ಕಲಿಯುಗ ಕರ್ಣ ರವಿ ಕಟಪಾಡಿ!
– ಮಕ್ಕಳ ಅರೋಗ್ಯದ ಚಿಕಿತ್ಸೆಗಾಗಿ ವಿವಿಧ ವೇಷ
– 12 ವರ್ಷದಲ್ಲಿ 1.13 ಕೋಟಿ ಹಣ ವೇಷ ಹಾಕಿ ಬಡ ಮಕ್ಕಳಿಗೆ ಸಹಾಯ
– ಕೂಲಿ ಕಾರ್ಮಿಕನ ಸೇವೆಯ “ಅವತಾರ್”!
NAMMUR EXPRESS NEWS
ಉಡುಪಿ: ಅದೆಷ್ಟೋ ಜನರಿಗೆ ಕೋಟಿಗಟ್ಟಲೆ ಹಣವಿದ್ದರೂ ಸಹ ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಭಾವವಿರುವುದಿಲ್ಲ. ಆದರೆ ಇಲ್ಲೊಬ್ಬ ಕೂಲಿ ಕಾರ್ಮಿಕ ಮಕ್ಕಳ ಅರೋಗ್ಯ ಹಾಗೂ ಶಿಕ್ಷಣಕ್ಕಾಗಿ ವಿವಿಧ ವೇಷ ತೊಟ್ಟು ದೇಶ ಮಟ್ಟದಲ್ಲಿ ಸುದ್ದಿಯಾಗಿದ್ದಾನೆ. ಇವನ ಸೇವೆ ಇತರರಿಗೂ ಮಾದರಿ ಆಗಿದೆ. ಭೂತ, ಶಕ್ತಿಮಾನ್ ಸೇರಿ ವಿವಿಧ ವೇಷ ತೊಟ್ಟು ಮರದಿಂದ ಮರಕ್ಕೆ ಹಾರಿ, ಪಟ್ಟಣದ ಮನೆ ಮನೆಗೆ ತೆರಳಿ ಹಣ ಸಂಗ್ರಹ ಮಾಡಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಅನೇಕ ಮಕ್ಕಳ ಜೀವ ಉಳಿಸಿರುವ ಈತನ ಹೆಸರು ಕರಾವಳಿ ಉಡುಪಿಯ ರವಿ ಕಟಪಾಡಿ.
ಕೂಲಿ ಕಾಯಕದಿಂದ ಸಮಾಜ ಸೇವೆಗೆ!
ರವಿ ಕಟಪಾಡಿ ಸೆಂಟ್ರಿಂಗ್ ದಿನ ಕೂಲಿ ಕಾರ್ಮಿಕರಾದರೂ ಸಹ ಇವರು ಮಾಡುವ ಸಮಾಜ ಸೇವೆ ಎಲ್ಲರಿಗೂ ಮಾದರಿ.
ಬಡ ಕುಟುಂಬದಿಂದ ಬಂದ ಕಾರಣ ಮನೆಯಲ್ಲಿದ್ದ ಕಷ್ಟಗಳು ಕಟಪಾಡಿಯವರನ್ನು 9ನೇ ತರಗತಿಗೆ ಓದುವುದನ್ನು ಬಿಡುವಂತೆ ಮಾಡುತ್ತದೆ. ಅಲ್ಲಿಂದ ದಿನ ಕೂಲಿ ಕಾರ್ಮಿಕರಾಗಿ ಜೀವನ ನಡೆಸುವ ಬಂದವರು ಕಟಪಾಡಿಯವರು. ತಮ್ಮ ಕಷ್ಟದ ಜತೆಗೆ ಇನ್ನೊಬ್ಬರಿಗೆ ನೆರವಾಗುವ ಜೀವನ ಶೈಲಿ ಇವರದ್ದು. ಟಿವಿಯಲ್ಲಿ ಬಂದ ಒಂದು ಕಷ್ಟದ ಕಥೆ ಇವರ ಜೀವನದ ಗುರಿಯನ್ನೆ ಬದಲಾಯಿಸಿತು. ತಾವು ಜೀವನದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎಂಬುದನ್ನು ಪ್ರೆರೇಪಿಸಿತು.
ಒಬ್ಬ ಮಹಿಳೆ ತನ್ನ ಮಗಳ ಚಿಕಿತ್ಸೆಗೆ ಹಣದ ಅವಶ್ಯಕತೆಯಿದೆ ಎಂದು ಅವರು ಟಿವಿಯಲ್ಲಿ ಹೇಳಿ ಕೊಂಡಿದ್ದರು. ಆ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಹಣ ಸಂಗ್ರಹಿಸಿ ಆ ಹಣವನ್ನು ಮಹಿಳೆಗೆ ನೀಡಲು ರವಿ ನಿರ್ಧರಿಸಿದ್ದರು. ಉಡುಪಿ ಜಿಲ್ಲೆಯಾದ್ಯಂತ ಮನೆ ಮನೆಗೆ ತೆರಳಿ ವೇಷಭೂಷಣ ತೊಡಿಸಿ ನಿಧಿ ಸಂಗ್ರಹಿಸಿದರು. ಮಹಿಳೆಗೆ ಚಿಕಿತ್ಸೆಗೆ ಹಣ ನೀಡಿದರು.
ಅನೇಕ ಸಂಘ ಸಂಸ್ಥೆಗಳ ನೆರವು!
