- ಸೆ.30ರವರೆಗೆ ವಯುಕ್ತಿಕ ತೆರಿಗೆ ಕಟ್ಟಲು ಅವಕಾಶ
- ಕಂಪನಿ, ಸಂಸ್ಥೆಗೆ ನ.30ರವರೆಗೆ ರಿಲ್ಯಾಕ್ಸ್
- ಜಿಎಸ್ಟಿ, ಟ್ಯಾಕ್ಸ್ ವಿನಾಯ್ತಿ ಕೊಡದಿದ್ರೆ ಸಣ್ಣ ಕಂಪನಿ, ಸಣ್ಣ ಉದ್ಯಮ ವಿನಾಶ
ನವ ದೆಹಲಿ: 2020-21ನೇ ಸಾಲಿನ ಹಣಕಾಸು ವರ್ಷದ ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ದಿನಾಂಕವನ್ನು ಕೇಂದ್ರ ಸರಕಾರ 2 ತಿಂಗಳ ಕಾಲ ವಿಸ್ತರಿಸಿದೆ. ಸೆಪ್ಟೆಂಬರ್ 30ರವರೆಗೆ ಕಾಲಾವಾಧಿ ವಿಸ್ತರಿಸಿ ಸರಕಾರ ಆದೇಶಿಸಿದೆ. ಜೊತೆಗೆ ಕಂಪನಿ,ಸಂಸ್ಥೆಗಳ ಟ್ಯಾಕ್ಸ್ ಸಲ್ಲಿಕೆಗೆ ನವೆಂಬರ್ ಅಂತ್ಯದ ಗಡುವು ನೀಡಲಾಗಿದೆ.
ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಕಂಪೆನಿಗಳಿಗೆ ಐಟಿಆರ್ ಸಲ್ಲಿಸುವ ಗಡುವನ್ನು ನವೆಂಬರ್ 30ರವರೆಗೆ ವಿಸ್ತರಿಸಿದೆ. ಆದಾಯ ತೆರಿಗೆ ಕಾನೂನಿನ ಪ್ರಕಾರ, ಲೆಕ್ಕಪರಿಶೋಧನೆಯ ಅಗತ್ಯವಿಲ್ಲದ ಮತ್ತು ಸಾಮಾನ್ಯವಾಗಿ ಐಟಿಆರ್ -1 ಅಥವಾ ಐಟಿಆರ್ -4 ಬಳಸಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ವ್ಯಕ್ತಿಗಳಿಗೆ ಐಟಿಆರ್ ಸಲ್ಲಿಸಲು ಅಂತಿಮ ದಿನಾಂಕ ಜುಲೈ 31 ಆಗಿತ್ತು. ಅದನ್ನು ಈಗ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ.
ಕಂಪನಿಗಳು ಅಥವಾ ಸಂಸ್ಥೆಗಳ ತೆರಿಗೆ ಪಾವತಿದಾರರಿಗೆ ಆಡಿಟ್ ಮಾಡಬೇಕಾದ ಗಡುವು ಅಕ್ಟೋಬರ್ 31 ಆಗಿತ್ತು. ಅದನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ತೀವ್ರವಾದ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ತೆರಿಗೆದಾರರಿಗೆ ರಿಲೀಫ್ ನೀಡಲು ಕೆಲವು ತೆರಿಗೆ ಅನುಸರಣೆಗಾಗಿ ಸಮಯ ಮಿತಿಗಳ ವಿಸ್ತರಣೆಯನ್ನು ನೀಡಲಾಗುತ್ತಿದೆ ಎಂದು ಸಿಬಿಡಿಟಿ ಸುತ್ತೋಲೆಯಲ್ಲಿ ತಿಳಿಸಿದೆ.
ಜಿಎಸ್ಟಿ ಸಮಸ್ಯೆ: ದೇಶದ ಲಕ್ಷಾಂತರ ಸಣ್ಣ ಉದ್ಯಮಗಳು, ಸ್ಟಾರ್ಟ್ ಅಪ್ಗಳು, ಬ್ಯುಸಿನೆಸ್ ಸಂಪೂರ್ಣ ನಾಶವಾಗಿದೆ. ಹಿಂದೆಂದೂ ಕಾಣದಷ್ಟು ಪಾತಾಳಕ್ಕೆ ಕುಸಿದಿದೆ. ಪ್ರತಿ ಊರಲ್ಲೂ ಉದ್ಯಮಗಳು ಮುಚ್ಚಿವೆ. ಲಕ್ಷ ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಈ ನಡುವೆ ಜಿಎಸ್ಟಿ ಕಿರಿಕಿರಿ ಅವರನ್ನು ಉದ್ಯಮ ಮಾಡದಂತೆ ಮಾಡಿದೆ. 2019-20, 20-21 ವರ್ಷವನ್ನು ಜಿಎಸ್ಟಿ, ಇನ್ಕಮ್ ಟ್ಯಾಕ್ಸ್ ದಾಖಲಾತಿ ಸರಳ ಮಾಡಬೇಕು. 2 ಆರ್ಥಿಕ ವರ್ಷ ಫೈಲ್ ಮಾಡದಿದ್ರೆ ದಂಡ, ಕಂಪನಿ, ಸಂಸ್ಥೆ ನಿಷೇದ ಮಾಡಬಾರದು. ಎಲ್ಲಾ ದಾಖಲಾತಿಗೂ 2 ವರ್ಷ ಅವಕಾಶ ನೀಡಬೇಕು ಎಂಬುದು ಉದ್ಯಮ ವಲಯದ ಬೇಡಿಕೆಯಾಗಿದೆ.
ಸಾವಿರಾರು ಕಂಪನಿಗಳು, ಉದ್ಯಮಗಳು 2019-20, 2020-21 ಎರಡು ಆರ್ಥಿಕ ವರ್ಷ ಇನ್ಕಮ್ ಟ್ಯಾಕ್ಸ್, ಜಿಎಸ್ಟಿ, ಕಂಪನಿ ಫೀಸ್ ಕಟ್ಟಲು ಕರೋನಾ ಕಾರಣದಿಂದ ಕಟ್ಟಲು ಆಗಿಲ್ಲ. ಹೀಗಾಗಿ ದಂಡ ಹಾಕಬಾರದು ಜೊತೆಗೆ ಲೈಸನ್ಸ್ ರದ್ದು ಮಾಡಬಾರದು ಎಂಬ ಆಗ್ರಹ ವಲಯದಿಂದ ವ್ಯಕ್ತವಾಗಿದೆ.