-ಕಳೆದ ವರ್ಷ ಅಂತರಾಷ್ಟೀಯ ಕ್ರಿಕೆಟಿಗೆ ವಿದಾಯ ಹೇಳಿದ್ದ ಎಡಗೈ ಆಟಗಾರ
-ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂದುವರಿಯಲಿರುವ ಅಲ್ರೌಂಡರ್
ಮಹೇಂದ್ರ ಸಿಂಗ್ ಧೋನಿ ಬೆನ್ನಲ್ಲೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಲು ಕಾರಣವೇನುಂಬುದನ್ನು ಸುರೇಶ್ ರೈನಾ ಬಹಿರಂಗಪಡಿಸಿದ್ದಾರೆ.
ಕಳೆದ ವರ್ಷ(2020) ಆಗಸ್ಟ್ 15 ರಂದು ಎಂಎಸ್ ಧೋನಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ಸುರೇಶ್ ರೈನಾ ಕೂಡ ಅಂತಾಷ್ಟ್ರೀಯ ಕ್ರಿಕೆಟ್ನಿಂದ ಹೊರ ಬಂದರು. ಈ ನಿರ್ಧಾರ ತೆಗೆದುಕೊಳ್ಳಲು ಸರಿಯಾದ ಸಮಯ ಎಂದು ಆ ವೇಳೆ ನನಗನಿಸಿತ್ತು ಎಂದು ಎಡಗೈ ಆಟಗಾರ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ಗೆ ಮಹತ್ವದ ಕೊಡುಗೆ ನೀಡಿರುವ ಎಂಎಸ್ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದು ಎಲ್ಲರಿಗೂ ಆಘಾತ ತಂದಿತ್ತು. ಟೀಮ್ ಇಂಡಿಯಾ ಮಾಜಿ ನಾಯಕ ಹಠಾತ್ ನಿವೃತ್ತಿ ಘೋಷಿಸುತ್ತಾರೆಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಧೋನಿ ವಿದಾಯ ಹೇಳಿದ ಕೆಲವೇ ನಿಮಿಷಗಳಲ್ಲಿ ರೈನಾ ಕೂಡ ತಮ್ಮ ನಾಯಕನ ಹಾದಿಯನ್ನೇ ತುಳಿದಿದ್ದರು.
ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲು ಸೂಕ್ತ ಸಮಯವಾಗಿತ್ತು. ಆದರೆ ಎಂ ಎಸ್ ಧೋನಿ ಅವರೊಂದಿಗಿನ ಸ್ನೇಹ ಇದಕ್ಕಿಂತಲೂ ವಿಭಿನ್ನವಾದದ್ದು. ನಾವಿಬ್ಬರೂ ಭಾರತ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಲ್ಲಿ ಹಲವು ಪ್ರಶಸ್ತಿಗಳನ್ನು ಒಟ್ಟಾಗಿ ಗೆದ್ದಿದ್ದೇವೆ. ಮುಂದಿನ ದಿನಗಳಲ್ಲಿ ಯೋಜನೆಗೆ ತಕ್ಕಂತೆ ಎಲ್ಲವೂ ನಡೆಯಲಿದೆ ಎಂದು ಸುರೇಶ್ ರೈನಾ ಭಾವಿಸಿದ್ದಾರೆ.