ಜಾತ್ರೆಗೆ ಬರಲಿದ್ದಾರೆ ಕಳ್ಳರು ಎಚ್ಚರ ಎಚ್ಚರ!
– ತೀರ್ಥಹಳ್ಳಿ ಪೊಲೀಸರಿಂದ ಎಚ್ಚರಿಕೆಯ ಸೂಚನೆ
– ಎಲ್ಲಾ ಕಡೆ ಸಿಸಿ ಟಿವಿಯ ಕಣ್ಗಾವಲು
– ಜಾತ್ರೆಯಲ್ಲಿ ಮೊಬೈಲ್, ಹಣ, ಚಿನ್ನಾಭರಣಗಳ ಮೇಲೆ ಎಚ್ಚರ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಎಳ್ಳಮಾವ್ಯಾಸೆ ಜಾತ್ರೆಗೆ ಸುಮಾರು 5 ಲಕ್ಷಕ್ಕೂ ಹೆಚ್ಚು ಜನ ಆಗಮಿಸುವ ಕಾರಣ ಈ ಬಾರಿ ಪೊಲೀಸ್ ಇಲಾಖೆ ಖಡಕ್ ಸೂಚನೆ ನೀಡಿದೆ. ನದಿಗೆ ಇಳಿಯದಂತೆ ಕ್ರಮ ಕೈಗೊಳ್ಳುವ ಜೊತೆಗೆ ಸೂಚನೆ ನೀಡಲಾಗಿದೆ. ತೀರ್ಥಹಳ್ಳಿಯಲ್ಲಿ ತೆಪ್ಪೋತ್ಸವ ಹಾಗೂ ಜಾತ್ರೆಯ ಸಂದರ್ಭದಲ್ಲಿ ಅನೇಕ ಬಾರಿ ಮೊಬೈಲ್ ಹಣ ಹಾಗೂ ಚಿನ್ನಾಭರಣ ಕಳವು ಪ್ರಕರಣ ದಾಖಲಾಗುತ್ತಿತ್ತು. ಈ ಬಾರಿ ಅತಿ ಹೆಚ್ಚು ಜನ ಸೇರುವುದರಿಂದ ಪೊಲೀಸ್ ಇಲಾಖೆ ಜನರಿಗೆ ಮಾಹಿತಿ ನೀಡಿದೆ ಜೊತೆಗೆ ಅಂತವರು ಕಂಡು ಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ 112 ನಂಬರ್ ಅನ್ನ ಕೂಡ ನೀಡಲಾಗಿದೆ. ಜೊತೆಗೆ ಪೊಲೀಸ್ ಇಲಾಖೆ ಸಂಚಾರ ನಿಯಮವನ್ನು ಪಾಲಿಸಲು ಕಡ್ಡಾಯ ನಿಯಮವನ್ನು ಸೂಚಿಸಲಾಗಿದೆ, ಇಲ್ಲವಾದಲ್ಲಿ ದಂಡವನ್ನು ಹಾಕಲು ತೀರ್ಮಾನಿಸಲಾಗಿದೆ. ರಥಬೀದಿಯಲ್ಲಿ ಯಾವುದೇ ವಾಹನಗಳನ್ನ ಡಿಸೆಂಬರ್ 29 ರಿಂದ ಸಂಚಾರ ನಿರ್ಬಂಧಿಸಲಾಗಿದೆ. ಇನ್ನು ಛತ್ರಕೇರಿಯ ಒಳಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ರಥ ಬೀದಿಯ ಒಳಗೆ ಯಾವುದೇ ವಾಹನಗಳನ್ನು ತರದಂತೆ ನಿರ್ಬಂಧಿಸಲಾಗಿದೆ.
ಕಳ್ಳರ ಮೇಲೆ ಪೊಲೀಸ್ ಇಲಾಖೆ!
ಪೊಲೀಸ್ ಇಲಾಖೆ ಕಳ್ಳರ ಮೇಲೆ ಕಣ್ಣಿಟ್ಟಿದ್ದು ಜಾತ್ರೆಯಲ್ಲಿ ಮಾರುವೇಷದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ತೀರ್ಥಹಳ್ಳಿ ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸುಭದ್ರತೆ ವಹಿಸಲಾಗಿದೆ. ಯಾವುದೇ ಗಲಾಟೆ ಘರ್ಷಣೆಗಳಿಗೆ ಅವಕಾಶ ಮಾಡಿಕೊಟ್ಟಲ್ಲಿ ಕಾನೂನು ನಿಯಮಗಳ ಪ್ರಕಾರ ಅವರನ್ನ ಬಂಧಿಸಲು ಪೋಲಿಸ್ ಇಲಾಖೆ ನಿರ್ಧರಿಸಿದೆ. ಜೊತೆಗೆ ಈ ಬಗ್ಗೆ ಯಾವುದೇ ಮಾಹಿತಿಗಳು ಇದ್ದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಸಿಸಿಟಿವಿ ಕಣ್ಗಾವಲು: ಎಲ್ಲೆಡೆ ಅಲರ್ಟ್
ತೀರ್ಥಹಳ್ಳಿ ಪಟ್ಟಣದ ರಥಬೀದಿಯ ಪ್ರತಿ ಅಂಗಡಿ ಸುತ್ತಮುತ್ತ ಸೇರಿದಂತೆ ಪಟ್ಟಣದ ಬಹುತೇಕ ಕಡೆ ಸಿಸಿಟಿವಿ ಕಣ್ಗಾವಲು ಹಾಕಲಾಗಿದೆ. ಸುಮಾರು ನೂರಾರು ಕ್ಯಾಮರಾಗಳನ್ನು ಅಳವಡಿಸಲಾಗಿದ್ದು. ತೀರ್ಥಹಳ್ಳಿಯ ಪ್ರಸಿದ್ಧ ಕ್ಯಾಮರಾ ಸಂಸ್ಥೆಯಾದ ಅನಿಲ್ ಕುಮಾರ್ ಅವರ ತುಂಗಾ ಕಂಪ್ಯೂಟರ್ ಅನಿಕುಮಾರ್ ಈ ಸೇವೆಯನ್ನು ಮಾಡುತ್ತಿದೆ. ಹೀಗಾಗಿ ಜನರು ಎಚ್ಚರ ವಹಿಸಬೇಕಾಗಿ ಮನವಿ ಮಾಡಲಾಗಿದೆ.
ಜಾತ್ರೆಯ ಎಲ್ಲಾ ಸುದ್ದಿಗಳು ಹಾಗೂ ವಿಡಿಯೋಗಳನ್ನ ನಮ್ಮೂರ್ ಎಕ್ಸ್ ಪ್ರೆಸ್ ಯೂಟ್ಯೂಬ್ ಚಾನಲ್ ನಲ್ಲಿ ನೇರ ಪ್ರಸಾರ ಮಾಡಲಿದೆ.