- ಮನೆ ಮನೆಯಲ್ಲೂ ಹರ್ ಘರ್ ತಿರಂಗಾ
- ಭಾರತದಲ್ಲಿ ಮೊಳಗಿದ ದೇಶ ಭಕ್ತಿ
- ಧ್ವಜಾರೋಹಣ ಏನು ಮಾಡಬೇಕು, ಏನು ಮಾಡಬಾರದು?
NAMMUR EXPRESS NEWS
ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಪೂರ್ಣಗೊಂಡು ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಆ.13 ರಿಂದ 15ರವರೆಗೆ ದೇಶದ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಲಿದೆ.
ಆ.13ರಿಂದ ಶುರುವಾದ ತ್ರಿವರ್ಣ ಧ್ವಜ ಪ್ರತಿ ಮನೆ ಮನೆ, ಕಚೇರಿಯಲ್ಲೂ ಹಾರಾಟ ನಡೆಯಲಿದೆ. ಕೋಟಿ ಕೋಟಿ ಜನ ತಮ್ಮ ದೇಶದ ಹೆಮ್ಮೆ ಮೆರೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಭಾವುಟ ಹಾರಿಸುವ ವೇಳೆ ಹಲವು ಎಚ್ಚರ ವಹಿಸಬೇಕಿದೆ.
ಏನೇನು ಎಚ್ಚರಿಕೆ ಇಲ್ಲಿದೆ ಮಾಹಿತಿ
- ಧ್ವಜದಲ್ಲಿ ಯಾವಾಗಲೂ ಕೇಸರಿ ಬಣ್ಣ ಮೇಲೆ ಬಂದು ಹಸಿರು ಬಣ್ಣ ಕೆಳಗಿರಬೇಕು
- ಹರಿದಿರುವ ಧ್ವಜ ಹಾರಿಸುವಂತಿಲ್ಲ
- ತ್ರಿವರ್ಣ ಧ್ವಜಕ್ಕಿಂತ ಎತ್ತರದಲ್ಲಿ ಅಥವಾ ಅದಕ್ಕೆ ಸರಿಸಮನಾಗಿ ಬೇರೆ ಯಾವುದೇ ಧ್ವಜ ಹಾರಿಸುವಂತಿಲ್ಲ
- ಧ್ವಜವನ್ನು ಅಲಂಕಾರಿಕ ವಸ್ತುವಾಗಿ ಬಳಸುವಂತಿಲ್ಲ
- ತುಡುವ ಬಟ್ಟೆಯಲ್ಲಿ ಸೊಂಟಕ್ಕಿಂತ ಕೆಳಭಾಗದಲ್ಲಿ ಧ್ವಜ ಇರುವಂತಿಲ್ಲ
- ಒಂದೇ ದಾರದಲ್ಲಿ ಎರಡು ಧ್ವಜ ಹಾರಿಸುವಂತಿಲ್ಲ
- ಧ್ವಜವನ್ನು ಯಾವುದೇ ಕಾರಣಕ್ಕೂ ನೆಲಕ್ಕೆ ತಾಕಿಸುವಂತಿಲ್ಲ. ಧ್ವಜಾರೋಹಣ ಹೇಗೆ?
ಧ್ವಜವನ್ನು ಅತ್ಯಂತ ಗೌರವಯುತವಾಗಿ ಹಾರಿಸಬೇಕು, ಧ್ವಜಸ್ತಂಬಕ್ಕೆ ಏರಿಸುವಾಗ ವೇಗವಾಗಿ ಏರಿಸಬೇಕು ಹಾಗೆಯೇ ಸ್ತಂಭದಿಂದ ಇಳಿಸುವಾಗ ನಿಧಾನವಾಗಿ ಇಳಿಸಬೇಕು.
ಹರಿದರೆ ಏನು ಮಾಡಬೇಕು?
ಒಂದು ವೇಳೆ ಧ್ವಜವು ಹರಿದರೆ ಅಥವಾ ಬಳಸಲಾಗದ ಸ್ಥಿತಿಗೆ ಬಂದರೆ ಅದನ್ನು ಖಾಸಗಿಯಾಗಿ ಗೌರವಯುತವಾಗಿ ಸುಟ್ಟು ಹಾಕಬೇಕು.
