ಚೆಸ್ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟಕ್ಕೆ ವಾಗ್ದೇವಿ ವಿದ್ಯಾರ್ಥಿಗಳು!
– ಆದ್ಯ ಎ.ಹೆಚ್, ಪ್ರಥಮ್ ಟಿ.ಎನ್ ರಾವ್ ಕ್ರೀಡಾ ಸಾಧನೆ
– ವಾಗ್ದೇವಿ ಆಂಗ್ಲಮಾಧ್ಯಮ ಶಾಲೆ ವಿದ್ಯಾರ್ಥಿಗಳು
NAMMUR EXPRESS NEWS
ತೀರ್ಥಹಳ್ಳಿ: ಹಾಸನದಲ್ಲಿ ನಡೆದ ರಾಜ್ಯಮಟ್ಟದ ಯು-14 ಚೆಸ್ ಪಂದ್ಯಾವಳಿಯಲ್ಲಿ ವಾಗ್ದೇವಿ ಆಂಗ್ಲಮಾಧ್ಯಮ ಶಾಲೆಯ 7ನೆಯ ತರಗತಿಯ ಆದ್ಯ ಎ.ಹೆಚ್ (ತೀರ್ಥಹಳ್ಳಿಯ ಶ್ರೀಮತಿ ಆಶಾ ಹಾಗೂ ಶ್ರೀ ಅನಿಲ್ ಪಿ.ಹೆಚ್ ದಂಪತಿಗಳ ಪುತ್ರಿ) ಹಾಗೂ 8ನೆಯ ತರಗತಿಯ ಪ್ರಥಮ್ ಟಿ.ಎನ್ ರಾವ್ (ರಥಬೀದಿಯ ಶ್ರೀಮತಿ ರೂಪಾ ಟಿ.ಎನ್ ಹಾಗೂ ಶ್ರೀ ನಟರಾಜ್ ದಂಪತಿಗಳ ಪುತ್ರ) ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ಮಹಾರಾಷ್ಟ್ರದಲ್ಲಿ ನಡೆಯುವ ರಾಷ್ಟ್ರಮಟ್ಟದ ಚೆಸ್ ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾರೆ.
ಒಂದೇಶಾಲೆಯ 02 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಆಡಿರುವುದು ಸಂತಸದ ಸಂಗತಿಯಾಗಿದೆ ಮತ್ತು ಶಿವಮೊಗ್ಗ ಜಿಲ್ಲೆಯಿಂದ 03 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅದರಲ್ಲಿ ವಾಗ್ದೇವಿ ಶಾಲೆಯ 02 ವಿದ್ಯಾರ್ಥಿಗಳು ಎಂಬುದು ತಾಲ್ಲೂಕಿಗೆ ಹೆಮ್ಮೆಯ ವಿಚಾರವಾಗಿದೆ. ತರಬೇತುದಾರರಾದ ಶ್ರೀ ನಾಗರಾಜ್ ರವರನ್ನು ಈ ಸುಸಂದರ್ಭದಲ್ಲಿ ಅಭಿನಂದಿಸುವುದರ ಜೊತೆಗೆ ಪೋಷಕರಿಗೆ, ತಾವು ಓದುತ್ತಿರುವ ಶಾಲೆಗೆ, ತಾಲ್ಲೂಕಿಗೆ, ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿಯನ್ನು ತಂದಿರುವ ವಿದ್ಯಾರ್ಥಿಗಳನ್ನು ವಾಗ್ದೇವಿ ಆಂಗ್ಲಮಾಧ್ಯಮ ಶಾಲೆಯ ಅಧ್ಯಕ್ಷರು, ಸದಸ್ಯರು, ಶಿಕ್ಷಕವೃಂದದವರು ಅಭಿನಂದಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.