ಚಂದ್ರಯಾನ ಸಕ್ಸಸ್: 2 ಕಿಮಿ ನಡೆದು ಮಕ್ಕಳ ಶುಭಾಶಯ!
– ಕೋಣಂದೂರಿನ ಸ್ವಾಮಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ಮಕ್ಕಳ ಶುಭಾಶಯ
– ವಿನಯ್ ಗುರೂಜಿ ಭಕ್ತರಿಂದ ಕೋಮನೆ ಶಾಲೆಯಲ್ಲಿ ವಿನಯ್ ಗುರೂಜಿ ಹುಟ್ಟು ಹಬ್ಬ ಆಚರಣೆ
NAMMUR EXPRESS THIRTHAHALLI :
ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನ ಸ್ವಾಮಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾವತಿಯಿಂದ 23-08-2023ರ ಚಂದ್ರಯಾನ 3ರ ಯಶಸ್ಸಿಗೆ ಶುಭಹಾರೈಸುವ ಸಲುವಾಗಿ 1ನೇ ತರಗತಿಯ ಚಿಣ್ಣರರಿಂದ 7ನೇ ತರಗತಿವರೆಗಿನ ಎಲ್ಲಾ ಮಕ್ಕಳು ಕೋಣಂದೂರು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಿಂದ ಸಿ.ಕೆ.ವೃತ್ತ ಮಾರ್ಗವಾಗಿ ಮತ್ತು ಸಿ.ಕೆ. ವೃತ್ತದಿಂದ ಆಸ್ಪತ್ರೆಯವರೆಗೆ ಸಾಗಿ ನಮ್ಮ ಇಸ್ರೋ ವಿಜ್ಞಾನಿಗಳಿಗೆ ಶುಭಕೋರಿದ್ದಾರೆ. ಜಾಥಾದಲ್ಲಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು, ಪೋಷಕರು ಪಾಲ್ಗೊಂಡು ಈ ಜಾತವನ್ನು ಯಶಸ್ವಿಗೊಳಿಸಿದ್ದಾರೆ. ಒಟ್ಟು 2:30 ಕಿ.ಮೀ ಜಾಥಾದಲ್ಲಿ ಮಕ್ಕಳೆಲ್ಲರೂ ಹರ್ಷೋದ್ಧಾರದೊಂದಿಗೆ ಜಯಕಾರ ಕೂಗುತ್ತ ಸಾಗಿರುತ್ತಾರೆ. ಇಸ್ರೋ ವಿಜ್ಞಾನಿಗಳ ಸಾಧನೆಯು ಮಕ್ಕಳಗೆ ಸ್ಪೂರ್ತಿಯಾಗಲಿ ಎಂಬುದೇ ವಿದ್ಯಾಸಂಸ್ಥೆಯ ಆಶಯವಾಗಿದೆ.
ವಿನಯ್ ಗುರೂಜಿ ಹುಟ್ಟು ಹಬ್ಬ: ಸಾಮಾಜಿಕ ಸೇವೆ
– ಮೇಗರವಳ್ಳಿ ವಿನಯ್ ಗುರೂಜಿ ಭಕ್ತ ವೃಂದದಿಂದ ಕಾರ್ಯಕ್ರಮ
ತೀರ್ಥಹಳ್ಳಿ: ಅವಧೂತ ಶ್ರೀ ವಿನಯ್ ಗುರೂಜಿಯವರ ಹುಟ್ಟು ಹಬ್ಬದ ವಿಶೇಷವಾಗಿ ಮೇಗರವಳ್ಳಿ ಭಕ್ತ ವೃಂದದಿಂದ ಒಂದರಿಂದ ಐದರವರೆಗೆ ಓದುತ್ತಿರುವ ಸರಕಾರಿ ಕೋಮನೆ ಶಾಲಾ ಮಕ್ಕಳಿಗೆ ಹುಟ್ಟುಹಬ್ಬದ ಅಂಗವಾಗಿ ಸಿಹಿ ಹಂಚಲಾಯಿತು. ಹಾಗೂ 25 ಮಕ್ಕಳಿಗೆ ಡ್ರಾಯಿಂಗ್ ಕಿಟ್ ವಿತರಣೆ ಮಾಡಲಾಯಿತು. ಕೇಕ್ ಅನ್ನು ಕಟ್ ಮಾಡಿ ವಿನಯ್ ಗುರೂಜಿ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಮೇಗರವಳ್ಳಿ ಭಕ್ತ ವೃಂದದ ಅಭಿಲಾಶ್, ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಂಡೆ ವೆಂಕಟೇಶ್ಹಾಗೂ ಎಸ್ ಟಿ ಎಂ ಸಿ ಸದಸ್ಯರು ಹಾಗೂ ಉಪಾಧ್ಯಕ್ಷರು, ಪೋಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅವಧೂತ ವಿನಯ್ ಗುರೂಜಿಯವರ ಹುಟ್ಟು ಹಬ್ಬದ ಅಂಗವಾಗಿ ಬಡ ಮಕ್ಕಳಿಗೆ ಸಹಾಯ ಮಾಡುವ ಕಾರ್ಯವನ್ನು ವಿನಯ್ ಗುರೂಜಿ ಭಕ್ತ ವೃಂದ ಮೇಗರವಳ್ಳಿ ಇವರು ಕಳೆದ 3 ವರ್ಷದಿಂದ ನಡೆಸಿಕೊಂಡು ಬರುತ್ತಿದ್ದಾರೆ.