ಸಾವಿರಾರು ಭಕ್ತರಿಂದ ತೀರ್ಥಸ್ನಾನ..!
– ಮುಂಜಾನೆಯಿಂದಲೇ ಸರದಿಯಲ್ಲಿ ನಿಂತು ತೀರ್ಥ ಸ್ನಾನ
– ಹೊರ ಊರುಗಳಿಂದಲೂ ಭಕ್ತಾದಿಗಳ ಆಗಮನ
– ಗಮನ ಸೆಳೆಯುತ್ತಿದೆ ತುಂಗಾ ತೀರದ ಆದಿ ಯೋಗಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಯ ಮೊದಲ ದಿನದ ಆರಂಭವಾಗಿದೆ. ಎಳ್ಳಮಾ ವಾಸ್ಯೆಯಂದು ಸಾವಿರಾರು ಭಕ್ತರು ತುಂಗಾ ನದಿಯ ರಾಮಕುಂಡದಲ್ಲಿ ತೀರ್ಥಸ್ನಾನ ಮಾಡಿ ಪುನೀತರಾದರು. ಮುಂಜಾನೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು ನಡೆದಿದ್ದು ತೀರ್ಥಹಳ್ಳಿ ಮಾತ್ರವಲ್ಲದೆ ಹೊರ ಊರುಗಳಿಂದ ಕೂಡ ಭಕ್ತರು ಆಗಮಿಸಿ ದರ್ಶನ ಪಡೆದರು. ತುಂಗಾನದಿಯಲ್ಲಿ ಬೆಳಗಿನ ಜಾವ 5 ಗಂಟೆಗೆ ಶ್ರೀರಾಮೇಶ್ವರ ದೇವರಿಗೆ ಸಂಪ್ರೊಕ್ಷಣೆ, ಪೂಜಾ ಕಾರ್ಯದ ನಂತರ ಸಾವಿರಾರು ಭಕ್ತರು ರಾಮಕೊಂಡದಲ್ಲಿ ತೀರ್ಥಸ್ನಾನ ಮಾಡಿದರು. ತುಂಗಾನದಿಯ ಸುತ್ತಮುತ್ತ ಬಿಗಿ ಪೊಲೀಸ್ ಹಾಗೂ ಗೃಹರಕ್ಷಕ ದಳದ ಭದ್ರತೆ ಆಯೋಜನೆ ಮಾಡಲಾಗಿದೆ.
ತೀರ್ಥಸ್ನಾನದ ಶ್ರೀರಾಮ ಕುಂಡಕ್ಕೆ ತಹಶೀಲ್ದಾರ್ ರಂಜಿತ್ ಎಸ್,, ಸಮಿತಿ ಪ್ರಮುಖರಾದ ಸೊಪ್ಪುಗುಡ್ಡೆ ರಾಘವೇಂದ್ರ, ಸುಂದರೇಶ್, ಲಯನ್ಸ್ ಪಾಂಡುರಂಗಪ್ಪ ಸೇರಿ ಎಲ್ಲಾ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಪ್ರಮುಖರು ಇದ್ದರು. ಶ್ರೀರಾಮೇಶ್ವರ ದೇವಾಲಯದ ಪಕ್ಕದಲ್ಲಿ ಎಲ್ಲಾ ಭಕ್ತಾದಿಗಳಿಗೂ ಪ್ರತಿದಿನ ಅನ್ನಸಂತರ್ಪಣೆ ನಡೆಯಲಿದೆ
ಗಮನ ಸೆಳೆಯುತ್ತಿದೆ ತುಂಗಾ ತೀರದ ಆದಿ ಯೋಗಿ!
ತುಂಗಾ ತೀರದಲ್ಲಿ ಬೆಳಕಿನ ನಡುವೆ ಸುಂದರ ದೃಶ್ಯಗಳು ಗಮನ ಸೆಳೆಯುತ್ತಿದೆ. ಈ ವರ್ಷ ಆದಿ ಯೋಗಿ ಬೆಳಕಿನ ಅಲಂಕಾರ, ಸೇತುವೆ ಎಲ್ಲರ ಮೆಚ್ಚುಗೆ ಗಳಿಸಿದೆ.