- ಯುವ ಜನತೆ, ಮಕ್ಕಳಿಗೆ ಅಪಾಯ ಈ ಆಟ
- ಚೀನಾ ಅಲ್ಲ ಭಾರತದಲ್ಲಿ ಮಾಡಿದ್ರು ನಷ್ಟ!
ನವ ದೆಹಲಿ: ಯುವ ಜನತೆ ಮತ್ತು ಮಕ್ಕಳನ್ನು ಚಟಕ್ಕೆ ಬೀಳಿಸಿದ್ದ ಪಬ್ ಜಿ ಗೇಮಿಂಗ್ ಆಟ ಮತ್ತೆ ಶುರುವಾಗಲಿದೆ. ಆದರೆ ಚೀನಾ ಮೂಲದ ಸರ್ವರ್ ನಿರ್ವಹಣೆ ಹೊಂದಿದ್ದ ಕಾರಣಕ್ಕೆ ಬ್ಯಾನ್ ಆಗಿದ್ದ ಆಟ ಮತ್ತೆ ಭಾರತಕ್ಕೆ ಎಂಟ್ರಿಯಾಗಿದ್ದು ಬೆಂಗಳೂರಿಂದ ನಿರ್ವಹಣೆಯಾಗಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ಮೊದಲೇ ಉದ್ಯೋಗ, ಕೆಲಸ ಇಲ್ಲದ ಯುವ ಜನತೆ, ಶಿಕ್ಷಣ ಇಲ್ಲದ ಮಕ್ಕಳ ಮೊಬೈಲ್ ವ್ಯಾಮೋಹಕ್ಕೆ ಈ ಆನ್ಲೈನ್ ಆಟ ಮ್ತಷ್ಟು ಹುಚ್ಚು ಹಿಡಿಸಲಿದೆ. ಜೊತೆಗೆ ದೇಶದದ ಯುವ ಜನತೆಯ ಕ್ರಿಯಾಶೀಲತೆ, ಹವ್ಯಾಸ, ದುಡಿಯುವ ಆಸಕ್ತಿಗೆ ಎಳ್ಳುನೀರು ಬಿಡಲಿದೆ. ಇನ್ನು ಈ ಆಟದ ಹುಚ್ಚಲ್ಲಿ ನೂರಾರು ಆತ್ಮಹತ್ಯೆಗಳು, ಸಾವಿರಾರು ಮಾನಸಿಕ ರೋಗಿಗಳು, ಡೈವೋರ್ಸ್ಗಳು ನಡೆದಿದ್ದವು. ಈ ಆಟದ ಬ್ಯಾನ್ಗಾಗಿ ಸಾಮಾಜಿಕ ತಾಣದಲ್ಲಿ ಭಾರೀ ಹೋರಾಟ ನಡೆದಿತು. ಇದೀಗ ಪಬ್ಜಿ ಗೇಮ್ ಮತ್ತೆ ದೇಶದಲ್ಲಿ ಹೊಸರೂಪದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ.
ಪಬ್ಜಿ ಇಂಡಿಯಾ ಪ್ರೈ. ಲಿಮಿಟೆಡ್ ಹೆಸರಿನಲ್ಲಿ ಹೊಸ ಸಂಸ್ಥೆ ದೇಶದಲ್ಲಿ ನೋಂದಣಿಯಾಗಿದ್ದು, ಪೂರ್ತಿ ಗೇಮಿಂಗ್ ಸರ್ವರ್ ನಿರ್ವಹಣೆ ಮತ್ತು ಬಳಕೆದಾರರ ಮಾಹಿತಿಯನ್ನು ದೇಶದಲ್ಲೇ ನಿರ್ವಹಿಸುವ ಭರವಸೆಯನ್ನು ಪಬ್ಜಿ ನೀಡಿದೆ. ಸರಕಾರದ ನಿಯಮಾವಳಿಗೆ ಅನುಗುಣವಾಗಿ, ಗೇಮಿಂಗ್ ಡಾಟಾ ನಿರ್ವಹಣೆಯನ್ನು ದೇಶದಲ್ಲೇ ನಡೆಸುವ ಯೋಜನೆಯನ್ನು ಪಬ್ಜಿ ಹೊಂದಿದೆ. ಇಲ್ಲಿ ಕಂಪನಿ ವಯುಕ್ತಿಕ ಮಾಹಿತಿ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಎಂದಿದೆ. ಆದರೆ ಇಲ್ಲಿ ಹಂಚಿಕೊಳ್ಳುವುದು ಮುಖ್ಯ ಅಲ್ಲ ಸಾಂಆಜಿಕ ಸ್ವಾಸ್ಥ್ಯ ಮುಖ್ಯ. 6 ಕೋಟಿ ರೂ. ವರೆಗಿನ ಬಹುಮಾನದ ಮೊತ್ತವನ್ನು ಪಬ್ಜಿ ಪ್ಲೇಯರ್ಸ್ಗೆ ನೀಡುವ ಸಾಧ್ಯತೆಯಿದೆ. ಆಯ್ದ ಆಂಡ್ರಾಯ್ಡ್ ಮತ್ತು ಒಎಸ್ ಬಳಕೆದಾರರಿಗೆ ಈಗಾಗಲೇ ಪಬ್ಜಿ ಹೊಸ ಪ್ರಿ ರಿಜಿಸ್ಟ್ರೇಶನ್ ಆರಂಭಿಸಿದೆ. ಹೊಸ ಗೇಮ್ ಬಿಡುಗಡೆ ಕುರಿತು ಪಬ್ಜಿ ಇನ್ನಷ್ಟೇ ಅಧಿಕೃತವಾಗಿ ಹೇಳಿಕೆ ನೀಡಲಿದೆ. ಆದರೆ ಮೋದಿ ಸರ್ಕಾರ ಈ ಆಟವನ್ನು ಚೀನಾದಿಂದ ಕಸಿದು ಭಾರತಕ್ಕೆ ಬಿಟ್ಟರೆ ಭಾರತದ ಯುವ ಸಮುದಾಯ ಹಾಲಾಗುವುದರಲ್ಲಿ ಸಂಶಯವೇ ಇಲ್ಲ. ಮೂರು ಹೊತ್ತು ಜೂಜು, ಆಟ ಆಡುತ್ತಾ ಕುಳಿತರೇ ದೇಶ ಉದ್ಧಾರ ಯಾವಾಗ..? ಈ ಬಗ್ಗೆ ದೊಡ್ಡ ಹೋರಾಟ ನಡೆಯಬೇಕಿದೆ.