MILAAP ಮತ್ತು Ketto ನಂತಹ ಹಲವಾರು ಕ್ರೌಡ್ಫಂಡಿಂಗ್ ಪ್ಲಾಟ್ಫಾರ್ಮ್ಗಳು ಅವರ ಉಪಕ್ರಮದಲ್ಲಿ ಅವರಿಗೆ ಸಹಾಯ ಮಾಡಲು ಮುಂದೆ ಬಂದಿವೆ. MILAAP ‘ರವಿ ಕಟ್ಟಾಡಿ, ಎ ಕೈಂಡ್ ಹಾರ್ಟೆಡ್ ಮಾನ್ ಅರ್’ ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರವನ್ನು ಮಾಡಿದೆ. ಮತ್ತು ಅವರು ರೂ. 16,80,000 ರೂ ನೆರವು ಬಂದಿದೆ. ಹಲವು ವರ್ಷಗಳಿಂದ ರವಿ ಮತ್ತು ಅವರ ತಂಡ 48 ಮಕ್ಕಳಿಗೆ 1.13 ಕೋಟಿಗೂ ಹೆಚ್ಚು ಸಹಾಯ ಮಾಡಿದ್ದಾರೆ. ಹಿಂದಿಯ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮಕ್ಕೂ ರವಿ ಹೋಗಿದ್ದರು.
ಮಕ್ಕಳ ಚಿಕಿತ್ಸೆಗೆ ಜೀವದ ಹಂಗು ತೊರೆದು ವೇಷ!
ರವಿ ಕಟಪಾಡಿಯವರಿಗೆ ಇರಲೂ ಸ್ವಂತ ಮನೆಯಿಲ್ಲ ಆದರೂ ಸಹ ಇವರ ಕಲೆಯಿಂದ ಸಿಗುವ ಲಕ್ಷಗಟ್ಟಲೆ
ಹಣದಲ್ಲಿ ಒಂದು ನಯಾಪೈಸೆ ಸಹ ತೆಗೆದು ತಮ್ಮ ಸ್ವಂತ ಖರ್ಚಿಗೆ ಬಳಸುವುದಿಲ್ಲ. ಸೆಂಟ್ರಿಂಗ್ ಕೆಲಸ ಮಾಡುವ ಇವರು ದಾನಿಗಳ ಸಹಾಯ ಹಾಗೂ ತನ್ನ ತಂದೆಯ ಆಸೆಯಂತೆ ಮನೆ ಕಟ್ಟುತ್ತಿದ್ದಾರೆ. ಈಗ ಸಿಕ್ಕ ಪ್ರತಿ ರೂಪಾಯಿಯನ್ನು ಮಕ್ಕಳ ವೈದ್ಯಕೀಯ ಖರ್ಚಿಗೆ ಬಳಸುವುದರಿಂದ ಇವರು ಎಲ್ಲರಿಕ್ಕಿಂತ ವಿಶೇಷವಾಗಿದ್ದಾರೆ. ಕಳೆದ 12 ವರ್ಷದಿಂದ ಇಂತಹ ಮಾನವೀಯ ಸೇವೆ ಮಾಡಿಕೊಂಡು ಬಂದಿದ್ದಾರೆ. ಉಡುಪಿಯ ಪ್ರತಿಯೊಬ್ಬರಿಗೂ ಚಿರಪರಿಚಿತ ರವಿ ಕಟಪಾಡಿ. ಮಕ್ಕಳ ಅರೋಗ್ಯಕ್ಕಾಗಿ ಕಳೆದ 12 ವರ್ಷದಿಂದ ನವೀನ ರೀತಿಯ ವೇಷ ಭೂಷಣತೊಟ್ಟು ಹಣ ಸಂಗ್ರಹ ಮಾಡಿ ಮಕ್ಕಳ ಚಿಕಿತ್ಸೆಗೆ ನೀಡುತ್ತಾರೆ.
ವೇಷ ತೊಟ್ಟು ನಟಿಸುವುದು ಸುಲಭದ ಕೆಲಸ ಅಲ್ಲ!
ಎರಡು ದಿನಗಳ ಕಾಲ ವೇಷಭೂಷಣಗಳನ್ನು ತೊಟ್ಟು ನಟಿಸುವುದು ಸುಲಭವಲ್ಲ. ಕೆಲವೊಮ್ಮೆ ಚರ್ಮದ ಮೇಲೆ ನೇರವಾಗಿ ಚಿತ್ರಿಸಿದ ಬಣ್ಣದಿಂದಾಗಿ ಚರ್ಮ ಸುಡುತ್ತದೆ. ಕೆಲವೊಮ್ಮೆ ನೂರಾರು ಮಾತ್ರೆ ತಿಂದಿದ್ದಾರಂತೆ ರವಿ. ವೇಷ ಹಾಕಿದ ಸಮಯದಲ್ಲಿ ಇವರು ಬರೀ ನೀರು ಮತ್ತೆ ಎಳನೀರು ಮಾತ್ರ ಸೇವಿಸುತ್ತಾರೆ. ಇಷ್ಟೇಲ್ಲಾ ಕಷ್ಟ ಪಟ್ಟು ಜನರ ಸೇವೆಯನ್ನು ಸ್ವಾರ್ಥ ವಿಲ್ಲದೆ ಮಾಡುತ್ತಾರೆ. ಈ ವರ್ಷವೂ ವಿಭಿನ್ನ ಫ್ರಿಕ್ಷನ್ ವೇಷದೊಂದಿಗೆ ಸಹಾಯ ಮಾಡಲು ರವಿ ಮುಂದಾಗಿದ್ದಾರೆ.
ಇವರ ಸೇವೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ , ದೇವರು ಇವರಿಗೆ ಆರೋಗ್ಯ ನೀಡಲಿ. ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಇವರಿಗೆ ಸಿಗಲಿ ಎಂಬುದು ನಮ್ಮೂರ್ ಎಕ್ಸ್ ಪ್ರೆಸ್ ಆಶಯ.