ಹೇಗೆ ಪ್ರದರ್ಶಿಸಬೇಕು
- ರಾಷ್ಟ್ರಧ್ವಜವೇ ಶ್ರೇಷ್ಠ ಅದಕ್ಕಿಂತ ಎತ್ತರದ ಸ್ಥಾನದಲ್ಲಿ ಬೇರೆ ಯಾವುದೇ ಧ್ವಜ ಅಥವಾ ಬಂಟಿಂಗ್ ಇರಬಾರದು, ರಾಷ್ಟ್ರಧ್ವಜವನ್ನು ಹಾರಿಸುವಾಗ ಅದರ ಮೇಲೆ ಹೂವುಗಳು ಹೂಮಾಲೆಗಳು ಅಥವಾ ಲಾಂಛನಗಳಂತಹ ಯಾವುದೇ ವಸ್ತುಗಳನ್ನು ಇರಿಸಬಾರದು.
- ರಾಷ್ಟ್ರಧ್ವಜ ನೆಲೆ ಮುಟ್ಟುವಂತಿರಬಾರದು ನೀರಿಗೆ ತಾಗಲು ಬಾರದು
- ರಾಷ್ಟ್ರಧ್ವಜಕ್ಕೆ ಹಾನಿ ಉಂಟಾಗುವ ಯಾವುದೇ ರೀತಿಯಲ್ಲಿ ಪ್ರದರ್ಶಿಸಬಾರದು
- ರಾಷ್ಟ್ರಧ್ವಜವನ್ನು ಮೇಜು ಅಥವಾ ವೇದಿಕೆಯನ್ನು ಮುಚ್ಚಲು ಅಥವಾ ಅಲಂಕರಿಸಲು ಬಳಸಬಾರದು.
- ಒಮ್ಮೆ ಧ್ವಜವನ್ನು ಹಾರಿಸಿದರೆ ಮಳೆ ಚಳಿ ಮಂಜು ಬಿಸಿಲು ಗಾಳಿ ಯಾವುದೇ ಸಂದರ್ಭದಲ್ಲಿ ಅದನ್ನು ಕೆಳಗಿಳಿಸಬಾರದು
ವಾಹನಗಳಲ್ಲಿ ಧ್ವಜ ಹಾರಿಸುವ ಹಾಗಿಲ್ಲ
ಮೋಟರು ಕಾರುಗಳ ಮೇಲೆ ರಾಷ್ಟ್ರಧ್ವಜವನ್ನು ಪ್ರದರ್ಶಿಸುವ ಹಕ್ಕು ಇರುವುದು ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರು, ಭಾರತದ ಮುಖ್ಯ ನ್ಯಾಯಮೂರ್ತಿಗಳು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಹೈಕೋರ್ಟ್ ನ್ಯಾಯಮೂರ್ತಿಗಳು, ಭಾರತೀಯ ರಾಯಭಾರಿ ಕಚೇರಿ, ಕ್ಯಾಬಿನೆಟ್ ಮಂತ್ರಿಗಳು, ರಾಜ್ಯ ಸಚಿವರು, ರಾಜ್ಯ ಅಥವಾ ಕೇಂದ್ರ ಆಡಳಿತ ಪ್ರದೇಶದ ಕ್ಯಾಬಿನೆಟ್ ಸಚಿವರು, ರಾಜ್ಯದ ಮುಖ್ಯಮಂತ್ರಿ, ಲೋಕಸಭಾ ಸ್ಪೀಕರ್, ರಾಜ್ಯಸಭೆಯ ಉಪಾಧ್ಯಕ್ಷರು, ಲೋಕಸಭೆಯ ಉಪ ಸಭಾಪತಿಗಳು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳ ಸ್ವೀಕರ್ ಗಳು, ರಾಜ್ಯಗಳಲ್ಲಿನ ವಿಧಾನ ಪರಿಷತ್ತಿನ ಉಪಾಧ್ಯಕ್ಷರು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಈ ವಿಧಾನಸಭೆಗಳ ಉಪ ಸಭಾಪತಿಗಳಿಗೆ ಮಾತ್ರ.
- ಧ್ವಜಾವರೋಹಣವನ್ನು 15.08.2022 ಸೋಮವಾರ ಸಂಜೆ ಸೂರ್ಯಾಸ್ತಮಾನಕ್ಕೆ ಮುಂಚೆ ಮಾಡುವುದು.
- ಈ ಆಚರಣೆಯ ನಂತರ ಧ್ವಜವನ್ನು ಗೌರವಯುತವಾಗಿ ಮಡಚಿ ಸುರಕ್ಷಿಸಿಟ್ಟು, ಮುಂದಿನ ವರ್ಷಗಳಲ್ಲಿ ಸ್ವಾತಂತ್ರೋತ್ಸವ ದಿನಗಳಂದು ಬಳಸಬಹುದು.