ತೀರ್ಥಹಳ್ಳಿ ಬಸ್ ನಿಲ್ದಾಣ ಗಣೇಶ ವಿಸರ್ಜನೆಗೆ ಜನವೋ ಜನ!
– ಇಡೀ ಪಟ್ಟಣದಲ್ಲಿ ಮೆರವಣಿಗೆ: ನೃತ್ಯ, ವಿವಿಧ ವೇಷಭೂಷಣ
– 9 ದಿನಗಳ ಕಾಲ ಅದ್ದೂರಿ ಕಾರ್ಯಕ್ರಮ: ಜನರ ಡಾನ್ಸ್ ಡಾನ್ಸ್
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಬಸ್ ನಿಲ್ದಾಣದಲ್ಲಿ ಗಣೇಶೋತ್ಸವ 9 ದಿನಗಳ ಕಾಲ ಅತ್ಯಂತ ಸಡಗರ ಸಂಭ್ರಮದಿಂದ ನೆರವೇರಿತು. ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆವರೆಗೆ ಯಾವುದೇ ಗಲಾಟೆ, ಗದ್ದಲ ಇಲ್ಲದೆ ಶಾಂತಿಯುತವಾಗಿ ಆಚರಣೆ ಮಾಡಲಾಯಿತು.
ಶುಕ್ರವಾರ ಸಂಜೆ ಲೋಕನಾಥ್ ಆರ್ಕೆಸ್ಟ್ರಾ ಸಾವಿರಾರು ಜನರ ಮನ ಸೆಳೆಯಿತು. ಹಾಡು, ನೃತ್ಯಕ್ಕೆ ಸೇರಿದ್ದ ಜನರು ಹೆಜ್ಜೆ ಹಾಕಿದರು.
ಶನಿವಾರ ಮಧ್ಯಾಹ್ನ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಸಂಜೆ ತೀರ್ಥಹಳ್ಳಿ ಕಲಾವಿದರಿಂದ ನೃತ್ಯ ಕಾರ್ಯಕ್ರಮ ನಡಯಿತು. ರತಿ ದನ ವಿಶೇಷ ಪೂಜೆ ಅಲಂಕಾರ ಮಾಡಲಾಯಿತು. ಇಡೀ ಬಸ್ ನಿಲ್ದಾಣ ವಿದ್ಯುತ್ ದೀಪದ ಅಲಂಕಾರದಿಂದ ಮಿಂದೆದ್ದಿತು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರದೀಪ್ ಮತ್ತು ಎಲ್ಲಾ ಏಜೆಂಟರು, ಬಸ್ ನಿಲ್ದಾಣ ಸುತ್ತಮುತ್ತಲಿನ ಎಲ್ಲಾ ಸ್ನೇಹಿತರು, ವ್ಯಾಪಾರಿಗಳು, ದಾನಿಗಳು ಕೈಜೋಡಿಸಿದ್ದರು.
ಸೆ.15ರಂದು ಮಧ್ಯಾಹ್ನದಿಂದ ಅದ್ದೂರಿ ಗಣೇಶ ವಿಸರ್ಜನೆ ಕಾರ್ಯಕ್ರಮ ರಾಜ ಬೀದಿ ಉತ್ಸವದೊಂದಿಗೆ ಪಟಾಕಿ, ಡಿಜೆ, ವಿವಿಧ ಕಾರ್ಯಕ್ರಮಗಳ ಜತೆಗೆ ನಡೆಯಿತು. ಪಟ್ಟಣದ ಸಾವಿರಾರು ಮಂದಿ ಕುಣಿದು ಕುಪ್ಪಳಿಸಿದರು. ಮಧ್ಯರಾತ್ರಿ ವೇಳೆಗೆ ತುಂಗಾ ನದಿಯಲ್ಲಿ ಗಣೇಶ ವಿಸರ್ಜನೆ ಮಾಡಲಾಯಿತು. ಸಹಕಾರ ನೀಡಿದ ಸರ್ವರಿಗೂ ಬಸ್ ಸ್ಟಾಂಡ್ ಗಣೇಶೋತ್ಸವ ಸಮಿತಿ ಅಭಿನಂದನೆ ಸಲ್ಲಿಸಿದೆ.