- ಶೃಂಗೇರಿ ಕ್ಷೇತ್ರಕ್ಕೆ ಚ್ಯುತಿ ಬಾರದ ಹಾಗೆ ಕೆಲಸ ಮಾಡಿದ್ದೇನೆ
- ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜೇಗೌಡ
- 1000ಕ್ಕೂ ಹೆಚ್ಚು ಶೃಂಗೇರಿ ಕ್ಷೇತ್ರದ ಜನರ ಸಮಾಗಮ
NAMMUR EXPRESS NEWS
ಬೆಂಗಳೂರು: ಶೃಂಗೇರಿ ರಾಜ್ಯದಲ್ಲಿ ಹೆಮ್ಮೆ. ಮಲೆನಾಡಿನ ಅನೇಕ ಸಮಸ್ಯೆಗಳಿಗೆ ನೀವು ದನಿಯಾಗಿದ್ದೀರಿ. ತಮ್ಮೆಲ್ಲರ ಆಶೀರ್ವಾದದಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ. ಮುಂದೆಯೂ ಶೃಂಗೇರಿ ಕ್ಷೇತ್ರದ ಚ್ಯುತಿ ಬಾರದ ಹಾಗೆ ಜನರ ಬದುಕಿಗಾಗಿ ಕೆಲಸ ಮಾಡುತ್ತೇನೆ. ಶೃಂಗೇರಿ ಕ್ಷೇತ್ರವನ್ನು ರಾಜ್ಯಕ್ಕೆ ಮಾದರಿ ಕ್ಷೇತ್ರ ಮಾಡುವ ಕನಸು ಹೊಂದಿದ್ದೇನೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಶೃಂಗೇರಿ ಶಾಸಕ ಟಿ. ಡಿ. ರಾಜೇಗೌಡ ಹೇಳಿದ್ದಾರೆ.
ಬೆಂಗಳೂರಲ್ಲಿ ನಡೆದ ಸ್ನೇಹ ಶೃಂಗ 2023ರಲ್ಲಿ ಮುಖ್ಯ ಅತಿಥಿಯಾಗಿ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಅವರು ಮಾತನಾಡಿ, ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಸದಸ್ಯನಾಗಿ, ಜಿಲ್ಲಾ ಪಂಚಾಯತ್ ಅಧ್ಯಕ್ಷನಾಗಿ ಎರಡೂ ಕ್ಷೇತ್ರದಲ್ಲಿ ಅಭಿವೃದ್ಧಿ ಜತೆಗೆ ಪ್ರೀತಿಯ ರಾಜಕಾರಣ ಮಾಡಿದ್ದೇನೆ. ಶೃಂಗೇರಿ ಕ್ಷೇತ್ರದಲ್ಲಿ ಎಲ್ಲರನ್ನು ಒಟ್ಟಾಗಿ, ನೆಮ್ಮದಿಯುತ ಪ್ರೀತಿಯ ರಾಜಕಾರಣ ಮಾಡಿದ್ದೇನೆ.ಶೃಂಗೇರಿ ಕ್ಷೇತ್ರದಲ್ಲಿ ಶಿಕ್ಷಣ, ಅರೋಗ್ಯ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗಿಯಾಗಿ ಎಲ್ಲರ ಮೆಚ್ಚುಗೆ ಗಳಿಸಿದ್ದೆ. ಪ್ರಥಮ ಚುನಾವಣೆಯಲ್ಲೇ ಅಪಪ್ರಚಾರ ಮಾಡಿ ಸೋಲಿಸಿದರು. ಎರಡನೇ ಬಾರಿಗೆ ಸ್ಪರ್ಧೆ ಮಾಡಿ ಗೆದ್ದೇ. ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಕಾಣಿಕೆ ನೀಡಿದ್ದೇನೆ. ಹಳ್ಳಿ ಹಳ್ಳಿಗೂ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಇನ್ನಷ್ಟು ಮಾಡಲು ಅನೇಕರು ತಡೆ ಮಾಡಿದರು ಎಂದು ಅವರು ಹೇಳಿದರು.
