ತೀರ್ಥಹಳ್ಳಿಯಲ್ಲಿ ಅ.12ರ ಸಂಜೆ ಹುಲಿ ವೇಷ ಸ್ಪರ್ಧೆ!
– ಹೆಣ್ಣು ಹುಲಿಗಳ ನರ್ತನ, ಗಂಡು ಹುಲಿಗಳ ಘರ್ಜನೆ
– ರಾಜ್ಯ ಮಟ್ಟದ ಹುಲಿವೇಷ ಸ್ಪರ್ಧೆ: ಆಕರ್ಷಕ ಬಹುಮಾನ
– ಸರ್ವರಿಗೂ ಸ್ವಾಗತ: ಹುಲಿವೇಷ ವಿಶೇಷ ಆಕರ್ಷಣೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಅ.12ರ ಸಂಜೆ ರಾಜ್ಯ ಮಟ್ಟದ ಹುಲಿ ವೇಷ ಸ್ಪರ್ಧೆ ನಡೆಯಲಿದ್ದು, ಹೆಣ್ಣು ಹುಲಿಗಳ ನರ್ತನ, ಗಂಡು ಹುಲಿಗಳ ಘರ್ಜನೆ ಗಮನ ಸೆಳೆಯಲಿದೆ. ರಾಜ್ಯ ಹುಲಿವೇಷ ಸ್ಪರ್ಧೆ ತೀರ್ಥಹಳ್ಳಿಗೆ ವಿಶೇಷ ಆಕರ್ಷಣೆಯಾಗಲಿದೆ.
ಅಕ್ಟೋಬರ್ 12ರ ಶನಿವಾರ ಸಂಜೆ ತೀರ್ಥಹಳ್ಳಿ ಸಂಸ್ಕೃತಿ ಮಂದಿರದ ಆವರಣದಲ್ಲಿ ಹುಲಿ ನರ್ತನದ ರೋಮಾಂಚನ ಅನುಭವ ಹಂಚಿಕೊಳ್ಳುವ ಅವಕಾಶವನ್ನು ಗೆಳೆಯರ ಬಳಗ ಒದಗಿಸಿಕೊಟ್ಟಿದೆ.
ತೀರ್ಥಹಳ್ಳಿ ದಸರಾದ ವಿಶೇಷ ಆಕರ್ಷಣೆಯಾಗಿ ಮಲೆನಾಡಿನ ಪರಂಪರೆ ವೀರ ಕಲೆ ಹುಲಿ ಕುಣಿತ ರಾಜ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ.
ಆಯ್ದ 20 ಪುರುಷ ಹುಲಿ ತಂಡಗಳು ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದು ಗಂಡು ಕಲೆ ಹುಲಿ ಕುಣಿತದಿಂದ ಜನರನ್ನು ಮನರಂಜಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಣ್ಣು ಹುಲಿಗಳ ಅಮೋಘ ನೃತ್ಯ ಸಾರ್ವಜನಿಕರ ಕಣ್ಮನ ಸೆಳೆಯಲಿದೆ.
ಕಾರ್ಯಕ್ರಮದ ಯಶಸ್ಸಿಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರಿ ಧುರೀಣ ಆರ್.ಎಮ್.ಮಂಜುನಾಥ್ ಗೌಡ, ಸಮಾಜ ಸೇವಕ ಆರ್ .ಮದನ್, ಪುರಪಂಚಾಯ್ತಿ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಗೌರವ ಅಧ್ಯಕ್ಷರುಗಳಾಗಿರುವ ಸಮಿತಿಯನ್ನು ರಚಿಸಲಾಗಿದೆ. ಶ್ರೀ ರಾಮೇಶ್ವರ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷರಾದ ಡಿ.ಎಸ್.ವಿಶ್ವನಾಥ್ ಶೆಟ್ಟಿ ಗೆಳೆಯರ ಬಳಗದ ಅಧ್ಯಕ್ಷರಾಗಿದ್ದಾರೆ. ಡಾ.ಟಿ.ಎಲ್ ಸುಂದರೇಶ್, ಗ್ಯಾರಂಟಿ ಸಮಿತಿಯ ಅಧ್ಯಕ್ಷರು ನಾಬಳ ಶಚೀಂದ್ರ ಹೆಗ್ಡೆ, ತುಳುನಾಡು ಸಿರಿ ಸೌಹಾರ್ದ ಅಧ್ಯಕ್ಷ ಬಿ.ಆರ್. ರಾಘವೇಂದ್ರ ಶೆಟ್ಟಿ. ಯುವ ಮುಖಂಡ ಅಮರನಾಥ ಶೆಟ್ಟಿ, ಬೀಸು ರಂಜನ್ ಕುಮಾರ್ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಸುಮಂತ (ಚಿಂಚು), ವಿಕ್ರಂ ಶೆಟ್ಟಿ ಸಂಚಾಲಕರಾಗಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.
