ಮಾದರಿಯಾಯ್ತು ಶ್ರೀ ರಾಮ ವರ್ತಕರ ಸೌಹಾರ್ದ ಸಂಘ!
– ಫೆ.2ಕ್ಕೆ ಬಿದರಗೋಡಲ್ಲಿ 1ನೇ ಸರ್ವ ಸದಸ್ಯರ ಮಹಾಸಭೆ
– ಟಿ.ಎಸ್.ಕೇಶವಮೂರ್ತಿ ಘನ ಅಧ್ಯಕ್ಷತೆಯಲ್ಲಿ ಆಯೋಜನೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಮಾದರಿ ಸಹಕಾರ ಸಂಘದಲ್ಲಿ ಒಂದಾದ ಶ್ರೀ ರಾಮ ವರ್ತಕರ ಸೌಹಾರ್ದ ಸಹಕಾರ ಸಂಘದ 2023-24 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಫೆ.2ನೇ ಭಾನುವಾರ ಬೆಳಿಗ್ಗೆ 11:00 ಗಂಟೆಗೆ ಬಿದರಗೋಡು. ಶ್ರೀ ರಾಮಮಂದಿರ ಆವರಣದಲ್ಲಿ ಸಹಕಾರಿಯ 1ನೇ ಸರ್ವ ಸದಸ್ಯರ ಮಹಾಸಭೆ ಸಹಕಾರಿಯ ಅಧ್ಯಕ್ಷರಾದ ಟಿ.ಎಸ್. ಕೇಶವಮೂರ್ತಿ ಇವರ ಘನ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ. ಈ ಸರ್ವಸದಸ್ಯರ ಸಭೆಗೆ ಮುಖ್ಯ ಅತಿಥಿಗಳಾಗಿ ಅಧ್ಯಕ್ಷರು ಡಿ. ಸಿ. ಸಿ. ಬ್ಯಾಂಕ್ ಶಿವಮೊಗ್ಗ ಆರ್.ಎಂ. ಮಂಜುನಾಥಗೌಡ, ಮಾಜಿ ಗೃಹ ಸಚಿವರು ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವರು ಕಿಮ್ಮನೆ ರತ್ನಾಕರ, ನಿರ್ದೇಶಕರು, ಡಿ. ಸಿ. ಸಿ. ಬ್ಯಾಂಕ್ ಶಿವಮೊಗ್ಗ ವಿಜಯ್ದೇವ್, ಉಪಾಧ್ಯಕ್ಷರು, ಕ. ರಾ. ಸೌ. ಸಂ. ಸ. ಸಂಘ ನಿಗಮ, ಬೆಂಗಳೂರು ಪ್ರಸನ್ನಕುಮಾರ್, ಉಪಾಧ್ಯಕ್ಷರು , ಡಿ. ಸಿ. ಸಿ. ಬ್ಯಾಂಕ್ ಚಿಕ್ಕಮಗಳೂರು ಡಿ.ಸಿ. ಶಂಕರಪ್ಪ, ಸರಸ್ವತಿ ಸೌಹಾರ್ದ ಸಹಕಾರ ಸಂಘ, ತೀರ್ಥಹಳ್ಳಿಯ ಅಧ್ಯಕ್ಷರಾದ ರಾಘವೇಂದ್ರ ನಾಯಕ್, ಸಹಕಾರ ಸಂಘಗಳ ಉಪನಿಬಂಧಕರು, ಶಿವಮೊಗ್ಗ ನಾಗಭೂಷಣ ಕಲ್ಮನೆ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಶಿವಮೊಗ್ಗ ವಿಭಾಗ ಟಿ.ವಿ. ಶ್ರೀನಿವಾಸ್, ಪ್ರಭಾರ ಸಹಕಾರ ಅಭಿವೃದ್ಧಿ ಅಧಿಕಾರಿ, ತೀರ್ಥಹಳ್ಳಿ ವೆಂಕಟಚಲಪತಿ ಜೆ.ಸಿ.,ವ್ಯವಸ್ಥಾಪಕರು, ಡಿ. ಸಿ. ಸಿ. ಬ್ಯಾಂಕ್ ಕೈಮರ ಶಾಖೆ ರಾಮಚಂದ್ರ ಟಿ.ವಿ.ಇತರ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಸದಸ್ಯರು ಈ ಸಭೆಗೆ ಸಕಾಲದಲ್ಲಿ ಆಗಮಿಸಿ, ತಮ್ಮ ಅಮೂಲ್ಯ ಸಲಹೆ ಸಹಕಾರಗಳನ್ನಿತ್ತು ಸಹಕರಿಸಲು ಆಡಳಿತ ಮಂಡಳಿ ಪರವಾಗಿ ನೂತನ್ ಕುಮಾರ್ ಎಂ.ಕೆ.,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈ ಮೂಲಕ ಕೋರಿದ್ದಾರೆ.