ದೇಶಕ್ಕೆ ಮಾದರಿ ಸೇವೆ!: ಕೋವಿಡ್ ಸಂದರ್ಭದಲ್ಲಿ ದೇಶದಲ್ಲೇ ಅತೀ ಹೆಚ್ಚು ಸಭೆ ಎನ್.ಆರ್. ಪುರದಲ್ಲಿ ಮಾಡಿದ್ದೇವೆ. ಶೃಂಗೇರಿ ಕ್ಷೇತ್ರದ ಎಲ್ಲಾ ಸಮಸ್ಯೆಗಳ ಬಗ್ಗೆ ಸದನ ಸೇರಿ ಎಲ್ಲಾ ಕಡೆ ದನಿ ಎತ್ತಿದ್ದೇನೆ. ಅಧಿವೇಶನದಲ್ಲಿ ಹೋರಾಟ ಮಾಡಿದ್ದೇನೆ. ಅಡಿಕೆ ಸಮಸ್ಯೆ, ಅರಣ್ಯ ಕಾಯ್ದೆ ಬಗ್ಗೆ ಮಲೆನಾಡ ದನಿಯಾಗಿ ಕೆಲಸ ಮಾಡಿದ್ದೇನೆ
ಮುಂದೆಯೂ ಶೃಂಗೇರಿ ಕ್ಷೇತ್ರದ ಚ್ಯುತಿ ಬಾರದ ಹಾಗೆ ಜನರ ಬದುಕಿಗಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನಮ್ಮ ಕ್ಷೇತ್ರಕ್ಕೆ ಬಂದ ಅನುದಾನ ತಡೆದು ಹಿಡಿದಿದ್ದಾರೆ.
ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳೂ ಇವೆ. ಅವುಗಳನ್ನು ಶಾಶ್ವತ ಪರಿಹಾರ ಕೊಡಿಸಲು ಪ್ರಯತ್ನ ಮಾಡಲಾಗುವುದು. ಸರಕಾರದ ಕೆಲವು ಕಾಯ್ದೆ ಜಾರಿಯಾಗುತ್ತಿದ್ದು ಅದು ದೊಡ್ಡ ಸವಾಲಾಗಿದೆ. ಸ್ಮಾರ್ಟ್ ಗ್ರಾಮಗಳನ್ನು ಮಾಡಲು ಮಾಡಲಾಗುವುದು. ಕರೋನಾ ಮತ್ತು ಅತಿವೃಷ್ಟಿ ಕಾರಣ ಅನೇಕ ಯೋಜನೆ ಮಾಡಲು ಆಗಲಿಲ್ಲ. ಮುಂದೆ ನಾನು ನಿಮ್ಮ ಜೊತೆ ಇದ್ದೇವೆ. ಬೆಲೆ ಏರಿಕೆ, ಹೊರೆ ನಡುವೆ ಈಗಲೂ ಅಪಪ್ರಚಾರ ಶುರುವಾಗಿದೆ. ನಾನು ಯಾವುದೇ ಅಕ್ರಮ ಮಾಡಿಲ್ಲ. ನಾನು ಪ್ರಾಮಾಣಿಕವಾಗಿದ್ದೇವೆ. ನಾವು ಹೆದರುವ ಅವಶ್ಯಕತೆ ಇಲ್ಲ ಎಂದು ಎದುರಾಳಿಗಳಿಗೆ ಉತ್ತರ ನೀಡಿದರು.
ರಾಜೇಗೌಡ ಅವರು ಸ್ವಂತ ಖರ್ಚಲ್ಲಿ ಜನ ಸೇವೆ
- ಎಲ್ಲರೂ ಸೇರಿ ಶೃಂಗೇರಿ ಕ್ಷೇತ್ರವನ್ನು ಕಟ್ಟೋಣ: ಮುರೋಳ್ಳಿ
ನ್ಯಾಯವಾದಿ, ಕಾಂಗ್ರೆಸ್ ನಾಯಕ ಸುಧೀರ್ ಕುಮಾರ್ ಮುರೋಳ್ಳಿ ಮಾತನಾಡಿ, ರಾಜೇಗೌಡ ಮತ್ತು ಸ್ನೇಹ ಶೃಂಗ ರಾಜಕೀಯ ಉದ್ದೇಶಕ್ಕಲ್ಲ, ಹೋರಾಟ, ಸಂಘಟನೆ, ಸಾಂಸ್ಕೃತಿಕವಾಗಿ ಕಟ್ಟುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ರಾಜೇಗೌಡ ಜನರ ಮೆಚ್ಚಿನ ನಾಯಕ. ಎಲ್ಲರನ್ನು ಪ್ರೀತಿ, ವಿಶ್ವಾಸ, ನಗುವಿನಿಂದ ಗೆಲ್ಲುವ ವ್ಯಕ್ತಿ. ಕರೋನಾ ಸಂದರ್ಭದಲ್ಲಿ ಎಲ್ಲಾ ಆಸ್ಪತ್ರೆಗಳಿಗೆ ತೆರಳಿ ಎಲ್ಲರಿಗೂ ಸಾಂತ್ವನ ನೀಡಿದರು. ತಮ್ಮ ಸ್ವಂತ ಖರ್ಚಲ್ಲಿ ರಾಜೇಗೌಡ ಎಲ್ಲರಿಗೂ ಸ್ಪಂದಿಸಿದ್ದರು. ಕೊಪ್ಪ ಆಸ್ಪತ್ರೆ ದೇಶದಲ್ಲೇ ಅತ್ಯುತ್ತಮ ಆಸ್ಪತ್ರೆ ಹೆಸರು ಪಡೆದಿದೆ. ಶೃಂಗೇರಿ ರಾಜೇಗೌಡ ಅವರು ಶಾಸಕರಾದ ಮೇಲೆ ಪ್ರೀತಿ, ವಿಶ್ವಾಸ, ನಂಬಿಕೆಯ ರಾಜಕೀಯ ಮಾಡಿದ್ದಾರೆ ಎಂದು ಹೇಳಿದರು.
ಕರೋನಾದಲ್ಲಿ ಮೃತರಾದ ಹರೀಶ್ ಕುಂಚೂರು ಕುಟುಂಬಕ್ಕೆ 1 ಲಕ್ಷ ಸಹಾಯ ಮಾಡುವ ಮನಸು ಮಾಡಿದರು. ಶೃಂಗೇರಿ ಕ್ಷೇತ್ರಕ್ಕೆ ತಮ್ಮದೇ ಪರಂಪರೆ ಇದೆ. ಅಲ್ಲಿಯವರು ದಡ್ಡರು, ಅಲ್ಲಿನವರು ಬುದ್ದಿವಂತರು ಅಲ್ಲ, ಮನುಷ್ಯನಾದವರು ಎಲ್ಲರೂ ಬುದ್ದಿವಂತರು. ಕಪ್ಪೆಗೂ ರಕ್ಷಣೆ ನೀಡುವ ಹಾವಿನ ಚಿತ್ರ ಎಲ್ಲರಿಗೂ ಮಾದರಿ ಎಂದರು.
ಕೂಡಿ ಬಾಳಿದರೆ ಸ್ವರ್ಗ ಸುಖ. ಶೃಂಗೇರಿಯಲ್ಲಿ ಗಲಭೆ ಎಬ್ಬಿಸಲು ಪ್ಲಾನ್ ಮಾಡಿದರು. ಆ ಗಲಭೆಗೆ ಕಾರಣನಾಗಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನು ಕಂಡಿದ್ದಾನೆ. ಚುನಾವಣೆಗಾಗಿ ಗಲಭೆ ಎಬ್ಬಿಸುತ್ತಿದ್ದಾರೆ. ಆದರೆ ರಾಜೇಗೌಡ ಅವರ ಪ್ರೀತಿ ಇಡೀ ಕ್ಷೇತ್ರ ಅಭಿವೃದ್ಧಿ ಆಗುತ್ತದೆ ಎಂದರು.
ಸುಜನ ಟ್ರಸ್ಟ್ ಕ್ಷೇತ್ರದಲ್ಲಿ ಎಲ್ಲಾ ಕಡೆ ಸಮಾಜ ಸೇವೆ ಮಾಡುತ್ತಿದೆ. ರಾಜೇಗೌಡ ತಮ್ಮ ಹಣದ ಜತೆಗೆ ತಮ್ಮ ಸಂಬಳ, ವೇತನ, ಭತ್ಯೆ ಎಲ್ಲಾ ಹಣವನ್ನು ಎಲ್ಲಾ ಬಡವರ ಕಲ್ಯಾಣಕ್ಕೆ ವ್ಯಯ ಮಾಡಿದ್ದಾರೆ. ಕಷ್ಟ ಎಂದು ಮನೆಗೆ ಹೋದವರನ್ನು ನೋಯಿಸಿಲ್ಲ ಎಂದು ಹೇಳಿದರು.
