ಹೆಲ್ಮೆಟ್ ಹಾಕಿದರೆ ಮಾತ್ರ ಈ ಬೈಕ್ ರನ್ ಆಗುತ್ತೆ..!
– ಬೈಕ್ನಲ್ಲಿ ಹೋಗುವಾಗ ಹೆಲ್ಮೆಟ್ ತೆಗೆದರೆ ಬೈಕ್ ಸ್ಟಾಪ್
– ಹೊಸ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?
NAMMUR EXPRESS NEWS
ಬೈಕ್ ಸವಾರರೇ ಇದು ನಿಮಗೆ ಹೊಸ ಸುದ್ದಿ. ಹೆಲ್ಮೆಟ್ ಹಾಕಿದರೆ ಮಾತ್ರ ಈ ಬೈಕ್ ರನ್ ಆಗುತ್ತೆ. ಇಲ್ಲದಿದ್ರೇ ಓಡೋದೇ ಇಲ್ಲ.. ಹೆಲ್ಮೆಟ್ ಹಾಕಿಕೊಂಡರೆ ಮಾತ್ರ ಬೈಕ್ ಸ್ಟಾರ್ಟ್ ಆಗುತ್ತೆ!.
ಬೈಕ್ನಲ್ಲಿ ಹೋಗುವಾಗ ಹೆಲ್ಮೆಟ್ ತೆಗೆದರೆ ಬೈಕ್ ಸ್ಟಾಪ್
ಆಗಲಿದ್ದು ಓಲಾ ಕಂಪನಿಯಿಂದ ಹೊಸದೊಂದು ಟೆಕ್ನಾಲಜಿ ಬರಲಿದೆ. ಈಗಂತೂ ಬೈಕ್ನಲ್ಲಿ ಎಲ್ಲಿಗೆ ಪ್ರಯಾಣ ಬೆಳೆಸಿದರೂ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಆದರೂ ಬೈಕ್ ಸವಾರರು ಹೆಲ್ಮೆಟ್ ಧರಿಸುವುದು ಅಷ್ಟಕಷ್ಟೇ.
ರಸ್ತೆಯಲ್ಲಿ ಟ್ರಾಫಿಕ್ ಪೊಲೀಸ್ ಕಂಡರಷ್ಟೇ ಹೆಲ್ಮೆಟ್ ಹಾಕಿಕೊಂಡು ಬಳಿಕ ಸ್ವಲ್ಪ ದೂರ ಹೋಗುತ್ತಿದ್ದಂತೆ ಮತ್ತೆ ಅದನ್ನು ತೆಗೆದು ಬಿಡೋರು ತುಂಬಾ ಜನ ಸಿಗ್ತಾರೆ. ಆದರೆ ಈಗ ಇದೆಲ್ಲ ನಡೆಯಲ್ಲ. ಹೆಲ್ಮೆಟ್ಗಾಗಿ ಸ್ಪೆಷಲ್ ತಂತ್ರಜ್ಞಾನ ಒಂದು ಕಂಡುಹಿಡಿಯಲಾಗಿದೆ. ಅದು ಹೇಗೆ ಅಂದರೆ ಬೈಕ್ ಚಾಲನೆ ಮಾಡುವ ವ್ಯಕ್ತಿ ಹೆಲ್ಮೆಟ್ ಹಾಕಿಕೊಂಡರೆ ಮಾತ್ರ ಬೈಕ್ ಮುಂದೆ ಹೋಗುತ್ತದೆ. ಹೆಲ್ಮೆಟ್ ಹಾಕಿಲ್ಲ ಎಂದರೆ ಬೈಕ್ ಇದ್ದಕ್ಕೆ ಇದ್ದಾಗೆ ಸ್ಟಾಪ್ ಆಗುತ್ತೆ. ಸದ್ಯ ಇದೇನು ಅಂತಾ ನೋಡೋಣ. ಹೆಲ್ಮೆಟ್ ಹಾಕಿಕೊಂಡರೆ ಮಾತ್ರ ಬೈಕ್ ಸ್ಟಾರ್ಟ್ ಆಗಿ ರನ್ ಆಗುವಂತಹ ಹೊಸ ತಂತ್ರಜ್ಞಾನ ಅಳವಡಿಸಲು ಓಲಾ ಸ್ಕೂಟರ್ಸ್ ಮುಂದಾಗಿದೆ ಎನ್ನಲಾಗಿದೆ.
