-ಕವಿನ್ ಭಾರ್ತಿ ಮಿತ್ತಲ್ ಅವರು ಆರಂಭಿಸಿದ್ದ ಆ್ಯಪ್
-ವಾಟ್ಸಾಪ್ ಮುಂದೆ ಸೋಲುಕಂಡ ಹೈಕ್
ನವದೆಹಲಿ : ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ವಾಟ್ಸ್ ಆ್ಯಪ್ ಗೆ ಪೈಪೋಟಿ ನೀಡುವ ಉದ್ದೇಶದಿಂದ ಸಾಫ್ಟ್ ಬ್ಯಾಂಕ್ ಗ್ರೂಪ್ ಕಾರ್ಪ್ ನ ಬೆಂಬಲದೊಂದಿಗೆ ಮೆಸೇಜಿಂಗ್ ಆ್ಯಪ್ ಹೈಕ್ ಬಿಡುಗಡೆಯಾಗಿದ್ದು, ಇದೀಗ ಪ್ಲೇ ಸ್ಟೋರ್ ಗಳಲ್ಲಿ ಸ್ಥಗಿತಗೊಂಡಿದೆ. ಈ ಮೂಲಕ ಭಾರತೀಯರಿಗೆ ಜನಪ್ರಿಯ ಮೆಸೆಂಜರ್ ಆ್ಯಪ್ ಹೈಕ್ ಮರೆಯಾಗುತ್ತಿದೆ.
2016ರಲ್ಲಿ 1.4 ಶತಕೋಟಿ ಡಾಲರ್ ಮೌಲ್ಯದೊಂದಿಗೆ ಹೈಕ್ ಆ್ಯಪ್ ಬಿಡುಗಡೆಗೊಂಡಿತ್ತು. ಆದ್ರೇ ವಾಟ್ಸ್ ಆ್ಯಪ್ ಗೆ ಪೈಪೋಟಿ ಕೊಡುವ ನಿಟ್ಟಿನಲ್ಲಿ ಸೋಲು ಕಂಡಿರುವಂತಹ ಹೈಕ್ ಮೆಸೆಂಜರ್ ಆ್ಯಪ್ ಇದೀಗ ಭಾರತೀಯ ಪ್ಲೇ ಸ್ಟೋರ್ ನಿಂದ ಮರೆಯಾಗಲಿದೆ.
ಅಂದಹಾಗೇ ಬಿಲಿಯನೇರ್ ಕುಟುಂಬದ ಖ್ಯಾತ ನಟ ಕವಿನ್ ಭಾರ್ತಿ ಮಿತ್ತಲ್ ಅವರು ಆರಂಭಿಸಿದ್ದರು.
ಜನವರಿ 6ರಂದು ಭಾರತದ ನಂಬರ್ 2 ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ಲಿಮಿಟೆಡ್ ನ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಅವರ ಪುತ್ರ ಮಿತ್ತಲ್ ಅವರು ಹೈಕ್ ಸ್ಟಿಕ್ಕರ್ ಚಾಟ್ ಅನ್ನು ಮುಚ್ಚುವುದಾಗಿ ಘೋಷಿಸಿದ್ದರು.