ಡಿ. 19ಕ್ಕೆ ‘ಪರ್ಣ ಕುಟೀರ’ ಯಕ್ಷಗಾನ ಪ್ರಸಂಗ
– ಸರಕಾರಿ ಶಾಲಾ ಕಟ್ಟಡ ನಿರ್ಮಾಣದ ಸಹಾಯಾರ್ಥವಾಗಿ ಯಕ್ಷಗಾನ
– ಮರ್ದಿನಿ ದೇವಸ್ಥಾನದ ವಠಾರದಲ್ಲಿ ಈ ವರ್ಷದ ಸೂಪರ್ ಹಿಟ್ ಪ್ರಸಂಗ!
– ಯಕ್ಷಾಭಿಮಾನಿಗಳು ಹಾಗೂ ಶಿಕ್ಷಣ ಪ್ರೇಮಿಗಳ ಪ್ರೋತ್ಸಾಹವಿರಲಿ
NAMMUR EXPRESS NEWS
ಉಡುಪಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರೆಶಿರೂರು ಇದರ ಕಟ್ಟಡ ನಿರ್ಮಾಣದ ಸಹಾಯಾರ್ಥವಾಗಿ ಶ್ರೀ ಸತ್ಯ ರಂಜನ್ ಹೆಗಡೆ ಅರಶಿರೂರು ಇವರ ಸಂಯೋಜನೆಯಲ್ಲಿ ಅನಂತ ಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿ, ಪೆರ್ಡೂರು ಇವರಿಂದ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಪೆರ್ಡೂರು ಮೇಳದವರಿಂದ ಡಿ. 19 ಗುರುವಾರ ರಾತ್ರಿ 8:30 ಕ್ಕೆ ಸರಿಯಾಗಿ ಅರೆ ಶಿರೂರು ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ವಠಾರದಲ್ಲಿ ಈ ವರ್ಷದ ಸೂಪರ್ ಹಿಟ್ ಪ್ರಸಂಗ ‘ಪರ್ಣ ಕುಟೀರ’ ಯಕ್ಷಗಾನ ಸಹಾಯಾರ್ಥವಾಗಿ ನಡೆಯಲಿದೆ. ಯಕ್ಷಾಭಿಮಾನಿಗಳು ಹಾಗೂ ಶಿಕ್ಷಣ ಪ್ರೇಮಿಗಳು ಹೆಚ್ಚಿನ ಸಹಕಾರ ನೀಡಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಹಾಗೂ ಯಕ್ಷ ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿ ಈ ಮೂಲಕ ವಿನಂತಿಸಲಾಗಿದೆ.