ಎಳ್ಳಮಾವ್ಯಾಸೆ ಜಾತ್ರೆಯಲ್ಲಿ ಬಲ್ಬ್, ವೈರ್ ಕದ್ದ ಕಳ್ಳರು!
– 30,000ಕ್ಕೂ ಹೆಚ್ಚು ಮೌಲ್ಯದ ಲೈಟಿಂಗ್ಸ್ ಕಳುವು, ಪೊಲೀಸ್ ಠಾಣೆಯಲ್ಲಿ ದೂರು
– ಜನರೇ ಎಚ್ಚರ ನಿಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಗಮನಿಸಿ
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯ ಪ್ರಸಿದ್ಧ ಎಳ್ಳಮಾವಾಸ್ಯೆ ಜಾತ್ರೆ ಶುರುವಾಗಿದ್ದು ಈಗಾಗಲೇ ಸಾವಿರಾರು ಮಂದಿ ಜಾತ್ರೆಗೆ ಆಗಮಿಸುತ್ತಿದ್ದಾರೆ. ಈ ನಡುವೆ ಕಳೆದ 2 ದಿನಗಳಲ್ಲಿ ವಿದ್ಯುತ್ ಬಲ್ಬ್ ಸೇರಿದಂತೆ ಅಲಂಕಾರ ಮಾಡಿದ ಲೈಟಿಂಗ್ಸ್ ಅನ್ನ ಕಳುವು ಮಾಡಲಾಗಿದೆ. ಈ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ದೂರು ದಾಖಲಾಗಿದ್ದು. ಇಬ್ಬರನ್ನು ವಿಚಾರಣೆ ಕೂಡ ನಡೆಸಲಾಗಿದೆ.
ಜಾತ್ರೆಯ ಒಳಗೆ ಕಳ್ಳರಿದ್ದಾರೆ ಹುಷಾರು!
ಜಾತ್ರೆಯ ಒಳಗೆ ಕಳ್ಳರು ಇದ್ದು ಜನರು ಎಚ್ಚರ ವಹಿಸಬೇಕು. ಜೊತೆಗೆ ತಮ್ಮ ಮೊಬೈಲ್, ಚಿನ್ನಾಭರಣಗಳು ಹಾಗೂ ಹಣದ ಬಗ್ಗೆ ಗಮನಹರಿಸಬೇಕು. ಜೊತೆಗೆ ಅಂಗಡಿಗಳಲ್ಲಿ ತಮ್ಮ ಅಮೂಲ್ಯವಾದ ವಸ್ತುಗಳ ಬಗ್ಗೆ ಗಮನಿಸಬೇಕು ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಕಳ್ಳರ ಬಗ್ಗೆ ಮಾಹಿತಿ ಇದ್ದಲ್ಲಿ.. 112 ಸಂಪರ್ಕಿಸಿ.