ಹುಲಿ ವೇಷಧಾರಿಗಳಿಗೆ ಬಣ್ಣದಲ್ಲಿ ಮೊಟ್ಟೆ ಬಳಕೆ ಸುಳ್ಳು!
– ಹುಲಿವೇಷಧಾರಿಗಳು ಈ ಬಗ್ಗೆ ಕಿವಿಗೊಡಬಾರದು
-45 ವರ್ಷದಿಂದ ಬಣ್ಣ ಹಚ್ಚುವ ಮೂಲಕ ರಮೇಶ್ ಕಲಾ ಸೇವೆ
NAMMUR EXPRESS NEWS
ತೀರ್ಥಹಳ್ಳಿ: ಹುಲಿ ವೇಷ ಅತ್ಯುತ್ತಮ ಕಲೆ. ಈಗ ಆ ಕಲೆ ಎಲ್ಲೆಡೆ ಮಾಯವಾಗುತ್ತಿದೆ. ಈ ನಡುವೆ ಕೆಲವು ಕಡೆ ದಸರಾ, ದೀಪಾವಳಿ ವೇಳೆ ಈ ಸ್ಪರ್ಧೆಗಳು ನಡೆಯುತ್ತವೆ. ಆದರೆ ಇತ್ತೀಚಿಗೆ ಈ ಕಲೆ ಬಗ್ಗೆ ಕೆಲವು ಸುಳ್ಳು ವದಂತಿಗಳು ಆ ಕಲೆಗೆ ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ.
ಹುಲಿ ವೇಷಧಾರಿಗಳಿಗೆ ಕಳೆದ 45 ವರ್ಷದಿಂದ ಬಣ್ಣ ಹಚ್ಚುವ ಮೂಲಕ ಕಲಾ ಕಾಯಕದಲ್ಲಿರುವ ರಮೇಶ್ ಯಡೆಹಳ್ಳಿಕೆರೆ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ನಾನು ಕಳೆದ 45 ವರ್ಷದಿಂದ ಹುಲಿಗಳಿಗೆ ಬಣ್ಣ ಹಚ್ಚುತ್ತಿದ್ದೇನೆ. ನನ್ನ ತಂದೆ ವಿಠಲ ಅವರು 35 ವರ್ಷ ಬಣ್ಣ ಹಚ್ಚಿದ್ದಾರೆ. ಈವರೆಗೆ ಅಂದಾಜು 5000 ಹುಲಿಗಳಿಗೆ ಬಣ್ಣ ಹಾಕಿದ್ದೇನೆ. ನಾವೆಂದು ಮೊಟ್ಟೆ ಬಳಸುವುದಿಲ್ಲ. ತೀರ್ಥಹಳ್ಳಿ, ಬೆಂಗಳೂರು, ವಿಧಾನ ಸೌಧ, ರಾಮನಗರ, ಉಡುಪಿ, ಕರಾವಳಿ ಸೇರಿ ಎಲ್ಲೆಡೆ ನಾವು ಬಣ್ಣ ಹಚ್ಚಿದ ಹುಲಿ ಪ್ರದರ್ಶನ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ತೀರ್ಥಹಳ್ಳಿಯಲ್ಲಿ ಎಂದೂ ಮೊಟ್ಟೆ ಬಳಕೆ ಮಾಡಲ್ಲ, ಈ ಬಗ್ಗೆ ಸುಳ್ಳು ಮಾಹಿತಿ ನೀಡಲಾಗಿದೆ. ಯಾವುದೇ ಕಾರಣಕ್ಕೆ ಮೊಟ್ಟೆ ಬಳಸಲ್ಲ. 20 ಹುಲಿಗಳು ಈಗಾಗಲೇ ಬಣ್ಣ ಹಚ್ಚುತ್ತಿದ್ದೇನೆ. ನಾನು ದೇವರ ಪ್ರಸಾದದ ಜತೆ ಬಣ್ಣ ಹಚ್ಚುತ್ತೇನೆ. ಹುಲಿವೇಷಧಾರಿಗಳು ಈ ಬಗ್ಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.
ಕಲೆಗೆ ಅವಮಾನ ಮಾಡಬಾರದು: ಕಲಾ ಅಭಿಮಾನಿಗಳು
ಕಳೆದ ವರ್ಷ ಹುಲಿ ವೇಷ ಆಯೋಜನೆ ಮಾಡಿದ್ದ ರಾಮದಾಸ್ ಪ್ರಭು ಮತ್ತು ಪ್ರದೀಪ್ ಪೂಜಾರಿ ಮಾತನಾಡಿ, ನಾವು ಕೂಡ ಹುಲಿ ವೇಷ ಸ್ಪರ್ಧೆ ಆಯೋಜನೆ ಮಾಡಿದ್ದೆವು. ರಮೇಶ್ ಅವರು ಯಾವತ್ತೂ ಮೊಟ್ಟೆ ಬಳಸಿಲ್ಲ. ಈ ಬಗ್ಗೆ ಸುಳ್ಳು ಮಾಹಿತಿ ನೀಡಬಾರದು. ಈ ಮೂಲಕ ಕಲೆಗೆ ಅವಮಾನ ಮಾಡಬಾರದು ಎಂದೂ ಅವರು ಮನವಿ ಮಾಡಿದ್ದಾರೆ.