- ಜುಲೈ 31ಕ್ಕೆ ಅಂತ್ಯ: ನಿಮ್ಮ ಆದಾಯ ತೆರಿಗೆ ಕಟ್ಟಿ..
NAMMUR EXPRESS NEWS
ನವದೆಹಲಿ: ಆದಾಯ ತೆರಿಗೆ ವಿವರ ಸಲ್ಲಿಕೆಯ ಗಡುವು ಇದೇ ತಿಂಗಳ 31ಕ್ಕೆ ಅಂತ್ಯವಾಗಲಿದ್ದು ಅದನ್ನು ವಿಸ್ತರಿಸುವ ಆಲೋಚನೆ ಸರ್ಕಾರದ ಮುಂದೆ ಸದ್ಯಕ್ಕೆ ಇಲ್ಲ ಎಂದು ರೆವೆನ್ಯೂ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.
2021-22ನೇ ಹಣಕಾಸು ವರ್ಷಕ್ಕೆ ಜುಲೈ 20ರವರೆಗೆ 2.3 ಕೋಟಿಗೂ ಅಧಿಕ ರಿಟರ್ನ್ಸ್ ಗಳು ಸಲ್ಲಿಕೆ ಆಗಿವೆ, ರಿಟರ್ನ್ ಸಲ್ಲಿಕೆ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರತಿ ಬಾರಿಯೂ ರಿಟರ್ನ್ಸ್ ಸಲ್ಲಿಕೆ ಅವಧಿಯು ವಿಸ್ತರಣೆ ಆಗುತ್ತದೆ ಎಂದು ಜನರು ಭಾವಿಸುತ್ತಾರೆ, ಹೀಗಾಗಿ ಆರಂಭದಲ್ಲಿ ರಿಟರ್ನ್ಸ್ ಸಲ್ಲಿಕೆ ಪ್ರಮಾಣ ಕಡಿಮೆ ಇರುತ್ತದೆ, ಆದರೆ ಈಗ ದಿನವೂ 15 ಲಕ್ಷದಿಂದ 18 ಲಕ್ಷ ರಿಟರ್ನ್ಸ್ ಸಲ್ಲಿಕೆ ಆಗುತ್ತಿದೆ, ಈ ಸಂಖ್ಯೆಯು ನಿಧಾನವಾಗಿ 25 ಲಕ್ಷದಿಂದ 30 ಲಕ್ಷಕ್ಕೆ ಏರಿಕೆ ಆಗಲಿದೆ ಎಂದು ಬಜಾಜ್ ಹೇಳಿದ್ದಾರೆ.
2020-21ನೇ ಹಣಕಾಸು ವರ್ಷದಲ್ಲಿ 5.89 ಕೋಟಿ ರಿಟರ್ನ್ಸ್ ಸಲ್ಲಿಕೆ ಆಗಿತ್ತು.