ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆಗಳಲ್ಲಿ ಮನೆ ಮನೆಗಳಲ್ಲೂ ಹಸಿರಿನ ವಾತಾವರಣ ನಿರ್ಮಿಸುವಲ್ಲಿ ಶ್ರಮಿಸುತ್ತಿರುವ ‘ಮೈ ಡ್ರೀಮ್ಗಾರ್ಡನ್’ ಈಗ ದೇಶಾದ್ಯಂತ ವಹಿವಾಟು ವಿಸ್ತರಣೆಗೆ ಮುಂದಾಗಿದೆ.
7 ಮೆಟ್ರೊ ನಗರಗಳು, 90 ಎರಡನೇ ಹಂತದ ನಗರಗಳು ಸೇರಿದಂತೆ ದೇಶಾದ್ಯಂತ 137 ನಗರಗಳಲ್ಲಿ ವಹಿವಾಟು ವಿಸ್ತರಿಸುತ್ತಿದ್ದು, ವಿತರಕರನ್ನು ಆಹ್ವಾನಿಸಿದೆ.
ಆ ಮೂಲಕ ದೇಶಾದ್ಯಂತ ನಿರ್ಮಾಣಕ್ಕೆ ಪಣ ತೊಟ್ಟಿದೆ. ವಿತರಕರ ಮೂಲಕ ಸಸಿ, ಕೃಷಿ ಪರಿಕರಗಳನ್ನು ಒದಗಿಸುವ ಜತೆಗೆ ಮಾರ್ಗದರ್ಶನ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ.
ನಗರಗಳಲ್ಲಿ ಉತ್ತಮ ಗಾಳಿ ಸಿಗುತ್ತಿಲ್ಲ, ಪ್ರಾಣಿ-ಪಕ್ಷಿಗಳು ನೆಲೆ ಕಳೆದುಕೊಳ್ಳುವಂತಾಗಿದೆ. ಜೀವ ವೈವಿಧ್ಯತೆ ಕಾಪಾಡಿಕೊಂಡು, ಉತ್ತಮ ವಾತಾವರಣ ಉಳಿಸಿಕೊಳ್ಳಲು ಹಸಿರು ಹೆಚ್ಚಿಸುವುದೇ ಮಾರ್ಗ ಎಂಬುದು ‘ಮೈ ಡ್ರೀಮ್ಗಾರ್ಡನ್’ ಸಂಸ್ಥಾಪಕ ಅಶೋಕ್ಕುಮಾರ್ಕೆ.ಸಿ. ಅವರ ನಂಬಿಕೆ. ಈ ನಿಟ್ಟಿನಲ್ಲಿ ಹಸಿರು ಪಸರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.