- ದೇಸಿ 5 ಜಿ ನೆಟ್ವರ್ಕ್ ಬಳಸಿ ಮೊದಲ ಕರೆ ಯಶಸ್ವಿ!
- ಆಡಿಯೋ, ವಿಡಿಯೋ ಕರೆ ಸ್ವೀಕರಿಸಿದ ಸಚಿವ
- ದೇಶದಲ್ಲಿ 5 ಜಿ ಯುಗಾರಂಭಕ್ಕಿನ್ನು ಕ್ಷಣಗಣನೆ
NAMMUR EXPRESS NEWS
ಚೆನ್ನೈ: ಸಂಪೂರ್ಣವಾಗಿ ದೇಶದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ 5 ಜಿ ನೆಟ್ವರ್ಕ್ ಬಳಸಿ ಮಾಡಲಾದ ಮೊದಲ ಆಡಿಯೋ ವಿಡಿಯೋ ಕರೆಯನ್ನು ಗುರುವಾರ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನಿ ವೈಷ್ಣವ್ ಸ್ವೀಕರಿಸಿದರು.
ಐಐಟಿ ಮದ್ರಾಸ್ ತಂತ್ರಜ್ಞಾರೊಬ್ಬರೂ ಮಾಡಿದ ಕರೆಯನ್ನು ಅವರು ಸ್ವೀಕರಿಸುವ ಮೂಲಕ ದೇಶದಲ್ಲಿ
5ಜಿ ಯುಗಾರಂಭಕ್ಕೆ ನಾಂದಿ ಹಾಡಿದರು.
ವಿಡಿಯೋ ಕಾಲ್ ನಲ್ಲಿ ಮಾತನಾಡಿದ ಸಚಿವ ವೈಷ್ಣವ್, ಪ್ರಧಾನಿ ನರೇಂದ್ರ ಮೋದಿಯವರ ಕನಸು ಸಾಕಾರವಾಗಿದೆ,4ಜಿ ಹಾಗೂ 5ಜಿ ತಂತ್ರಜ್ಞಾನವನ್ನು ಇಡೀ ಜಗತ್ತಿಗಾಗಿ ದೇಶದಲ್ಲಿ ಅಭಿವೃದ್ಧಿಪಡಿಸುವುದು ಅವರ ಕನಸಾಗಿತ್ತು, ಈ ಮೂಲಕ 5 ಜಿ ನೆಟ್ವರ್ಕ್ ಅನ್ನು ಸಂಪೂರ್ಣವಾಗಿ ದೇಶಿಯವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ. 5ಜಿ ತಂತ್ರಜ್ಞಾನದಿಂದ ಅನೇಕ ಆವಿಷ್ಕಾರಗಳಿಗೆ ಸಹಕಾರಿಯಾಗಲಿದೆ.