- ಭಾರತಕ್ಕೆ ಭೇಟಿ ನೀಡಲು ಅವಕಾಶ
- ಕರೋನಾ ನಿಯಮ ಪಾಲನೆ ಮಾತ್ರ ಕಡ್ಡಾಯ
ನವದೆಹಲಿ: ವೀಸಾ ಹಾಗೂ ಪ್ರಯಾಣದ ಮೇಲೆ ಹೇರಲಾಗಿದ್ದ ನಿಬರ್ಂಧವನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ಕರೋನಾ ಹಿನ್ನೆಲೆ ಕಳೆದ ಮಾರ್ಚ್ನಿಂದ ಭಾರತದ ಸಾಗರೋತ್ತರ ನಾಗರಿಕರು, ಭಾರತ ಮೂಲದ ವ್ಯಕ್ತಿಗಳು ಹಾಗೂ ವಿದೇಶಿ ಪ್ರಜೆಗಳು ಪ್ರವಾಸಿ ವೀಸಾ ಹೊರತಾಗಿ ಬೇರೆ ಉದ್ದೇಶಗಳಿಗೆ ಭಾರತಕ್ಕೆ ಭೇಟಿ ನೀಡಲು ಅವಕಾಶ ನೀಡಿದೆ. ಈ ಮೂಲಕ ವಿದೇಶಯಾನ ಇನ್ಮುಂದೆ ಸುಲಭವಾಗಲಿದೆ.
ವಿಮಾನಯಾನವನ್ನ ಯಥಾಸ್ಥಿತಿಗೆ ಮರಳಿಸುವ ಉದ್ದೇಶದಿಂದ ಸರ್ಕಾರ ಈ ಪ್ರಮುಖ ನಿರ್ಣಯವನ್ನ ಕೈಗೊಂಡಿದ್ದು, ಅಸ್ತಿತ್ವದಲ್ಲಿರುವ ಎಲ್ಲಾ ವೀಸಾಗಳ ವ್ಯಾಲಿಡಿಟಿಯನ್ನ ಮರುಸ್ಥಾಪಿಸಿದೆ. ಭಾರತಕ್ಕೆ ಬರಲು ಅಥವಾ ಇಲ್ಲಿಂದ ಹೊರಹೋಗಲು ಬಯಸುವ ವಿದೇಶಿ ಪ್ರಜೆಗಳು ಮತ್ತು ಭಾರತೀಯ ಪ್ರಜೆಗಳಿಗೆ ವೀಸಾ ಮತ್ತು ಪ್ರಯಾಣ ನಿಬರ್ಂಧಗಳಲ್ಲಿ ಹಂತಹಂತವಾಗಿ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.
ಪ್ರವಾಸಿ ವೀಸಾ ಹೊರತುಪಡಿಸಿ ಯಾವುದೇ ಉದ್ದೇಶಕ್ಕಾಗಿ ಭಾರತಕ್ಕೆ ಭೇಟಿ ನೀಡಲು ಬಯಸುವವರು ಅಧಿಕೃತ ವಿಮಾನ ನಿಲ್ದಾಣಗಳ ಮೂಲಕ ಅಥವಾ ಬಂದರು ಚೆಕ್ ಪೆÇೀಸ್ಟ್ಗಳ ಮೂಲಕ ವಾಯುಮಾರ್ಗ ಅಥವಾ ನೀರಿನ ಮಾರ್ಗಗಳ ಮೂಲಕ ಭಾರತಕ್ಕೆ ಪ್ರವೇಶಿಸಲು ಅನುಮತಿ ಇದೆ.
ಎಲ್ಲಾ ಪ್ರಯಾಣಿಕರು ಕ್ವಾರಂಟೀನ್ ಹಾಗೂ ಕೊರೊನಾ ನಿಯಮಗಳ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾರ್ಗಸೂಚಿಗಳನ್ನ ಪಾಲಿಸಬೇಕಿದೆ.
ವಿಮಾನ ನಿಲ್ದಾಣಗಳು, ಬಂದರು ಗಳ ವಲಸೆ ಚೆಕ್ ಪೆÇೀಸ್ಟ್ ಗಳ ಮೂಲಕ, ವಿಮಾನ ಅಥವಾ ನೀರಿನ ಮಾರ್ಗಗಳ ಮೂಲಕ ಪ್ರವೇಶಿಸಲು ಅವಕಾಶ ನೀಡಲಾಗುವುದು. ಇದರಲ್ಲಿ ವಂದೇ ಭಾರತ್ ಮಿಷನ್ ಅಡಿಯಲ್ಲಿ ಕಾರ್ಯಾಚರಣೆ ಗೊಂಡ ವಿಮಾನ, ವಿಮಾನ ಸಂಚಾರ ವ್ಯವಸ್ಥೆ ಅಥವಾ ನಾಗರಿಕ ವಿಮಾನಯಾನ ಸಚಿವಾಲಯದ ಅನುಮತಿ ಮೇರೆಗೆ ಯಾವುದೇ ನಿಗದಿತ ವಲ್ಲದ ವಾಣಿಜ್ಯ ವಿಮಾನಗಳನ್ನು ಒಳಗೊಂಡಿದೆ.
ಆದರೆ, ಅಂತಹ ಎಲ್ಲ ಪ್ರಯಾಣಿಕರು ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.