ಮಂಗನ ಕಾಯಿಲೆ ತುರ್ತು ಚಿಕಿತ್ಸೆ ನಿರಾಕರಿಸಿದರೆ ಆಸ್ಪತ್ರೆ ಲೈಸೆನ್ಸ್ ರದ್ದು!
-ಆಂಬುಲೆನ್ಸ್ ಮೇಲೆ ನಿಗಾ ಇಡಲು ಹೊಸ ವ್ಯವಸ್ಥೆ
NAMMUR EXPRESS NEWS
ಉಡುಪಿ : ಸರ್ಕಾರದೊಂದಿಗೆ ವಿವಿಧ ಯೋಜನೆಗಳ ಅಡಿ ಸಹಭಾಗಿತ್ವ ಪಡೆದರೂ ತುರ್ತು ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ಪರವಾನಗಿಯನ್ನು ಕೆಪಿಎಂಎ ಕಾಯ್ದೆ ಅಡಿ ರದ್ದುಪಡಿಸಲಾಗುವುದು ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಸಿದ್ದರು. ಉಡುಪಿಯ ಅಜ್ಜರಕಾಡಿನಲ್ಲಿ ನಡೆದ ಕೆಎಫ್.ಡಿ ಬಾಧಿತ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕೆಎಫ್ಡಿ ಪಾಸಿಟಿವ್ ಇರುವ ಇಬ್ಬರು ರೋಗಿಗಳು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.12 ಕೆಎಫ್ಡಿ ಪೀಡಿತ ಜಿಲ್ಲೆಗಳಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡದಿಂದ 70 ಪ್ರಕರಣಗಳು ವರದಿಯಾಗಿವೆ. ವಿಡಿಎಲ್ ಶಿವಮೊಗ್ಗ ಮತ್ತು ಎಂಐವಿ ಮಣಿಪಾಲ ಪ್ರಯೋಗಾಲಯವನ್ನು ಕೆಎಫ್ಡಿ ಪರೀಕ್ಷೆಗೆ ಗುರುತಿಸಲಾಗಿದೆ ಎಂದು ತಿಳಿಸಿದರು.
ಆಂಬುಲೆನ್ಸ್ ಮೇಲೆ ನಿಗಾ ಇಡಲು ಹೊಸ ವ್ಯವಸ್ಥೆ
108 ಆಂಬುಲೆನ್ಸ್ ಸೇವೆಯಲ್ಲಿನ ಲೋಪಗಳನ್ನು ಸರಿಪಡಿಸಿ ಆಧುನೀಕರಣಗೊಳಿಸಲಾಗುತ್ತಿದೆ. ಅದಕ್ಕಾಗಿ ಮಾನಿಟರಿ ಮೆಕ್ಯಾನಿಸಂ ಸಿಸ್ಟಂ ಜಾರಿಗೆ ತರಲಾಗುತ್ತಿದೆ. 272 ಹೊಸ ಆಂಬುಲೆನ್ಸ್ ಕೊಡಲಾಗಿದೆ. ಚಾಲಕರು ಮತ್ತು ಸಿಬ್ಬಂದಿ ನಿರ್ವಹಣೆ ಸುಸೂತ್ರಗೊಳಿಸಲು ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದರು.