮೇಶ್
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನ ವರ್ಷದ ಅಂತ್ಯದ ಜಾತ್ರಾ ಮಹೋತ್ಸವದಲ್ಲಿ ಇಡೀ ತೀರ್ಥಹಳ್ಳಿಯೆ ಬೆಳಕಿನ ರಂಗಲ್ಲಿ ಮಿಂದೆದ್ದಿದೆ.
ರಾಮೇಶ್ವರ ಜಾತ್ರೆಗೆ ಬೆಳಕಿನ ರಂಗು ಕಾಣುತ್ತಿದ್ದೂ ತೀರ್ಥಹಳ್ಳಿ ಜಗಮಗಗೊಂಡಿದೆ. ಬೆಳಕಿನ ಚಿತ್ತಾರದಲ್ಲಿ ತುಂಗಾ ಹಳೆ ಸೇತುವೆ ಸೊಬಗು ಎಲ್ಲರ ಗಮನ ಸೆಳೆಯುತ್ತಿದೆ. ರಾಮೇಶ್ವರ ದೇವಸ್ಥಾನ, ತುಂಗಾ ತೀರ, ರಾಮ ಮಂಟಪ ಮೆರುಗು ಹೆಚ್ಚಿದೆ. ಇದಲ್ಲದೆ ಅಂಗಡಿ, ಸರ್ಕಾರಿ ಕಚೇರಿ, ಮುಖ್ಯ ರಸ್ತೆಗೆ ಬೆಳಕಿನ ಅಲಂಕಾರ ಹೊಸ ಲುಕ್ ಕೊಟ್ಟಿದೆ.
ತೀರ್ಥಹಳ್ಳಿ ಲೈಟ್ಸ್ ಸಂಸ್ಥೆಗಳ ಉತ್ತಮ ಸೇವೆ!
ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಾಲಯ ಸುತ್ತ ಗುರುರಾಜ್ ಸೌಂಡ್ಸ್ & ಲೈಟಿಂಗ್ಸ್ ಶ್ರೀ ರಾಮೇಶ್ವರ ಜಾತ್ರೆಗೆ ಬಣ್ಣ ಬಣ್ಣದ ಬೆಳಕು ಒದಗಿಸುತ್ತಿದ್ದಾರೆ. ರಥ ಮತ್ತು ಹೊಳೆಯ ದಾರಿಯಲ್ಲಿ ಮನು ಸೌಂಡ್ಸ್ ಅವರ ಬೆಳಕಿನ ಹಬ್ಬವನ್ನು ಉಂಟು ಮಾಡಿದ್ದಾರೆ. ರಾಮ ಮಂಟಪವನ್ನು ಎಸ್ ಏ ಎಸ್ ಡೆಕೋರೆಟ್ ಬಾಳೆಬೈಲು ಇವರು ಮಂಟಪ ಸುಂದರಗೊಳಿಸಿದ್ದಾರೆ. ಶ್ರೀ ತೀರ್ಥ ರಾಮೇಶ್ವರ ತೆಪ್ಪೋತ್ಸವ ಎಸ್.ಸಿ.ಎಸ್ ಶ್ರೀ ಚಾಮುಂಡೇಶ್ವರಿ ಸೌಂಡ್ ಅವರು ತೆಪ್ಪೋತ್ಸವ ವೈಭವವನ್ನು ಹೆಚ್ಚಿಸಿದ್ದಾರೆ. ಸೇತುವೆ ಮತ್ತು ಆದಿಯೋಗಿ ಎಂ.ಎಸ್ ಡೆಕೋರೇಟರ್ಸ್ ರಾಮೇಶ್ವರ ಜಾತ್ರೆಯ ಬೆಳಕಿನ ಮೆರಗು ಹೆಚ್ಚಿಸಿದ್ದಾರೆ. ತೀರ್ಥಹಳ್ಳಿ ಪಟ್ಟಣ ರಸ್ತೆಯ ವೈಭವದ ರಂಗು ಜನರ ರೋಮಾಂಚನಗೊಳಿಸುವಲ್ಲಿ ಎಸ್ ಡಿ ಎಸ್ ಬೆಟ್ಟಮಕ್ಕಿ ಅವರು ಬೆಳಕಿನ ಸಂಭ್ರಮ ಮೆರಗುವಂತೆ ಕಾರ್ಯ ನಿರ್ವಹಿಸಿದ್ದಾರೆ. ಇಡೀ ಪಟ್ಟಣ ಬೆಳಕಿನ ಚಿತ್ತಾರದಲ್ಲಿ ಕಾಣುತ್ತಿದೆ.