ಬೆರಳಂಚಿನಲ್ಲೇ ಆರೋಗ್ಯ
ಈ ನೆಗಡಿ ಎಲ್ಲರನ್ನೂ ಕೆಲವೊಮ್ಮೆ, ಕೆಲವರನ್ನು ಎಲ್ಲ ಕಾಲಕ್ಕೂ ಕಾಡುವ ಚಿರಪರಿಚಿತ ತೊಂದರೆ. ಮೂಗು ಕಟ್ಟುವುದು, ಮೂಗಿನಲ್ಲಿ ನೀರು ಸುರಿಯುವುದು, ಸೀನುತ್ತಲಿರುವುದು, ತಲೆ ಭಾರ, ಇತ್ಯಾದಿ ಲಕ್ಷಣಗಳು ಆಗಾಗ ಮೈದೋರುತ್ತದೆ.
ಇಂತಹ ಸಂದರ್ಭದಲ್ಲಿ ಅರ್ಧ ಗೇಣಿನಷ್ಟು ಅಮೃತಬಳ್ಳಿಯ ಕಾಂಡವನ್ನು ಸ್ವಲ್ಪ ನೀರಿನೊಂದಿಗೆ ಚೆನ್ನಾಗಿ ಜಜ್ಜಿ ಹಿಂಡಿ ಅರ್ಧ ಚಮಚದಷ್ಟು ರಸ ತೆಗೆದು ಅದರೊಂದಿಗೆ ಕಾಲು ಚಮಚದಷ್ಟು ಹಸಿ ಶುಂಠಿ ರಸ ಸೇರಿಸಿ ನಾಲ್ಕು ಕಾಳು ಕರಿ ಮೆಣಸಿನ ಪುಡಿ ಬೆರೆಸಿ ದಿನಕ್ಕೆ ಎರಡರಿಂದ ಮೂರು ಬಾರಿ ಖಾಲಿ ಹೊಟ್ಟೆಯಲ್ಲಿ ಆಹಾರಕ್ಕೆ ಮೊದಲು ಸೇವಿಸಿ. ಕಫವನ್ನು ಕರಗಿಸಿ ಶುದ್ಧಿ ಮಾಡುವ ಗುಣ ಈ ಔಷಧಿಗಿದೆ.