- ನಿಷೇಧವಾದರೂ ಕೆಲವು ಮೊಬೈಲ್ನಲ್ಲಿ ಲಭ್ಯವಿತ್ತು…
ಮೊಬೈಲ್ ಮತ್ತು ಪಬ್ಜಿ ಲೈಟ್ ಆವೃತ್ತಿ ದೇಶದಲ್ಲಿ ಲಭ್ಯವಾಗುತ್ತಿದ್ದ ಪಬ್ಜಿ ಗೇಮ್ ಭಾರತದಲ್ಲಿ ಈಗ ಸಂಪೂರ್ಣ ನಿಷೇಧಗೊಂಡಿದೆ. ದೇಶದಲ್ಲಿ ಸಂಪೂರ್ಣ ನಿಷೇಧ ಅನ್ವಯವಾಗಲಿದೆ.
ಚೀನಾ ಮೂಲದ ಅಪ್ಲಿಕೇಶನ್ ಮತ್ತು ಮೊಬೈಲ್ ಗೇಮ್ಗಳ ಮೇಲೆ ಕೇಂದ್ರ ಸರಕಾರ ಕ್ರಮ ಕೈಗೊಂಡು 200ಕ್ಕೂ ಅಧಿಕ ಗೇಮ್ ಮತ್ತು ಆಪ್ ನಿಷೇಧವಾಗಿದೆ. ಅದರ ಜತೆಗೇ ಜನಪ್ರಿಯ ಪಬ್ಜಿ ಗೇಮ್ ಕೂಡ ಬ್ಯಾನ್ ಆಗಿದೆ. ಹಾಗಿದ್ದೂ ಕೆಲವು ಬಳಕೆದಾರರಿಗೆ ಪಬ್ಜಿ ಮೊಬೈಲ್ ಮತ್ತು ಪಬ್ಜಿ ಲೈಟ್ ಆವೃತ್ತಿ ದೇಶದಲ್ಲಿ ಲಭ್ಯವಾಗುತ್ತಿತ್ತು. ಭದ್ರತೆ ಮತ್ತು ಸುರಕ್ಷತೆ ಕಾರಣಗಳಿಂದಾಗಿ ದೇಶದಲ್ಲಿ ಪಬ್ಜಿ ಸಹಿತ ಚೀನಾ ಮೂಲದ ವಿವಿಧ ಆಪ್ ಮತ್ತು ಮೊಬೈಲ್ ಗೇಮ್ ನಿಷೇಧಿಸಲಾಗಿದೆ. ಅದರಲ್ಲಿ ಪಬ್ಜಿ ಕೂಡ ಸೇರಿದೆ. ಆದರೂ ನಿಷೇಧದ ಬಳಿಕವೂ ಹಲವರು ಮೊದಲೇ ಪಬ್ಜಿ ಇನ್ಸ್ಟಾಲ್ ಮಾಡಿಕೊಂಡಿದ್ದರೆ, ಪಬ್ಜಿ ಲೈಟ್ ಮತ್ತು ಪಬ್ಜಿ ಮೊಬೈಲ್ ದೇಶದಲ್ಲಿ ಬಳಕೆಗೆ ಲಭ್ಯವಾಗಿತ್ತು. ಸೆ.2ರಂದು ನಿಷೇಧ ಹೇರಲಾಗಿತ್ತಾದರೂ, ಕಾರ್ಯನಿರ್ವಹಿಸುತ್ತಿದ್ದ ಪಬ್ಜಿಗೆ ಇಂದಿನಿಂದ ಸಂಪೂರ್ಣ ನಿಬರ್ಂಧ ಅನ್ವವಾಗಲಿದೆ.
ಪಬ್ಜಿ ಮೊಬೈಲ್ ಗೇಮ್ ಈಗ ದೇಶದಲ್ಲಿ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿಲ್ಲ. ಜತೆಗೆ ಈಗಾಗಲೇ ಡೌನ್ಲೋಡ್ ಮಾಡಿಕೊಂಡಿದ್ದರೂ, ಬಳಕೆ ಮಾಡಲು ಸಾಧ್ಯವಾಗುವುದಿಲ್ಲ.
ಫೇಸ್ಬುಕ್ನಲ್ಲಿ ಪಬ್ಜಿ ಪೆÇೀಸ್ಟ್: ದೇಶದಲ್ಲಿ ಕಾರ್ಯಾಚರಣೆ ನಿಲ್ಲಿಸುತ್ತಿರುವ ಕುರಿತು ಪಬ್ಜಿ ಫೇಸ್ಬುಕ್ನಲ್ಲಿ ಪೆÇೀಸ್ಟ್ ಮಾಡಿದ್ದು, ಸರಕಾರದ ನಿಯಮದ ಅನುಸಾರ ಪಬ್ಜಿ ದೇಶದಲ್ಲಿ ಲಭ್ಯವಿಲ್ಲ ಎಂದಿದೆ.