- 2 ಜಿಬಿವರೆಗಿನ ಫೈಲ್ ಕಳುಹಿಸುವ ಸೌಲಭ್ಯ ಲಭ್ಯ
ಸೋಶಿಯಲ್ ಮೆಸೇಜಿಂಗ್ ಆಪ್ ವಾಟ್ಸ್ಪ್ ಈಗ ಜಗತ್ಪ್ರಸಿದ್ಧ. ಆದರೆ ಇದರ ಪ್ರತಿಸ್ಪರ್ಧಿ ಟೆಲಿಗ್ರಾಮ್ ಕೂಡ ಇದೀಗ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಅದರಲ್ಲೂ ಅತೀ ಹೆಚ್ಚು ಸ್ಟೋರೇಜ್ ಡಾಟಾ ಕೂಡ ಇಲ್ಲಿಂದ ಕಳುಹಿಸಬಹುದಾಗಿದೆ. ಗ್ರಾಹಕರಿಗೆ ತನ್ನ ಇತ್ತೀಚಿನ ಅಪ್ ಡೇಟ್ನಲ್ಲಿ ಹಲವು ಸೌಲಭ್ಯಗಳನ್ನು ಟೆಲಿಗ್ರಾಂ ನೀಡಿದೆ. profile ವಿಡಿಯೋ ಅಪ್ ಡೇಟ್ ಮಾಡುವುದು, ತಮ್ಮ ಹತ್ತಿರದಲ್ಲಿರುವ ಜನರ ಬಗ್ಗೆ ಮಾಹಿತಿ ನೀಡುವುದು, 2 ಜಿಬಿವರೆಗಿನ ಫೈಲ್ಗಳನ್ನು ಕಳಿಸುವ ಸೌಲಭ್ಯ ನೀಡಲಾಗಿದೆ.ಯಾವುದೇ ಮಾದರಿಯ ಫೈಲ್ ವರ್ಗಾವಣೆ ಮಿತಿಯನ್ನು 1.5 ಜಿಬಿಯಿಂದ 2 ಜಿಬಿಗಳಿಗೆ ಏರಿಕೆ ಮಾಡಲಾಗಿದೆ. ಅನಾಮಿಕ ಖಾತೆಯಿಂದ ನಿರಂತರ ಮೆಸೇಜ್ಗಳು ಬರುತ್ತಿದ್ದರೆ ಪ್ರೈವೆಸಿ ಹಾಗೂ ಸೆಕ್ಯುರಿಟಿ ಸೆಟಿಂಗ್ಸ್ ಮೂಲಕ ಸ್ವಯಂಚಾಲಿತವಾಗಿ ಅವುಗಳನ್ನು ತಡೆಯುವ ಅಥವಾ ಮ್ಯೂಟ್ ಮಾಡುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೇ 500 ಸದಸ್ಯರಿರುವ ಗ್ರೂಪ್ನ ಸದಸ್ಯರು ಗ್ರೂಪ್ ಸ್ಟಾಟ್ಸ್ಗಳನ್ನು ನೋಡಬಹುದಾಗಿದೆ. ಇನ್ನು ಹಲವಾರು ತಂತ್ರಜ್ಞಾನ ಬದಲಾವಣೆ ಸಾಧ್ಯತೆ ಇದೆ.