ತೀರ್ಥಹಳ್ಳಿ ಟಿಎಪಿಸಿಎಂಎಸ್ ಜಿಲ್ಲೆಗೆ ನಂಬರ್ 1
– ಸೆ.2 ರಂದು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸರ್ವ ಸದಸ್ಯರ ಸಭೆ
– ಏಳು ಬೀಳುಗಳ ನಡುವೆ ಪ್ರಗತಿ ಹೆಜ್ಜೆ: ಸಂಘದ ಅಧ್ಯಕ್ಷನಾಗರಾಜ್ ಶೆಟ್ಟಿ
NAMMUR EXPRESS NEWS
ತೀರ್ಥಹಳ್ಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸಂಸ್ಥೆ ಅನೇಕ ಏಳು ಬೀಳುಗಳನ್ನು ಕಂಡು ಕೆಲಸ ನಿರ್ವಹಿಸುತ್ತಿದೆ. ನಮ್ಮ ಸಂಘ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ. ಸಂಘದ ಜೊತೆಗೆ ಸಮುದಾಯ ಭವನ ಮಾಡಿಕೊಂಡು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಸಂಘದ ಅಧ್ಯಕ್ಷರಾದ ನಾಗರಾಜ್ ಶೆಟ್ಟಿ ಹೇಳಿದ್ದಾರೆ. ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸೆ.2 ರಂದು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಯಲಿದೆ. ಸಂಘದಲ್ಲಿ 2022-23 ನೇ ಸಾಲಿನ ವರ್ಷದ ಅಂತ್ಯಕ್ಕೆ ವಿವಿಧ ಸಂಸ್ಥೆಗಳಲ್ಲಿ 9.60.000.00 ಮೌಲ್ಯದ ಷೇರುಗಳನ್ನು ಬ್ಯಾಂಕ್ ಗಳಲ್ಲಿ 2.91.36.184 ರೂ ಗಳ ಠೇವಣಿಗಳನ್ನು ಹೊಂದಿದ್ದು ಒಟ್ಟಾರೆ 3.00.96.184 ರೂ ಗಳ ಹೂಡಿಕೆಯನ್ನು ಹೊಂದಿದೆ ಎಂದರು.
ಟಿಎಪಿಸಿಎಂಎಸ್ ಗೆ ರೈತರೇ ಆಧಾರ ಸ್ಥಂಭ. ಇಲ್ಲಿನ ರೈಸ್ ಮಿಲ್ ಕೂಡ ರೈತರಿಗೆ ಅನುಕೂಲವಾಗಲು ರೈತರ ಭತ್ತವನ್ನು ಖರೀದಿ ಮಾಡಿ ಅಕ್ಕಿಯನ್ನು ವಾಪಾಸ್ ಕೊಡುತ್ತೇವೆ. ಸಂಘದ ಸದಸ್ಯರ ಕೃಷಿಗೆ ಅವಶ್ಯಕತೆ ಇರುವ ರಾಸಾಯನಿಕ ಗೊಬ್ಬರ, ಉತ್ತಮ ಬೀಜ, ಕ್ರಿಮಿನಾಶಕಗಳು, ವ್ಯವಸಾಯ ಉಪಕರಣಗಳು ಖರೀದಿಸಿ ರೈತರಿಗೆ ಮಾರಾಟ ಮಾಡುತ್ತೇವೆ ಎಂದರು.
ಸಹಕಾರಿ ನಾಯಕರಾದ ವಿಜಯದೇವ್, ಮಂಜಪ್ಪ ಗೌಡ, ತಾರಾನಾಥ್, ಕಾರ್ಯದರ್ಶಿ ರಚನಾ ಸೇರಿ ಹಲವರು ಉಪಸ್ಥಿತರಿದ್ದರು