ಕೆಲಸಕ್ಕೆ ಬಂದವರು ತಂದಿದ್ದ ಊಟ, ಮಾಡಿ 5000 ಕದ್ದ ಕಳ್ಳ!
– ತೀರ್ಥಹಳ್ಳಿ ಪಟ್ಟಣದಲ್ಲಿ ಘಟನೆ: ಜನರಿಂದ ಹಿಡಿದು ಧರ್ಮದೇಟು
ನದಿಯಲ್ಲಿ ಸಿಲುಕಿದ್ದ ವ್ಯಕ್ತಿ ರಕ್ಷಿಸಿದ ಪೊಲೀಸರು!
– ತೀರ್ಥಹಳ್ಳಿ ಪೊಲೀಸರ ಸೇವೆಗೆ ಜನರ ಮೆಚ್ಚುಗೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕಳ್ಳನೊಬ್ಬನನ್ನು ಜನರೇ ಹಿಡಿದು ಧರ್ಮದೇಟು ನೀಡಿರುವ ಘಟನೆ ಸೋಮವಾರ ನಡೆದಿದೆ.
ಛತ್ರಕೇರಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡದಲ್ಲಿ ಲೈಟಿಂಗ್ ಸಾಮಗ್ರಿ ಮತ್ತು ಕೆಲಸಕ್ಕೆ ಬಂದಿದ್ದ ಕೆಲಸದವರು ತಂದಿದ್ದ ಊಟ ಮಾಡಿ ಅವರ ಪ್ಯಾಂಟಿನಲ್ಲಿ ಇದ್ದ 5 ಸಾವಿರ ದುಡ್ಡು ಕದ್ದಿದ್ದಾನೆ. ಅವನ ಮೇಲೆ ಸಂಶಯ ಬಂದು ಅಲ್ಲೇ ಇರುವ ಗೂಡ್ಸ್ ಸ್ಟ್ಯಾಂಡ್ ಚಾಲಕರು ಇವನನ್ನು ಹಿಡಿದಿದ್ದಾರೆ. ಪೊಲೀಸರಿಗೆ ಒಪ್ಪಿಸಿದ್ದಾರೆ.
ನದಿಯಲ್ಲಿ ಸಿಲುಕಿದ್ದ ವ್ಯಕ್ತಿ ರಕ್ಷಿಸಿದ ಪೊಲೀಸರು!
ತೀರ್ಥಹಳ್ಳಿ: ತೀರ್ಥಹಳ್ಳಿ ಠಾಣಾ ವ್ಯಾಪ್ತಿಯ ಸಂಕದ ಹೊಳೆ ಎಂಬಲ್ಲಿ ಹೊಳೆಯಲ್ಲಿ ಹುಗಿದುಹೋಗಿದ್ದ ಅನಾಮದೇಯ ವ್ಯಕ್ತಿಯನ್ನು ತೀರ್ಥಹಳ್ಳಿ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಪೊಲೀಸ್ ಲೋಕೇಶ್ ಅವರು ನದಿಯಲ್ಲಿ ವ್ಯಕ್ತಿ ತೇಲುತ್ತಿದ್ದು, ನೀರಿಗೆ ಇಳಿದು ಆ ವ್ಯಕ್ತಿ ನೀರಿನ ಮರಳಿನಲ್ಲಿ ಸಿಕ್ಕಿಕೊಂಡಿದ್ದು ಆತನ ಪ್ರಾಣ ರಕ್ಷಿಸಿದ್ದಾರೆ. ಕೂಡಲೇ ದಡಕ್ಕೆ ಎಳೆದು ಪ್ರಥಮ ಚಿಕಿತ್ಸೆ ನೀಡಿ ಅಲ್ಲೇ ಕೆಲಸ ಮಾಡುತ್ತಿದ್ದ ಸಾರ್ವಜನಿಕರ ಸಹಾಯದಿಂದ 108 ಲಭ್ಯವಿಲ್ಲದ ಕಾರಣ ವಾಹನದಲ್ಲಿ ತಂದು ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಆಗುಂಬೆ ಪೊಲೀಸ್ ವ್ಯಾಪ್ತಿಯ ಸಾಧತ್ ಇದ್ದರು.