ಕಿಮ್ಮನೆಗೆ ತಿರುಗೇಟು ಕೊಟ್ಟ ತೀರ್ಥಹಳ್ಳಿ ಬಿಜೆಪಿ!
– ಕಿಮ್ಮನೆಗೆ ಅವರ ಪಕ್ಷದಲ್ಲಿ ಅಭದ್ರತೆ ಕಾಣಿಸಿದೆ: ಬಿಜೆಪಿ ಅಧ್ಯಕ್ಷ ನವೀನ್ ಹೆದ್ದೂರು ಟಾಂಗ್
– ಜ್ಞಾನೇಂದ್ರ ಅವರ ಬಗ್ಗೆ ಕೀಳಾಗಿ ಮಾತನಾಡೋದು ಸರಿಯೇ?
NAMMUR EXPRESS NEWS
ತೀರ್ಥಹಳ್ಳಿ : 45 ರಿಂದ 50 ವರ್ಷಗಳ ಕಾಲ ಈ ಕ್ಷೇತ್ರಕ್ಕಾಗಿ ಆರಗ ಜ್ಞಾನೇಂದ್ರ ಬದುಕಿದ್ದಾರೆ. ತಮ್ಮ ಮನೆಗಾಗಿ ಬದುಕಿಲ್ಲ. ಕ್ಷೇತ್ರದ ಯೋಜನೆ ಬಗ್ಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಪ್ರಗತಿಗೆ ಕೆಲಸ ಮಾಡಿದ ಆರಗ ಜ್ಞಾನೇಂದ್ರರವರ ಬಗ್ಗೆ ತುಂಬಾ ಹಗುರವಾಗಿ ಮಾತನಾಡುತ್ತಾರೆ. ಆರಗ ಜ್ಞಾನೇಂದ್ರರವರು ಈ ಕ್ಷೇತ್ರದ ಪ್ರತಿ ಮನೆಯ ಮನವನ್ನು ತಲುಪಿದ್ದಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷರಾದ ನವೀನ್ ಹೆದ್ದೂರು ತಿಳಿಸಿದ್ದಾರೆ.
ತೀರ್ಥಹಳ್ಳಿ ಪಟ್ಟಣದ ಮಯೂರ ಹೋಟಲ ಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಿಮ್ಮನೆ ಅವರಿಗೆ ಅವರ ಪಕ್ಷದಲ್ಲಿ ಅಭದ್ರತೆ ಕಾಣಿಸಿದೆ ಎಂದು ಕಿಮ್ಮನೆ ರತ್ನಾಕರ್ ಗೆ ಟಾಂಗ್ ನೀಡಿದ್ದಾರೆ.
ಕಿಮ್ಮನೆ ರತ್ನಾಕರ್ ಗೆದ್ದಿದ್ದು ಅನುಕಂಪದಿಂದ ಕಿಮ್ಮನೆ ರತ್ನಾಕರ್ ಎರಡು ಬಾರಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಆದ್ರಲ್ಲಿ ಮೊದಲ ಬಾರಿ ಗೆದ್ದಿದ್ದು ಅನುಕಂಪದ ಆಧಾರದ ಮೇಲೆ, ಆಗಲು ಸಹ ಜ್ಞಾನೇಂದ್ರ ಅವರಿಗೆ ಕಡಿಮೆ ಮತ ಬಂದಿರಲಿಲ್ಲ,ಎರಡನೇ ಬಾರಿ ನಮ್ಮದೇ ಪಕ್ಷದಲ್ಲಿ ಮೂವರು ಸ್ಪರ್ಧೆ ಮಾಡಿದ್ದರು.