ಹ್ಯಾಟ್ರಿಕ್ ಮೋದಿ ಭಾರತ!
– ಜೂನ್ 9ಕ್ಕೆ ಮೋದಿ ಪದಗ್ರಹಣಕ್ಕೆ ಸಜ್ಜು
– ಇಡೀ ದೇಶಕ್ಕೆ ಕಾತುರ: ಎಲ್ಲೆಡೆ ಸಂಭ್ರಮ
NAMMUR EXPRESS NEWS
ನವ ದೆಹಲಿ: ಹಂಗಾಮಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೂನ್ 9, ಭಾನುವಾರ ವಾರ ಸಂಜೆ 6: 30ಕ್ಕೆ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಅನೇಕ ದೇಶ ವಿದೇಶಗಳ ಗಣ್ಯಾತಿ ಗಣ್ಯರು ಪ್ರಮಾಣ ವಚನದಲ್ಲಿ ಭಾಗಿಯಾಗಲಿದ್ದಾರೆ.
ಎನ್.ಡಿ.ಎ ಒಕ್ಕೂಟ ಬಹುಮತ ಪಡೆದಿದ್ದು ಇದೀಗ ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗಿ ಸಭೆಯಲ್ಲಿ ನಿರ್ಧಾರವಾಗುವ ಮೂಲಕ ಭಾರತದ ಹ್ಯಾಟ್ರಿಕ್ ಪ್ರಧಾನ ಮಂತ್ರಿಯಾಗಲಿದ್ದಾರೆ.
ದೇಶದ 14ನೇ ಪ್ರಧಾನಿಯಾಗಿ 2014ರಿಂದ ಇಲ್ಲಿವರೆಗೆ ಸತತವಾಗಿ ಆಡಳಿತ ನಡೆಸಿದ ಮೋದಿ ಪ್ರಧಾನಿಯಾಗಿ ವಿಶ್ವದಲ್ಲಿ ಭಾರತದ ಹೆಸರನ್ನು ಅಚ್ಚಳಿಯದಂತೆ ಮಾಡಿದ್ದರು. ಬಿಜೆಪಿ ಪಾಳಯದಲ್ಲಿ ಹೊಸ ಸಂಚಲನ ಮೂಡಿಸಿದೆ.