- ನವರಾತ್ರಿ ಹಬ್ಬವೂ ಉದ್ಯಮ ಕೊಡಲಿಲ್ಲ
- ದೇಶೀಯ ಉತ್ಪನ್ನ ತಯಾರಿಕೆಗೆ ಸಕಾಲ
ದೆಹಲಿ: ಗಡಿಯಲ್ಲಿ ಚೀನಾ ಕಿರಿಕಿರಿ, ಕರೋನಾ ಚೂ ಬಿಟ್ಟ ಕಳಂಕದ ಪರಿಣಾಮ ಚೀನಾದಿಂದ ಆಮದಾಗುವ ಉತ್ಪನ್ನಗಳ ಮೇಲೆ ಭಾರಿ ಪ್ರಮಾಣದ ಅಬಕಾರಿ ಸುಂಕ ವಿಧಿಸಲಾಯಿತು. ಅನೇಕ ಸ್ಥಳೀಯ ಉದ್ಯಮಿಗಳು ಚೀನಿ ವಸ್ತು ಆಮದು ನಿರಾಕರಿಸಲು ಆರಂಭಿಸಿದ ಬೆನ್ನಲ್ಲೇ ಚೀನಾದ ಬಹು ದೊಡ್ಡ ಮಾರುಕಟ್ಟೆ ಇದೀಗ ತಣ್ಣಗಾಗಿದೆ.
1 ರೂ,ವಸ್ತುವಿನಿಂದ ಹಿಡಿದು ಲಕ್ಷ ಮೌಲ್ಯದ ವಸ್ತುವೂ ಚೀನಾದ್ದೇ ಆಗಬೇಕಿತ್ತು. ಆದರೆ ಇದೀಗ ಚೀನಾ ವಸ್ತು ಕಡಿಮೆ ಆಗಿದೆ. ಅದರಲ್ಲೂ ಭಾರತದ ಹಬ್ಬಗಳ ಮೇಲೆ ಚೀನಾದ ಅನೇಕ ಉತ್ಪದನಾ ಸಂಸ್ಥೆಗಳು ಅವಲಂಬಿತವಾಗಿದ್ದವು. ಈಗ ಚೀನಿ ವಸ್ತುಗಳ ಮೇಲಿನ ನಿಬರ್ಂಧ, ನಿಷೇಧಕ್ಕೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಮುಂದಾಗಿದ್ದು, ಇದರಿಂದ ಚೀನಾ ಭಾರಿ ನಷ್ಟ ಅನುಭವಿಸಲಿದೆ.
ಭಾರತದ ಒಟ್ಟು ಆಮದು ಪ್ರಮಾಣದಲ್ಲಿ ಚೀನಾ ಶೇ 14ರಷ್ಟು ಪಾಲು ಹೊಂದಿದೆ. ಏಪ್ರಿಲ್ 2019ರಿಂದ ಫೆಬ್ರವರಿ 2020ರ ಅವಧಿಯಲ್ಲಿ ಭಾರತವು ಸುಮಾರು 62.4 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ಇದೇ ಅವಧಿಯಲ್ಲಿ ಭಾರತದಿಂದ 15.5 ಬಿಲಿಯನ್ ಡಾಲರ್ ನಷ್ಟು ಮೌಲ್ಯದ ಉತ್ಪನ್ನ ರಫ್ತಾಗಿದೆ. ಆದರೆ, ನಿಷೇಧ, ನಿಬರ್ಂಧದಿಂದಾಗಿ ಚೀನಾಕ್ಕೆ ಸುಮಾರು 40, 000 ಕೋಟಿ ರು ನಷ್ಟವಾಗಲಿದೆ ಎಂದು ಅಂದಾಜು ಮಾಡಲಾಗಿದೆ.
ಚೀನಾದಿಂದ ಏನಿಲ್ಲ ಖರೀದಿ? ಎಲೆಕ್ಟ್ರಾನಿಕ್ ಕಚ್ಚಾವಸ್ತು, ವಾಚ್, ಗಡಿಯಾರ, ಸಂಗೀತ ಉಪಕರಣ, ಆಟಿಕೆ, ಕ್ರೀಡಾ ಸಾಧನ, ಪೀಠೋಪಕರಣ, ನೆಲಹಾಸು, ಪ್ಲಾಸ್ಟಿಕ್ ಉತ್ಪನ್ನಗಳು, ಎಲೆಕ್ಟ್ರಿಕಲ್ ಮಷಿನ್, ರಾಸಾಯನಿಕ ಕಚ್ಚಾವಸ್ತು, ಕಬ್ಬಿಣ, ಉಕ್ಕು, ರಸಗೊಬ್ಬರ, ಲೋಹದ ವಸ್ತು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸ್ಮಾರ್ಟ್ ಫೆÇೀನ್ ಮಾರುಕಟ್ಟೆಯಲ್ಲಿ ಶೇ 73ರಷ್ಟು ಚೀನಾ ಮೂಲದ ಶಿಯೋಮಿ, ಒಪೆÇ್ಪೀ, ಒನ್ ಪ್ಲಸ್ ಒನ್, ರಿಯಲ್ ಮಿ, ವಿವೋ ಫೆÇೀನ್ ಗಳು ಸೇಲ್ ಆಗಿವೆ. ಭಾರತದ ಪ್ರಮುಖ 30 ಬಿಲಿಯನ್ ಡಾಲರ್ ಸ್ಟಾರ್ ಅಪ್ ಕಂಪನಿಗಳ ಪೈಕಿ 18ರಲ್ಲಿ ಚೀನಾ ಹೂಡಿಕೆ ಹೊಂದಿದೆ ಆಟೋಮೊಬೈಲ್ ಕ್ಷೇತ್ರದಲ್ಲಿ ಶೇ 30ರಷ್ಟು, ಬೊಂಬೆ, ಆಟಿಕೆ, ಟಾಯ್ಸ್ ಗೇಮ್ಸ್ ಕ್ಷೇತ್ರದಲ್ಲಿ ಶೇ 90ರಷ್ಟು ಪಾಲು, ಬೈಸಿಕಲ್ ನಿರ್ಮಾಣಕ್ಕೆ ಶೇ 50ರಷ್ಟು ಚೀನಾ ಪಾಲು ಅಗತ್ಯ. ಪಿಪಿಇ ಕಿಟ್ಸ್ ಚೀನಾದಿಂದ ಮಾತ್ರ ಪೂರೈಕೆಯಾಗುತ್ತಿದೆ