ಕಾಡಿನಲ್ಲಿ ಕದ್ದು ಕುಳಿತ ಕಳ್ಳ ಸಿಕ್ಕಿಬಿದ್ದ…!
– ಕಾಡಲ್ಲೇ ಅಡಗಿ ಕುಳಿತು ಯಾಮಾರಿಸುತ್ತಿದ್ದ ಕಳ್ಳ ಕಾಡಲ್ಲಿ ಸಿಕ್ಕಿಬಿದ್ದ…!
– ಕಳ್ಳನಿಗೆ ಒಬ್ಬ ಕಳ್ಳ ಅಸಿಸ್ಟೆಂಟ್ ಅಂತೆ…!
– ಮರಕ್ಕೆ ಕಟ್ಟುಹಾಕಿ ಸ್ಥಳೀಯರಿಂದ ಧರ್ಮದೇಟು…
NAMMUR EXPRESS NEWS – ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ವಾಟೆಮನೆ ಬಸ್ ನಿಲ್ದಾಣದ ಸಮೀಪದ ಮುಳುಬಾಗಿಲು ವ್ಯಾಪ್ತಿಗೆ ಒಳಪಡುವ ವಾಟೆಮನೆ ದೇವಸ್ಥಾನ ಕಳ್ಳತನ ಮಾಡಲು ಯತ್ನ ಮೂವರ ಕಳ್ಳರ ಬಂಧನ .
ವಾಟೆಮನೆ ದೇವಸ್ಥಾನದಲ್ಲಿ ಬೆಲೆಬಾಳುವ ಗಂಟೆ, ದೀಪ, ಕಾಣಿಕೆ ಹುಂಡಿ,ಪೂಜಾ ಸಾಮಗ್ರಿಗಳನ್ನ ಕಳ್ಳತನ ಮಾಡಲು ಮೂವರು ನಿನ್ನೆ ಹೊಂಚುಹಾಕಿ ಸಂಜೆಯ ಒಳಗೆ ರಾಜ ರೋಷವಾಗಿ ಬಂದಿದ್ದರು. ಸ್ಥಳೀಯರು ಅವರನ್ನು ಗಮನಿಸಿ ವಿಚಾರಿಸುವ ವೇಳೆ ಇಬ್ಬರು ಕಳ್ಳರು ಸಿಕ್ಕಾಕಿಕೊಂಡಿದ್ದರು. ಮರದ ಕಂಬಕ್ಕೆ ಕಟ್ಟಿಹಾಕಿ ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೆ ದೂರು ನೀಡಿದರು.
ಮರುದಿನ ಬೆಳಗ್ಗೆ ಕಾಡಿನಲ್ಲಿ ತಪ್ಪಿಸಿಕೊಂಡು ಹೋಗಿದ್ದ ಕಳ್ಳ ಬೆಳಗಿನಜಾವದ ಸಮಯದಲ್ಲಿ ಸಿಕ್ಕಿಬಿದ್ದ ಸ್ಥಳೀಯರಿಂದ ಧರ್ಮದೇಟು ತಿಂದಿದ್ದಾರೆ. ಕಳ್ಳರಲ್ಲಿ ಕಳ್ಳ ಒಬ್ಬ ಹೆಡ್ ಅಂತೆ ಅವನು ಹೇಳಿದ ಕಡೆಯಲ್ಲ ಕಳ್ಳತನ ಮಾಡಲು ಇವರು ಇಬ್ಬರು ಹೋಗ್ತಿದ್ರಂತೆ ಕಾಡಿನಲ್ಲಿ ಅವಿತು ಕುಳಿತು ಪ್ಲಾನ್ ಮಾಡ್ತಿದ್ರಂತೆ. ಹಲವು ದಿನಗಳಿಂದ ಮಲೆನಾಡಿನಲ್ಲಿ ಕಳ್ಳರ ಕಾಟ ಹೆಚ್ಚಾಗಿತ್ತು. ಭಯದ ವಾತಾವರಣದಲ್ಲಿದ್ದ ಮಲೆನಾಡಿನ ಜನತೆ ನಿಟ್ಟಿಸಿರು ಬಿಟ್ಟಿದ್ದಾರೆ.