ಆಡಳಿತ ಮಂಡಳಿ ಯಾರು ಯಾರು?
ಅಧ್ಯಕ್ಷರು: ಆಡಳಿತ ಮಂಡಳಿ ಟಿ.ಎಸ್. ಕೇಶವಮೂರ್ತಿ, ಉಪಾಧ್ಯಕ್ಷರು: ರಾಘವೇಂದ್ರ ಕಾಮತ್, ನಿರ್ದೇಶಕರು: ಪ್ರವೀಣ್ ಬಿ. ಎಸ್ , ನಿರ್ದೇಶಕರು: ಪ್ರಕಾಶ್ ಕೆ.ಆರ್., ನಿರ್ದೇಶಕರು: ವಿಶ್ವನಾಥ ನಾಯಕ್, ನಿರ್ದೇಶಕರು: ವೆಂಕಟೇಶ ಎಂ.ಬಿ , ನಿರ್ದೇಶಕರು: ಸುನಿಲ್ ಕಾಮತ್ , ನಿರ್ದೇಶಕರು: ವಿಶ್ವನಾಥ ಕೆ.ಎಸ್., ನಿರ್ದೇಶಕರು: ಮಂಜುನಾಥ ಕೆ.ಜಿ , ನಿರ್ದೇಶಕರು: ಲಕ್ಷ್ಮೀ , ನಿರ್ದೇಶಕರು ಸುರೇಖಾ ಎಂ.ಎಂ , ನಿರ್ದೇಶಕರು: ಸರಸ್ವತಿ
– ಮಲೆನಾಡಿನ ಹೆಮ್ಮೆಯ ಸಂಸ್ಥೆ ಎಂಬ ಹೆಗ್ಗಳಿಕೆ!
2ನೇ ವರ್ಷದ ಸಂಭ್ರಮದಲ್ಲಿರುವ ಸಹಕಾರಿಗೆ ಮೊದಲ ವರ್ಷದ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಲಿದೆ. ಸುಮಾರು 250 ಶೇರುದಾರರನ್ನು ಹೊಂದಿರುವ ಸಂಸ್ಥೆ ಆಗುಂಬೆ ಹೋಬಲಿಯಲ್ಲಿ ಮೊದಲ ವರ್ತಕರ ಸೊಸೈಟಿಯಾಗಿದೆ. ವರ್ತಕರರ ಸಹಕಾರ ಹಾಗೂ ಜನಪ್ರತಿನಿಧಿಗಳು, ಗ್ರಾಮಸ್ಥರ ನೆರವಿನಿಂದ ಸಂಸ್ಥೆ ಸಾಧನೆಯತ್ತ ಹೆಜ್ಜೆ ಇಟ್ಟಿದೆ. ಈಗಾಗಲೇ 50 ಲಕ್ಷಕ್ಕೂ ಹೆಚ್ಚು ಸಾಲ ನೀಡುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತಿಸಲಾಗಿದೆ