- ಬಾಕ್ಸ್ ಆಫೀಸಿನಲ್ಲಿ 11ನೇ ದಿನವೂ ಭರ್ಜರಿ ಕಲೆಕ್ಷನ್
- ಭಾರತದಲ್ಲಿ ಅತ್ಯುತ್ತಮ ಪ್ರದರ್ಶನ
- ಚಿತ್ರರಂಗದ ಮೇರು ನಟರ ಮೆಚ್ಚುಗೆ
NAMMUR EXPRESS NEWS
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ ಥಿಯೇಟರ್ಗೆ ಕಾಲಿಟ್ಟು 11 ದಿನ ಕಳೆದಿದ್ದು ರೋಣ ಚಿತ್ರವು ವಿಶ್ವಾದ್ಯಂತ 3.5 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಅಂದಾಜಿಸಲಾಗಿದೆ. ಚಿತ್ರಮಂದಿರಲ್ಲಿ ಚಿತ್ರ ನೋಡಲು ಅಭಿಮಾನಿಗಳು ಹರಿದು ಬರ್ತಿದ್ದು, ಚಿತ್ರ ಕಲೆಕ್ಷನ್ 200 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ.
ಅನುಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಜುಲೈ 28 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು, ಭರ್ಜರಿ ಪ್ರದರ್ಶನ ಕಾಣಿದೆ. ಚಿತ್ರಕ್ಕೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗ್ತಿದೆ.
ವಿಕ್ರಾಂತ್ ರೋಣ ಚಿತ್ರ 11ನೇ ದಿನ ವಿಶ್ವಾದ್ಯಂತ 3.5 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ತನ್ನ ಓಟವನ್ನು ಮುಂದುವರೆಸಿದ್ದು, ಸದ್ಯದಲ್ಲೇ ಚಿತ್ರ 200 ಕೋಟಿ ಕ್ಲಬ್ ಸೇರಲಿದೆ ಎನ್ನಲಾಗಿದೆ.
ಮೊದಲ ದಿನವೇ 20-22 ಕೋಟಿ ಕಲೆಕ್ಷನ್:
ಬಾಕ್ಸ್ ಆಫೀಸ್ ಟ್ರೇಡ್ ವಿಶ್ಲೇಷಕರು ‘ವಿಕ್ರಾಂತ್ ರೋಣ’ ಸಿನಿಮಾದ ಕಲೆಕ್ಷನ್ ಬಗ್ಗೆ ಅಂದಾಜಿಸಿದ್ದಾರೆ. ಕರ್ನಾಟಕದಿಂದ ಸುಮಾರು 16 ಕೋಟಿ ರೂಪಾಯಿ ಸಂಗ್ರಹ ಆಗಿರಬಹುದು. ಆಂಧ್ರ, ತೆಲಂಗಾಣ, ತಮಿಳುನಾಡು ಹಾಗೂ ಹಿಂದಿ ಭಾಷಿಕ ರಾಜ್ಯಗಳ ಕಲೆಕ್ಷನ್ ಕೂಡ ಸೇರಿಸಿದರೆ ಒಟ್ಟು 20ರಿಂದ 22 ಕೋಟಿ ರೂಪಾಯಿ ಆದಾಯ ಬಂದಿರಬಹುದು ಎಂದು ಹೇಳಲಾಗುತ್ತಿದೆ. ಚಿತ್ರತಂಡದ ಕಡೆಯಿಂದಲೇ ಪಕ್ಕಾ ಮಾಹಿತಿ ಸಿಗಲಿ ಎಂದು ಎಲ್ಲರೂ ಕಾಯುತ್ತಿದ್ದಾರೆ.
ಅನುಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರದಲ್ಲಿ ಕಿಚ್ಚ ಸುದೀಪ್, ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಸೇರಿದಂತೆ ಅನೇಕ ಪ್ರಮುಖ ಪಾತ್ರಗಳು ಕಾಣಿಸಿಕೊಂಡಿದ್ದಾರೆ.