- ವಿನಯ್ ಗುರೂಜಿ, ಆರಗ, ಕಿಮ್ಮನೆ, ಆರ್.ಎಂ ಉದ್ಘಾಟನೆ
- ಮೊದಲ ದಿನದಿಂದ ಗ್ರಾಹಕರ ಕುತೂಹಲ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದಲ್ಲಿರುವ ಟಿ.ಎಸ್.ಟಿ ದಿನಸಿ ಉತ್ಪನ್ನಗಳ ಬೃಹತ್ ಮಳಿಗೆಯನ್ನು ಅವಧೂತ ವಿನಯ್ ಗುರೂಜಿ ದಿವ್ಯ ಸಾನಿಧ್ಯದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟನೆಯನ್ನು ಮಾಡಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಡಾ.ಆರ್.ಎಂ.ಮಂಜುನಾಥಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಎಂಜಿ ಚನ್ನವೀರಪ್ಪ, ಪ ಪಂ ಅಧ್ಯಕ್ಷರಾದ ಶಬನಂ, ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾದ ಶ್ರೀ ಎಚ್.ಎನ್ ವಿಜಯದೇವ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಹಾಬಲೇಶ್ ಹೆಗ್ಡೆ ಸೇರಿ ಹಲವರು ಭಾಗಿಯಾಗಿದ್ದರು.
ವಿನಯ್ ಗುರೂಜಿ ಮಾತನಾಡಿ, ತೀರ್ಥಹಳ್ಳಿಯಂತಹ ಸಣ್ಣ ಊರಲ್ಲಿ ಇಂತಹ ಮಾಲ್ ಮಾಡಿರುವುದು ಸಾಧನೆ. ವಿವಿಧ ಕ್ಷೇತ್ರದಲ್ಲಿ ಸಾಧನೆಯ ಗುರಿ ಮುಟ್ಟಲು ತಮ್ಮ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ಗೃಹ ಮಂತ್ರಿ ಆರಗ ಜ್ಞಾನೇಂದ್ರ ಮಾತನಾಡಿ, ತೀರ್ಥಹಳ್ಳಿ ಅಭಿವೃದ್ಧಿಗೆ ತಮ್ಮ ಸಂಸ್ಥೆ ಸಹಕಾರ ಮಾಡಲಿದೆ ಎಂದರು.
ಟಿಎಸ್ ಟಿ ಹೈಪರ್ ಮಾರ್ಟ್, ಆಗುಂಬೆ ಬಸ್ ನಿಲ್ದಾಣದ ಹತ್ತಿರ, ತೀರ್ಥಹಳ್ಳಿ