ಕರಾವಳಿಯಲ್ಲಿ ಮತ್ತೆ ಕಡಿಮೆಯಾಯ್ತು ಮಳೆ!
– ಬಿಸಿಲು, ಸೆಕೆ ಹೆಚ್ಚಳ: ಜನರಿಗೆ ಕಿರಿಕಿರಿ
– ಮಳೆ ಇಲ್ಲದಿದ್ದರೆ ಮುಂದೆ ನೀರಿಗೆ ಬರಗಾಲ!
NAMMUR EXPRESS NEWS
ಮಂಗಳೂರು/ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಮಳೆ ತೀವ್ರತೆ ಮತ್ತೆ ಕಡಿಮೆಯಾಗಿದೆ. ಭಾನುವಾರ ದಿನವಿಡೀ ಮೋಡ, ಬಿಸಿಲಿನ ವಾತಾವರಣ ಇತ್ತು. ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆ ವರೆಗೆ ಸಾಮಾನ್ಯ ಮಳೆಯಾಗಿದ್ದು, ಬಳಿಕ ಕಡಿಮೆಯಾಗಿದೆ. ಸೋಮವಾರ ಬೆಳಿಗ್ಗೆ ಮಳೆಯಾಗಿದೆ. ಎರಡು ದಿನಗಳ ಉತ್ತಮ ಮಳೆಯಿಂದ ಸಂತಸಗೊಂಡಿದ್ದ ರೈತರು ಮತ್ತೆ ಮಳೆ ಇಳಿಮುಖವಾಗುವ ಲಕ್ಷಣ ಕಂಡು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನೊಂದೆಡೆ ಸೆಕೆಯೂ ಹೆಚ್ಚಾಗುತ್ತಿದೆ. ಭಾನುವಾರ ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 29.2 ಡಿ.ಸೆ, ಮತ್ತು ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಮಳೆ ಇಲ್ಲದೆ ಜನ ಕಂಗಾಲು!
ಮಳೆ ಇಲ್ಲದ ಕಾರಣ ಮುಂದೆ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ಬಿಸಿಲಿನ ಝಳ ಹೆಚ್ಚಿದೆ.
ರೈತರು ಕೂಡ ಮಳೆ ಇಲ್ಲದಿದ್ದರೆ ಜಮೀನು ನಾಟಿ ಕಷ್ಟ ಆಗಲಿದೆ.