ತೆಪ್ಪೋತ್ಸವಕ್ಕೆ ಕ್ಷಣಗಣನೆ ಆರಂಭ!
– ಲಕ್ಷ ಲಕ್ಷ ಜನ ಸೇರುವ ಸಾಧ್ಯತೆ
– ತುಂಗಾತೀರದ್ಲಲಿ ತೆಪ್ಪೋತ್ಸವಕ್ಕೆ ಸಜ್ಜು
– ರಥ ಬೀದಿಯಲ್ಲಿ ಜನ ಸಾಗರ
– ನದಿ ತೀರದಲ್ಲಿ ಪಟಾಕಿ/ಸಿಡಿಮದ್ದುಗಳನ್ನು ಅಚ್ಚುಕಟ್ಟಾಗಿ ಜೋಡಣೆ
NAMMUR EXPRESS NEWS:
ತೀರ್ಥಹಳ್ಳಿ: ಜಾತ್ರೆಯಲ್ಲಿ ತೆಪ್ಪೋತ್ಸವಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದ್ದು ತುಂಗಾ ತೀರ, ರಥಬೀದಿಯಾದ್ಯಂತ ಜಾತ್ರೆಯಲ್ಲಿ ಜನಸಾಗರವೇ ತುಂಬಿದೆ.
ತೀರ್ಥಹಳ್ಳಿ ತಾಲೂಕು ಮಾತ್ರವಲ್ಲದೆ ಬೇರೆ – ಬೇರೆ ಊರುಗಳಿಂದಲೂ ಜನ, ತೆಪ್ಪೋತ್ಸವ ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ನದಿ ತೀರದಲ್ಲಿ ಪಟಾಕಿ ಹಾಗೂ ಸಿಡಿಮದ್ದುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದು ಅದನ್ನು ನೋಡುವುದೇ ಒಂದು ಸಂಭ್ರಮ. ಎಲ್ಲಾ ಶಾಸಕರು, ತಹಶೀಲ್ದಾರರು, ಡಿ ವೈ ಎಸ್ ಪಿ ಗಜಾನನ ವಾಮನ ಸುತಾರ ಹಾಗೂ ಪೋಲಿಸ್ ಇಲಾಖೆಯವರು ಹಾಗೂ ಮುಖ್ಯ ಅತಿಥಿಗಳು ತೆಪ್ಪೋತ್ಸವಕ್ಕೆ ಚಾಲನೆಯನ್ನು ನೀಡುತ್ತಾರೆ. ತೆಪ್ಪವನ್ನು ವಿವಿಧ ಹೂವುಗಳಿಂದ, ಹಾರ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗುತ್ತದೆ. ವಿಶೇಷವಾದ ಆಕರ್ಷಣೆಯ 6 ಲಕ್ಷಕ್ಕೂ ಹೆಚ್ಚು ಪಟಾಕಿ ಹಾಗೂ ಸಿಡಿಮದ್ದುಗಳನ್ನು ಸಿಡಿಸಲಾಗುತ್ತದೆ. ಈ ಪಟಾಕಿಗಳನ್ನ ಸಿಡಿಸುವುದು ತುಂಬಾ ಆಕರ್ಷಣೀಯವಾಗಿರುತ್ತದೆ ಆದ್ದರಿಂದ ಪಟಾಕಿ ಸಿಡಿಸುವುದನ್ನು ನೋಡಲು ಜನ ಬೇರೆ ಬೇರೆ ಊರುಗಳಿಂದಲೂ ಕೂಡ ಈ ತೆಪ್ಪೋತ್ಸವವನ್ನು ವೀಕ್ಷಣೆ ಮಾಡಲು ಬರುತ್ತಾರೆ.
ಎಳ್ಳಮಾವ್ಯಾಸೆ ಜಾತ್ರೆಯ ಎಲ್ಲಾ ವಿಡಿಯೋ ಹಾಗೂ ಸುದ್ದಿಗಳಿಗಾಗಿ ನಮ್ಮೂರ ಎಕ್ಸಪ್ರೆಸ್ ಯೂಟ್ಯೂಬ್ ಚಾನಲ್ ಅನ್ನ ವೀಕ್ಷಿಸಿ subscribe ಮಾಡಿ ಮಲೆನಾಡಿನ ಎಲ್ಲರಿಗೂ ಶೇರ್ ಮಾಡಿ…