ಹುಲಿ ವೇಷ ಸ್ಪರ್ಧೆಗೆ ವೇದಿಕೆ ಸಜ್ಜು!
ಪುರಪಂಚಾಯ್ತಿ ಕಛೇರಿ ಆವರಣದಲ್ಲಿ ಸುಸಜ್ಜಿತ ಹಾಗೂ ಆಕರ್ಷಕ ವೇದಿಕೆಯಲ್ಲಿ ಹುಲಿ ಕುಣಿತ ಸ್ಪರ್ಧೆ ಮತ್ತು ಹೆಣ್ಣು ಹುಲಿ ಪ್ರದರ್ಶನ ನಡೆಯಲಿದೆ. ತೀರ್ಥಹಳ್ಳಿಯ ಸಮಾನ ಮನಸ್ಥರು ಸೇರಿ ಗೆಳೆಯರ ಬಳಗದ ಸಂಘಟನೆಯಲ್ಲಿ ರಾಜ್ಯ ಹುಲಿವೇಷ ಸ್ಪರ್ಧೆ ಏರ್ಪಡಿಸಿದ್ದು ಪ್ರಥಮ ಬಹುಮಾನ 33,333 ರೂ, ದ್ವಿತೀಯ ಬಹುಮಾನ 22,222 ರೂ, ತೃತೀಯ ಬಹುಮಾನ 11,111 ರೂ ಇದೆ.
ಮಳೆ ಅಡ್ಡಿಯಾಗದಂತೆ ರಾಮೇಶ್ವರನಿಗೆ ಪೂಜೆ!
ರಾಜ್ಯ ಮಟ್ಟದ ಹುಲಿ ವೇಷ ಸ್ಪರ್ಧೆಗೆ ಯಾವುದೇ ಅಡ್ಡಿ ಆತಂಕ ಮತ್ತು ಮಳೆಯ ತೊಂದರೆ ಅಗದಿರಲಿ ಎಂದು ತೀರ್ಥಹಳ್ಳಿ ಶ್ರೀ ರಾಮೇಶ್ವರ ಸ್ವಾಮಿ ಸನ್ನಿದಾನದಲ್ಲಿ ಹುಲಿ ಹೆಜ್ಜೆ ಗೆಳಯರ ಬಳಗ ಅಧ್ಯಕ್ಷರಾದ ಡಿ ಎಸ್ ವಿಶ್ವನಾಥ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಲಾಯಿತು.
ಸಂಚಾಲಕರಾದ ಸುಮಂತ್, ವಿಕ್ರಮ್ ಶೆಟ್ಟಿ, ಸಹಸಂಚಾಲಕರು ಕುರುವಳ್ಳಿ ನಾಗರಾಜ್, ಪ್ರಶೋದ್ ಶೆಟ್ಟಿ, ಶ್ರೀಕಾಂತ್ ಬೆಟ್ಟಮಕ್ಕಿ ಕಾರ್ತಿಕ್ ಗೌಡ, ಸಂದೀಪ್ ಶೆಟ್ಟಿ, ಸದಾಶಿವ ದೇವಾಡಿಗ ಜೊತೆಯಲ್ಲಿ ಇದ್ದರು.