ತಾಪಮಾನ ವಿಪರೀತ ಹೆಚ್ಚಳ!
– ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿರುವ ಹಾವುಗಳು!
– ಸಾರ್ವಜನಿಕರೇ ಎಚ್ಚರ.!
NAMMUR EXPRESS NEWS
ಬಿಸಿಲಿನ ತಾಪ ಹೆಚ್ಚುತ್ತಿದ್ದು ಹಾವುಗಳು ತಮ್ಮ ಗೂಡನ್ನು ಬಿಟ್ಟು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ. ಮಲಗುವ ಮುನ್ನ ಮನೆಯ ಒಳ ಹೊರಭಾಗವನ್ನು ಚೆನ್ನಾಗಿ ಗಮನಿಸಿ ಬಾಗಿಲು ಕಿಟಕಿಗಳನ್ನು ಭದ್ರವಾಗಿ ಮುಚ್ಚಿ. ರಾತ್ರಿ ವೇಳೆ ಹೊರಗೆ ಹೋಗುವಾಗ ಮನೆಯ ಹೊರಗೆ ಲೈಟ್ ಹಾಕಿ, ಕೈಯಲ್ಲಿ ಟಾರ್ಚ್ ಲೈಟ್ ಹಿಡಿದುಕೊಂಡು ನಡೆಯುವಾಗ ಅಕ್ಕ ಪಕ್ಕ ನೋಡಿಕೊಂಡು ನಡೆಯಿರಿ. ನಿಲುಗಡೆ ಮಾಡಿದ ವಾಹನವನ್ನು ಹತ್ತುವ ಮೊದಲು ವಾಹನದ ಒಳಗೆ ಚೆನ್ನಾಗಿ ನೋಡಿ, ನಿಮ್ಮ ವಾಹನಗಳನ್ನು ಗಿಡಗಂಟಿಗಳು ಅಥವಾ ಹುಲ್ಲುಗಾವಲಿನಲ್ಲಿ ನಿಲ್ಲಿಸಬೇಡಿ. ಸಂಪೂರ್ಣ ತಪಾಸಣೆಯ ನಂತರ ಹೆಲ್ಮೆಟ್ ಜಾಕೆಟ್ ಮತ್ತು ಬೂಟುಗಳನ್ನು ಧರಿಸಿ. ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವ ಮೂಲಕ ಅಪಾಯವನ್ನು ತಡೆಯಿರಿ.