ವಿಜಯೇಂದ್ರ ಪರ್ವ ಆರಂಭ..!
– ರಾಜ್ಯ ರಾಜಕಾರಣದಲ್ಲಿ ಅನೇಕ ಬದಲಾವಣೆ ಸಾದ್ಯತೆ
– ಕೈಗೆ ಸಡ್ಡು ಹೊಡೆಯಲು ವಿಜಯೇಂದ್ರ ಟೀಮ್ ಸಜ್ಜು
– ದೇವೇಗೌಡ ಭೇಟಿ ಮಾಡಿ ಮಾಸ್ಟರ್ ಪ್ಲಾನ್!
NAMMUR EXPRESS NEWS
ಬೆಂಗಳೂರು : ರಾಜ್ಯದಲ್ಲಿ ಯಡಿಯೂರಪ್ಪನ ಪುತ್ರ ವಿಜಯೇಂದ್ರ ಬಿಜೆಪಿಯ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿದೆ. ನ.15ರಂದು ಬೃಹತ್ ಸಭೆಯಲ್ಲಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಈಗಾಗಲೇ ಭಾರೀ ಸಿದ್ಧತೆ ನಡೆದಿದೆ. ರಾಜ್ಯದ ಅನೇಕ ಜಿಲ್ಲೆಯಲ್ಲಿ ಪಕ್ಷಕ್ಕೆ ಮತ್ತೆ ಬಲ ಬಂದಿದ್ದು, ಯುವ ಸಂಘಟನೆ ಸಿದ್ಧವಾಗುತ್ತಾ ಇದೆ. ಹಿರಿಯ ರಾಜಕಾರಣಿಗಳು ಲಿಂಗಾಯತ ಸಮುದಾಯದ ಪ್ರಮುಖರು ಕೂಡ ವಿವಿಧ ಪಕ್ಷಗಳಿಂದ ಬಿಜೆಪಿಯತ್ತ ಮುಖ ಮಾಡುವ ಸಾಧ್ಯತೆಗಳು ಹೆಚ್ಚಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ರಾಜಕೀಯ ಚುರುಕುಗೊಂಡಿದ್ದು, ಈ ನಡುವೆ ಯಡಿಯೂರಪ್ಪನವರ ಪುತ್ರಆಯ್ಕೆ ರಾಜ್ಯ ಬಿಜೆಪಿಗೆ ಹೊಸ ರಂಗು ನೀಡಿದೆ.
ಯುವ ನಾಯಕನೊಬ್ಬನ ಪಟ್ಟಾಭಿಷೇಕ ಮಾಡಿರುವುದು ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ. ಅದರಲ್ಲೂ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮತ್ತೆ ಯಡಿಯೂರಪ್ಪ ಬಣ ತನ್ನ ಹಿಡಿತವನ್ನು ಹಿಡಿದುಕೊಳ್ಳಲು ಸಫಲವಾಗುವ ಸಾಧ್ಯತೆ ಹೆಚ್ಚಳವಾಗಿದೆ. ಏಕೆಂದರೆ ಈಗಾಗಲೇ ಬಿಜೆಪಿ ತೆಕ್ಕೆಯಲ್ಲಿರುವ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಮತ್ತೆ ಬಿಜೆಪಿಗೆ ಬರುವ ಸಾಧ್ಯತೆಗಳು ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಂಘಟನೆ ಶುರುವಾಗಿದೆ.
ವಿಜಯೇಂದ್ರ ಅವರು ರಾಜ್ಯದಾದ್ಯಂತ ಒಂದು ಬಾರಿ ಸುತ್ತು ಹೊಡೆದಿದ್ದು ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನ ಗೆಲ್ಲಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಿರುವುದರಿಂದ ಕಳೆದ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಿತು. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಯಡಿಯೂರಪ್ಪನವರನ್ನ ಮತ್ತೆ ಮುನ್ನಡೆಗೆ ತರುವ ಪ್ರಯತ್ನದಲ್ಲಿ ಯುವ ನಾಯಕ ವಿಜಯೇಂದ್ರ ಅವರಿಗೆ ಸ್ಥಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಮತ್ತೆ ಬಿಜೆಪಿ ರಾಜ್ಯದಲ್ಲಿ ಮತ್ತೆ ಬಲಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ರಾಜ್ಯದ ಪ್ರಭಾವಿ ನಾಯಕ!
ಇನ್ನು ಹಣಕಾಸು ವ್ಯಕ್ತಿತ್ವ ಹಾಗೂ ಪ್ರಭಾವಿ ವಿಚಾರದಲ್ಲೂ ಕೂಡ ಯಡಿಯೂರಪ್ಪ ಕುಟುಂಬ ರಾಜ್ಯದಲ್ಲಿ ಪ್ರಭಾವಿಯಾಗಿದ್ದು ರಾಷ್ಟ್ರಮಟ್ಟದಲ್ಲೂ ಕೂಡ ಗಮನ ಸೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ಸಂಘಟನೆಯನ್ನು ಕೂಡ ಬಲಹೊಂದಿದ್ದು ಇದರಿಂದ ರಾಜ್ಯ ಬಿಜೆಪಿಗೆ ಮತ್ತಷ್ಟು ಲಾಭವಾಗುವ ಸಾಧ್ಯತೆ ಇದೆ.
ದೇವೇಗೌಡ ಭೇಟಿ ಮಾಡಿ ಮಾಸ್ಟರ್ ಪ್ಲಾನ್!
ರಾಜ್ಯ ಬಿಜೆಪಿಗೆ ಬಿ.ವೈ. ವಿಜಯೇಂದ್ರ ಅವರನ್ನು ಸರಿಯಾದ ಸಮಯದಲ್ಲಿ ಆಯ್ಕೆ ಮಾಡಿದ್ದು, ಇಷ್ಟು ದಿನ ಒಂದು ಲೆಕ್ಕ, ಇನ್ನು ಮುಂದೆ ಹೊಸ ಲೆಕ್ಕೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಸಂಸತದೊಂದಿಗೆ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರು ಬುಧವಾರ ಅಧಿಕಾರ ಸ್ವೀಕರಿಸಲಿದ್ದು, ಇದಕ್ಕೂ ಮುನ್ನ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಭೇಟಿಯಾಗಿ ಆರ್ಶೀವಾದ ಪಡೆದ ವೇಳೆ ಅವರು ಮಾತನಾಡಿದರು. ವಿಜಯೇಂದ್ರ ಅವರೊಂದಿಗೆ ಮಾತನಾಡಿದ ದೇವೇಗೌಡರು, ಬಿಜೆಪಿ ವರಿಷ್ಠರು ಸರಿಯಾದ ಸಮಯಕ್ಕೆ ನಿಮ್ಮನ್ನು ಆಯ್ಕೆ ಮಾಡುವ ಮೂಲಕ ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ. ಮೂರು ದಿನದ ಹಿಂದೆ ಒಂದು ಲೆಕ್ಕ ಇನ್ನು ಮುಂದೆ ಹೊಸ ಲೆಕ್ಕ ಎಂದು ಮಾರ್ಮಿಕವಾಗಿ ಹೇಳುವ ಮೂಲಕ ವಿರೋಧಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.