ಚಾಲಕ ಮೊದಲು ಹೆಲ್ಮೆಟ್ ಧರಿಸಿ ಬೈಕ್ ಏರಿದರೆ ಚಾಲನೆಗೆ ಅವಕಾಶ ಕೊಡುತ್ತದೆ. ಒಂದು ವೇಳೆ ಬೈಕ್ ಚಾಲನೆಯಲ್ಲಿ ಇರುವಾಗಲೇ ಹೆಲ್ಮೆಟ್ ತೆಗೆದರೆ ಹೆಲ್ಮೆಟ್ ಹಾಕಿಕೊಳ್ಳುವಂತೆ ಮೆಸೇಜ್ ಕೊಡುತ್ತದೆ. ಒಂದು ವೇಳೆ ಈ ಮೆಸೇಜ್ನಿಂದ ಎಚ್ಚೆತ್ತುಕೊಂಡು ಸವಾರ ಹೆಲ್ಮೆಟ್ ಧರಿಸಿದರೆ ಉತ್ತಮ. ಧರಿಸಲಿಲ್ಲ ಎಂದರೆ ಬೈಕ್ ಪಾರ್ಕಿಂಗ್ ಮೂಡ್ಗೆ ಹೋಗಿ ಆಫ್ ಆಗುತ್ತದೆಯಂತೆ.
ಈ ಒಂದು ಹೊಸ ತಂತ್ರಜ್ಞಾನ ಸಂಶೋಧನೆ ಮಾಡಲಾಗಿದ್ದು ಶೀಘ್ರದಲ್ಲೇ ಹೊಸದಾಗಿ ಬರುವ ಬೈಕ್ಗಳಲ್ಲಿ ಅಳವಡಿಸಲು ಓಲಾ ಕಂಪನಿ ಮುಂದಾಗಿದೆ. ಈ ಹಿಂದೆ ಬೇರೆ ಕಂಪನಿಯೊಂದು ಚಾಲಕನಿಗೆ ಹೆಲ್ಮೆಟ್ ಹಾಕಿಕೊಳ್ಳುವಂತೆ ಸಂದೇಶ ನೀಡುವ ತಂತ್ರಜ್ಞಾನ ಡೆವಲಪ್ ಮಾಡುವುದಾಗಿ ಹೇಳಿತ್ತು. ಆದರೆ, ಇದರಲ್ಲಿ ಬೈಕ್ ನಿಲ್ಲುತ್ತಿರಲಿಲ್ಲ. ಹೀಗಾಗಿ ಈ ಓಲಾದ ಹೊಸ ಐಡಿಯಾ ವರ್ಕೌಟ್ ಆಗುತ್ತಾ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಹೊಸ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?
ಸವಾರನು ಬೈಕ್ ಮೇಲೆ ಹೋಗಲು ರೆಡಿಯಾಗಿ ಕುಳಿತಾಗ ಡ್ಯಾಶ್ಬೋರ್ಡ್ನಲ್ಲಿನ ಕ್ಯಾಮೆರಾ ಚಾಲಕನ ಮುಖ ಸ್ಕ್ಯಾನ್ ಮಾಡುತ್ತೆ. ಹೆಲ್ಮೆಟ್ ಹಾಕಿದ್ದರೆ ಬೈಕ್ ಈಜಿಯಾಗಿ ಓಡಿಸಬಹುದು. ಒಂದು ವೇಳೆ ಹೆಲ್ಮೆಟ್ ಹಾಕಿಲ್ಲ ಎಂದರೆ ಕ್ಯಾಮೆರಾ ಮುಖವನ್ನು ಸ್ಕ್ಯಾನ್ ಮಾಡಿ ಹೆಲ್ಮೆಟ್ ಹಾಕಿಲ್ಲವೆಂದು ಬೈಕ್ನಲ್ಲಿನ ಸಿಸ್ಟಮ್ಗೆ ತಿಳಿಸುತ್ತದೆ. ಇದರಿಂದ ಬೈಕ್ ಪಾರ್ಕಿಂಗ್ ಮೋಡ್ಗೆ ಹೋಗಿ ಚಾಲನೆ ಅಸಾಧ್ಯವಾಗುತ್ತದೆ.
ಅಪಘಾತಕ್ಕೆ ಒಳಗಾದಾಗ ಅದೆಷ್ಟೋ ಮಂದಿ ಹೆಲ್ಮೆಟ್ ಧರಿಸದಿದ್ದರಿಂದ ಪ್ರಾಣವನ್ನೇ ಕಳೆದುಕೊಳ್ತಿದ್ದಾರೆ. ಭಾರತದಂತಹ ದೇಶಗಳಿಗೆ ಇಂತಹದೊಂದು ಆವಿಷ್ಕಾರದ ಅಗತ್ಯ ಇತ್ತು. ಆದಷ್ಟು ಬೇಗ ಹೆಲ್ಮೆಟ್ ಇಲ್ಲದೇ ಇದ್ದರೆ ಓಡದ ಬೈಕ್ ಮಾರುಕಟ್ಟೆಗೆ ಬಂದರೆ ಒಂದಷ್ಟು ಪ್ರಯಾಣಿಕರ ಜೀವ ಉಳಿಸಬಹುದು.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023