ಮಲೆನಾಡಿನ ನೆಮ್ಮದಿ ಮುಖ್ಯ. ಬೆಂಗಳೂರಿನಲ್ಲಿದ್ದರೂ ನೀವು ಮನೆಯ ನೆಮ್ಮದಿ ಬಯಸುವವರು. ಎಲ್ಲರೂ ಸೇರಿ ಶೃಂಗೇರಿ ಕ್ಷೇತ್ರವನ್ನು ಕಟ್ಟೋಣ. ರಾಜೇಗೌಡ ಒಳ್ಳೆ ಮನುಷ್ಯ ಅವರನ್ನು ಬೆಂಬಲಿಸೋಣ ಎಂದರು.
ದೇಶದ ಶಕ್ತಿ ಸ್ಥಳದಲ್ಲಿ ರಾಜೇಗೌಡ ಗೆಲ್ಲಬೇಕು..
- ಕಾಂಗ್ರೆಸ್ ಬಗ್ಗೆ ಸಿಟ್ಟಿರಬಹುದು, ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಬಹುದು, ಆದ್ರೆ ರಾಜೇಗೌಡರ ಪ್ರೀತಿ ಗೆಲ್ಲಿಸಿ: ಬಿ. ಎಲ್ ಶಂಕರ್
ಕಾಂಗ್ರೆಸ್ ನಾಯಕ ಬಿ.ಎಲ್. ಶಂಕರ್ ಮಾತನಾಡಿ, ರಾಜ್ಯದ 224 ಕ್ಷೇತ್ರಗಳಲ್ಲಿ ಶೃಂಗೇರಿ ದೇಶದಲ್ಲೇ ಮಾದರಿ ಸ್ಥಳ. 4 ಶಕ್ತಿ ಪೀಠಗಳಲ್ಲಿ ಶೃಂಗೇರಿ ಕೂಡ ಒಂದು. ಪಂಚಪೀಠದಲ್ಲಿ ಬಾಳೆಹೊನ್ನೂರು ಕೂಡ ಒಂದು. ಆಧ್ಯಾತ್ಮಿಕ ಬಲ ಹೊಂದಿರುವ ಕ್ಷೇತ್ರ ಎಂದು ಹೇಳಿದರು.
ಎಲ್ಲರಿಗೂ ಒಂದು ಮತ, ಭಾರತದಲ್ಲಿ ಮಾತ್ರ. ಶೃಂಗೇರಿ ಕ್ಷೇತ್ರ ರಾಜೇಗೌಡ ಅವರ ಆಡಳಿತದಲ್ಲಿ ಜನ ನೆಮ್ಮದಿಯಾಗಿದ್ದಾರೆ. ಅಟಲ್ ಬಿಹಾರಿ ವಾಜಿಪೇಯಿ ಓರ್ವ ಒಳ್ಳೆ ನಾಯಕ. ಆದರೆ ಇಂದಿನ ರಾಜಕಾರಣಿಗೆ ಅವರು ಮಾದರಿ. ಇಂದಿನ ರಾಜಕೀಯದಲ್ಲಿ ವಿಕೃತ ಸಂತೋಷ ಎದ್ದು ಕಾಣುತ್ತಿದೆ. ದುರಾದೃಷ್ಟವಶಾತ್ ಶೃಂಗೇರಿ ಕ್ಷೇತ್ರದಲ್ಲಿಯೂ ಓರ್ವರೂ ಇದ್ದಾರೆ. ರಾಜೇಗೌಡ ಕ್ಷೇತ್ರದ ಅಭಿವೃದ್ಧಿ ಜತೆಗೆ ನೆಮ್ಮದಿ, ಪ್ರೀತಿ, ಪ್ರಾಮಾಣಿಕ ರಾಜಕಾರಣ ಮಾಡಿದ್ದಾರೆ. ಅವರಿಗೆ ಅಡೆತಡೆಗಳು ಹೆಚ್ಚು ಬಂದಿವೆ. ನಿಮಗೆ ಮತ್ತು ಕ್ಷೇತ್ರದ ಜನರಿಗೆ ಕಾಂಗ್ರೆಸ್ ಸಿಟ್ಟಿರಬಹುದು, ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ ರಾಜೇಗೌಡ ಅವರ ಪ್ರೀತಿ, ನಗು, ಪ್ರಾಮಾಣಿಕತೆ ಬೇಕು. ದಬ್ಬಾಳಿಕೆ ರಾಜಕೀಯ ಬೇಡ. ನಮ್ಮ ನಮ್ಮ ನಡುವೆ ಘರ್ಷಣೆ ಎಬ್ಬಿಸಿ ರಾಜಕೀಯ ಮಾಡುವರು ಬೇಡ. ರಾಜೇಗೌಡ ಅವರೇ ಗೆಲ್ಲಬೇಕು ಎಂದರು.
