ಟಾಪ್ ನ್ಯೂಸ್ ತೀರ್ಥಹಳ್ಳಿ
– ಪ್ರಥಮ ರ್ಯಾಂಕ್ ಪಡೆದ ಕೋಣಂದೂರಿನ ನವ್ಯಶ್ರೀ ಹೆಚ್.ಎನ್
– ಜ.25ಕ್ಕೆ ಶ್ರೀ ಸಂಧ್ಯಾ ಮಂಟಪ ಸಿದ್ಧೇಶ್ವರ ಸ್ವಾಮಿ ಜೀರ್ಣೋದ್ಧಾರ ಸಲುವಾಗಿ ಆರೂಢ ಪ್ರಶ್ನೆ
– ಜ. 25ಕ್ಕೆ ಕೋಣಂದೂರಲ್ಲಿ ಅಡುಗೆ ಮಾತು ನಾಟಕ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ-ಬಾಳೇಬೈಲು ಸಿದ್ದೇಶ್ವರ ಬೆಟ್ಟದಲ್ಲಿ ಬಹಳ ಪುರಾತನ ಕಾಲದಿಂದಲೂ ನೆಲೆನಿಂತು ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ನೆಲೆ ನಿಂತಿರುವ ಶ್ರೀ ಸಂಧ್ಯಾ ಮಂಟಪ ಸಿದ್ಧೇಶ್ವರ ಸ್ವಾಮಿ ಜೀರ್ಣೋದ್ಧಾರ ಸಲುವಾಗಿ ಭಕ್ತಾದಿಗಳ ಕೋರಿಕೆಯಂತೆ ಶ್ರೀ ಲಕ್ಷ್ಮೀಶ್ ತಂತ್ರಿಗಳ ಮಾರ್ಗದರ್ಶನದಲ್ಲಿ ಶ್ರೀ ಕುಮಾರ ಗುರು ತಂತ್ರಿಗಳ ಮೂಲಕ ಜ. 25ನೇ ಶನಿವಾರ ಬೆಳಿಗ್ಗೆ 9-30 ರಿಂದ ಶ್ರೀ ಸಿದ್ಧೇಶ್ವರ ಸಭಾಭವನದಲ್ಲಿ ಆರೂಢ ಪ್ರಶ್ನೆಯನ್ನು ಆಯೋಜಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಕಾಲಕ್ಕೆ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಈ ಮೂಲಕ ಶ್ರೀ ಸಿದ್ದೇಶ್ವರ ಸ್ವಾಮಿ ಸೇವಾ ಸಮಿತಿ, ಬಾಳೇಬೈಲು – ಸಿದ್ಧೇಶ್ವರ ಬಡಾವಣೆ, ತೀರ್ಥಹಳ್ಳಿ ವಿನಂತಿಕೊಂಡಿದ್ದಾರೆ.
ಪ್ರಥಮ ರ್ಯಾಂಕ್ ಪಡೆದ ಕೋಣಂದೂರಿನ ನವ್ಯಶ್ರೀ ಹೆಚ್.ಎನ್
ತೀರ್ಥಹಳ್ಳಿ: ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ 34ನೇ ವಾರ್ಷಿಕ ಘಟಿಕೋತ್ಸವದಲ್ಲಿ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ನವ್ಯಶ್ರೀ ಹೆಚ್ ಎನ್ BSC (hons) ನಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಗಳಿಸಿರುತ್ತಾರೆ. ಕೋಣಂದೂರು ಸಮೀಪದ ಹಿತ್ತಲಸರದ ನಾಗರಾಜ್ ಮತ್ತು ನಳಿನಿ ದಂಪತಿಗಳ ಪುತ್ರಿಯಾಗಿರುವ ನವ್ಯಶ್ರೀ BSC (hons) ನಲ್ಲಿ ಪ್ರಥಮ ರ್ಯಾಂಕ್ ಗಳಿಸಿ ತಾಲೂಕಿಗೆ ಹೆಮ್ಮೆ ತಂದಿದ್ದಾರೆ.
ಜ. 25ಕ್ಕೆ ಕೋಣಂದೂರಲ್ಲಿ ಅಡುಗೆ ಮಾತು ನಾಟಕ
ಕೋಣಂದೂರು: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್, ಇನ್ನರ್ ವೀಲ್ ಕ್ಲಬ್, ಜೇಸಿಐ ಸೃಷ್ಠಿ, ಸಹೃದಯ ಬಳಗ ಕೋಣಂದೂರು ಇವರ ಸಮ್ಮಿಲನ ಕಾರ್ಯಕ್ರಮದಲ್ಲಿ ಅಕ್ಷತಾ ಪಾಂಡವಪುರ ರವರ “ಅಡುಗೆ ಮಾತು”( ಕತೆ ಕಟ್ಟುತ್ತಾ, ಕತೆ ಹೇಳುತ್ತಾ ಅಡುಗೆ ಮಾಡುವ ಅಪರೂಪದ ನಾಟಕ ಪ್ರದರ್ಶನ ಜ 25ರ ಸಂಜೆ 6ಕ್ಕೆ ನಡೆಯಲಿದೆ. ಕೋಣಂದೂರಿನ ಗ್ರೀನ್ ಹಾರ್ಟ್ ಕೆಫೆ ಸಾಗರ ರಸ್ತೆ ಕೋಣಂದೂರಲ್ಲಿ ಈ ಕಾರ್ಯಕ್ರಮ ನಡೆಯಲಿದೆ.