ಆ ಕಾರಣದಿಂದ ನಾವು ಸೋಲಬೇಕಾಯಿತು, ರಾಜ್ಯದಲ್ಲಿ ಇವರನ್ನು ಮಂತ್ರಿ ಮಾಡಿದ್ದರು. ಬುದ್ದಿವಂತ, ಪ್ರಾಮಾಣಿಕ, ದಕ್ಷ ಮಂತ್ರಿ ಎಂದು ಇವರಿಗೆ ಇವರೇ ಹೇಳಿಕೊಳ್ಳುತ್ತಿದ್ದಾರೆ. ಮೂರು ಬಾರಿ ಪೇಪರ್ ಲೀಕ್ ಆಗಿತ್ತು,ಮಕ್ಕಳಿಗೆ ಕೊಡುವ ಸೈಕಲ್, ಟೆಸ್ಟ್ ಬುಕ್, ಶಿಕ್ಷಕರ ನೇಮಕಾತಿಯಲ್ಲೂ ಹಗರಣ ಆಗಿದೆ. ಇಷ್ಟಾದರೂ ಅವರ ಬಗ್ಗೆ ಯಾರು ಮಾತನಾಡುವ ಹಾಗಿಲ್ಲ, ಆದರೆ ಜ್ಞಾನೇಂದ್ರ ಅವರ ಬಗ್ಗೆ ತುಂಬಾ ಕೀಳಾಗಿ ಮಾತನಾಡುವುದು ಸರಿಯೇ ಎಂದು ಪ್ರಶ್ನೆ ಮಾಡಿದರು.
ಕಾಮಗಾರಿ ಕಳಪೆ?
ಜ್ಞಾನೇಂದ್ರ ಅವರ ಅವಧಿಯಲ್ಲಿ ಮಾಡಿದ ಕೆಲಸ ಕಾಮಗಾರಿಗಳು ಕಳಪೆಯಾಗಿದೆ ಎಂದು ಕಿಮ್ಮನೆ ಹೇಳುತ್ತಾರೆ, ಹಾಗೇನಾದರೂ ಕಾಮಗಾರಿಯಲ್ಲಿ ಕಳಪೆ ಆಗಿದ್ದರೆ ತನಿಖೆ ಮಾಡಿ, ಜ್ಞಾನೇಂದ್ರ ಅವರ ವ್ಯಕ್ತಿತ್ವದ ಬಗ್ಗೆ ಅಸೂಹೆ ಹುಟ್ಟಿದೆ ಎಂದರು.
ನಾಗಮಂಗಲದಲ್ಲಿ ಆದ ಕೋಮುಗಲಭೆಗೆ ಬಿಜೆಪಿ ಕಾರಣ ಎಂದು ಕಿಮ್ಮನೆ ಹೇಳಿದ್ದಾರೆ, ಚನ್ನಪಟ್ಟಣದಲ್ಲಿ ಚುನಾವಣೆ ಗೆಲ್ಲಲು ಹೀಗೆ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಮಾತನಾಡಿದರೆ ಪ್ರಚೋದನೆ ಅನ್ನುತ್ತಾರೆ ಮಾತನಾಡಿಲ್ಲ ಎಂದರೆ ಧರ್ಮ ಅಲ್ಲ. ಯಾರ ಬಳಿ ಇತ್ತು, ಪೆಟ್ರೋಲ್ ಬಾಂಬ್, ಕಲ್ಲು, ಆದರೆ ಇವರು ಆರೋಪಿಗಳನ್ನು ಮಾಡಿದ್ದು ಗಣಪತಿ ಇಟ್ಟವರನ್ನು,ಇದು ತುಷ್ಟಿಕರಣ ಅಲ್ಲವೇ? ಎಂದು ಪ್ರಶ್ನೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಶೋಕಮೂರ್ತಿ, ೊಪ್ಪುಗು್ಡೆ ರಾಘವೇಂದ್ರ, ಸಂದೇಶ್ ಜವಳಿ, ಕುಕ್ಕೆ ಪ್ರಶಾಂತ್, ಸಂತೋಷ್ ದೇವಾಡಿಗ ಉಪಸ್ಥಿತರಿದ್ದರು.