ಅಚ್ಚುಕಟ್ಟು ಕಾರ್ಯಕ್ರಮ: ಸಾಂಸ್ಕೃತಿಕ ಸಮಾಗಮ
ಬೆಂಗಳೂರಿನ ಕೆಇಬಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಪ್ರಣತಿ ಗೌಡ ನಿರೂಪಣೆ ಮಾಡಿದರು. ಆಶಯ ಗೀತೆ ದುರ್ಗಾ ಚರಣ್ ಗೌಡ ಹೇಳಿದರು. ಸ್ವಾಗತವನ್ನು ಈ ಸಂಜೆ ಪತ್ರಿಕೆ ವ್ಯವಸ್ಥಾಪಕರಾದ ಅನಿಲ್ ಹೊಸಕೊಪ್ಪ ನಡೆಸಿಕೊಟ್ಟರು.
ಸುಜನ ಟ್ರಸ್ಟ್ ಪ್ರವರ್ತಕರು, ನಿವೃತ್ತ ಅರಣ್ಯ ಅಧಿಕಾರಿಗಳಾದ ಸುರೇಶ, ಸಾಹಿತಿ ಕಾಳೆಗೌಡ ನಾಗವಾರ
ಕವಿಶೈಲ ಸೊಸೈಟಿ ಅಧ್ಯಕ್ಷ ಮಂಜುನಾಥ್, ಮಲೆನಾಡು ಮಿತ್ರವೃಂದ ವಾಸಪ್ಪ, ಕರವೇ ನಾಗರಾಜ್ ಸೇರಿದಂತೆ ಶೃಂಗೇರಿ ಕ್ಷೇತ್ರ ಮೂಲದ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ತೀರ್ಥಹಳ್ಳಿ ಜಾದೂ ಕಲಾವಿದ ನಿಶ್ಚಲ್ ಶೆಟ್ಟಿ ಎಲ್ಲರನ್ನು ತಮ್ಮ ಜಾದೂ ಮತ್ತು ಕಾಮಿಡಿ ಮೂಲಕ ರಂಜಿಸಿದರು. ಶೃಂಗೇರಿ ಕ್ಷೇತ್ರದ ಪ್ರತಿಭಾವಂತ ಮಕ್ಕಳಿಗೆ ಪಾರಿತೋಷಕ, ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಕರೋನಾದಲ್ಲಿ ಮಡಿದವರಿಗೆ ಶ್ರದ್ದಾಂಜಲಿ
ಕರೋನಾದಲ್ಲಿ ಮಾಡಿದ ನಾಯಕ ಪುನೀತ್ ರಾಜಕುಮಾರ್ ಹಾಗೂ ಶೃಂಗೇರಿ ಕ್ಷೇತ್ರದ ಹೆಮ್ಮೆಯ ಅಧಿಕಾರಿ ಕೆವಿಆರ್ ಟ್ಯಾಗೋರ್, ಕಲಾವಿದ ಹರೀಶ್ ಕುಂಚೂರು ಸೇರಿದಂತೆ ಕರೋನಾದಲ್ಲಿ ಮಡಿದ ಎಲ್ಲರಿಗೂ ನಮನ ಸಲ್ಲಿಸಲಾಯಿತು.