- ಎಬಿವಿಪಿ ಅಧ್ಯಕ್ಷನ ಕಾಮಪುರಾಣ ಇನ್ನಷ್ಟು ಬಯಲು?
- ಆರಗ ಜ್ಞಾನೇಂದ್ರ ಹೇಳಿದ್ದೇನು? ಪ್ರಿಯಾಂಕಾ ಖರ್ಗೆ ಹೇಳಿದ್ದೇನು?
ಶಿವಮೊಗ್ಗ/ ಬೆಂಗಳೂರು: ತೀರ್ಥಹಳ್ಳಿಯಲ್ಲಿ ಯುವತಿಯ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಪ್ರಕರಣ ಇದೀಗ ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಬಿಜೆಪಿ ಅಂಗ ಸಂಸ್ಥೆ ಎಂಬಂತಿರುವ ಎಬಿವಿಪಿ ತೀರ್ಥಹಳ್ಳಿ ಅಧ್ಯಕ್ಷನಾಗಿದ್ದ ಆರೋಪಿ ಅನೇಕ ಯುವತಿಯರ ಜತೆ ಅಶ್ಲೀಲ ವಿಡಿಯೋ ಮಾಡಿಕೊಂಡು ಹರಿಬಿಟ್ಟಿದ್ದ. ಆರೋಪಿ ಜತೆ ಅನೇಕರು ಕೈಜೋಡಿಸಿರುವುದಾಗಿ ತಿಳಿದು ಬಂದಿದ್ದು ತೀರ್ಥಹಳ್ಳಿ ಮತ್ತು ಶಿವಮೊಗ್ಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಇಂತಹ ಅಶ್ಲೀಲತೆ ಯಾರಿಗೂ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಬೇಕು. ಅವನೊಬ್ಬ ಕೊಳಕು ಮನುಷ್ಯ. ಈ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗಾಂಜಾ, ಅಫೀಮು ಮಾರಾಟ ಹೆಚ್ಚಾಗಿ ಆರಂಭವಾಗಿದೆ. ಇದನ್ನು ಮಟ್ಟ ಹಾಕಲು ಪೋಷಕರು ಗಮನ ಹರಿಸಬೇಕು. 3 – 4 ದಿನದಲ್ಲಿ ಶಾಲಾ ಕಾಲೇಜು ಮುಖ್ಯಸ್ಥರು ಹಾಗೂ ಪೊಲೀಸರ ಸಭೆ ಕರೆದು ಚರ್ಚೆ ಮಾಡುತ್ತೇನೆ. ಕೇವಲ ತೀರ್ಥಹಳ್ಳಿ ಅಲ್ಲ ರಾಜ್ಯದ ಎಲ್ಲಾ ಕಡೆ ಇದು ಇದೆ ಎಂದು ಅವರು ಪೊಲೀಸ್ ಇಲಾಖೆ ಅಸಮರ್ಥತೆಯನ್ನು ಹೇಳಿಕೊಂಡಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸಹ ಟ್ವಿಟ್ ಮಾಡಿ ಕೂಡಲೇ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು ಸಚಿವ ಪ್ರಿಯಾಂಕ್ ಖರ್ಗೆ ಆರಗ ವಿರುದ್ಧ ಟ್ವೀಟ್ ಮಾಡಿದ್ದಾರೆ. ಆರಗ ಜ್ಞಾನೇಂದ್ರ ಅವರೇ ದುಷ್ಟ ಶಕ್ತಿಗಳೆಲ್ಲ ನಿಮ್ಮ ಬಿಜೆಪಿಯವರೇ ಯಾಕೆ? ಮರಳು ಮಾಫಿಯಾ ತಡೆಯಲು ಬಂದ ಪೇದೆ ಕೊಂದವ ನಿಮ್ಮ ಬಿಜೆಪಿಯವ, ಹುಡುಗಿಯರ ಅಶ್ಲೀಲ ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡಿದವರ ನಿಮ್ಮ ಬಿಜೆಪಿಯವ, ಇದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಕುಟುಕಿದ್ದಾರೆ.
ಅಶ್ಲೀಲ ವಿಡಿಯೋ ಚಿತ್ರೀಕರಿಸಿಕೊಂಡಿದ್ದ ವಿದ್ಯಾರ್ಥಿ ಸಂಘಟನೆಯ ಮುಖಂಡನನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇನ್ನಷ್ಟು ವಿಡಿಯೋ ಬಗ್ಗೆ ಗುಸು ಗುಸು ಕೇಳಿ ಬರುತ್ತಿದೆ.