ರಾಜಧಾನಿಯಲ್ಲಿ ಡಿ.15ರಂದು ಕ್ರಿಯೇಟಿವ್ ಪುಸ್ತಕ ಅನಾವರಣ, ಪ್ರಶಸ್ತಿ ಪ್ರದಾನ
– ಡಾ.ಪದ್ಮರಾಜ ದಂಡಾವತಿ ಕೃತಿ ಆಯ್ಕೆ: ಕೃತಿಗಾರರ ಉಪಸ್ಥಿತಿ
– ಬರಹಗಾರ ಜೋಗಿ, ಸಾಹಿತಿ ಬಿ.ಆರ್.ಲಕ್ಷ್ಮಣ ರಾವ್ ಅವರಿಂದ ಬಿಡುಗಡೆ
NAMMUR EXPRESS NEWS
ಉಡುಪಿ: ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆ(ಪುಟಗಳೊಂದಿಗೆ ಪಯಣ) ಹಾಗೂ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ನ ಶ್ರೀಕೃಷ್ಣರಾಜ ಪರಿಷತ್ ಮಂದಿರದಲ್ಲಿ ಡಿ.15ರಂದು ಬೆಳಗ್ಗೆ 10ಕ್ಕೆ 6 ಪುಸ್ತಗಳ ಅನಾವರಣ ಹಾಗೂ ‘ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ-2024’ ಪ್ರದಾನ ಸಮಾರಂಭ ನಡೆಯಲಿದೆ. ಬರಹಗಾರ ಜೋಗಿ, ಸಾಹಿತಿ ಬಿ.ಆರ್.ಲಕ್ಷ್ಮಣ ರಾವ್ ಪಾಲ್ಗೊಳ್ಳಲಿದ್ದಾರೆ. ಕೃತಿಕಾರರಾದ ಕೆ.ಸತ್ಯನಾರಾಯಣ್, ಡಿ.ಎಸ್.ಚೌಗಲೆ, ನರೇಂದ್ರ ರೈ ದೇರ್ಲ, ಬಾಳಾಸಾಹೇಬ್ ಲೋಕಾಪುರ, ನರೇಂದ್ರ ಪೈ, ಡಾ.ಲಕ್ಷ್ಮಣ ವಿ.ಎ. ಪಾಲ್ಗೊಳ್ಳಲಿದ್ದಾರೆ.
ಕೃತಿಗಳ ಅನಾವರಣ
ಅಂಪೈರ್ ಮೇಡಂ (ಕಾದಂಬರಿ), ವಾರಸಾ (ಕಥಾ ಸಂಕಲನ), ಹಸಿರು ಅಧ್ಯಾತ್ಮ (ಲೇಖನಗಳು), ದೇಹಿ(ಕಾದಂಬರಿ), ಕಾವ್ಯ ಸಂಭವ (ಕವಿಯ ಟಿಪ್ಪಣಿ ಪುಸ್ತಕ) ಹಾಗೂ ಪಿಎಚ್ಸಿ ಕವಲುಗುಡ್ಡ (ಕಾದಂಬರಿ) ಬಿಡುಗಡೆಗೊಳ್ಳಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಶ್ವತ್ಥ ಎಸ್.ಎಲ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
– ಡಾ.ಪದ್ಮರಾಜ ದಂಡಾವತಿ ಕೃತಿ ಆಯ್ಕೆ
‘ಕ್ರಿಯೇಟಿವ್ ಪುಸ್ತಕ ಮನೆ’ ಮೊದಲ ವರ್ಷದ ಪುಸ್ತಕ ಪ್ರಶಸ್ತಿಯನ್ನು ಬರಹಗಾರ ಹಾಗೂ ಪತ್ರಕರ್ತ ಪದ್ಮರಾಜ ದಂಡಾವತಿ ಅವರ ‘ಉಳಿದಾವ ನೆನೆಪು’ ಕೃತಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿಗೆ 78 ಕೃತಿಗಳು ಬಂದಿದ್ದು, ರಾಜ್ಯದ ಹಲವು ಸಾಹಿತಿಗಳನ್ನೊಳಗೊಂಡ ತಂಡ ಪ್ರಶಸ್ತಿಗೆ ಆಯ್ಕೆ ಮಾಡಿದೆ.