Categories
ತೀರ್ಥಹಳ್ಳಿ

ತೀರ್ಥಹಳ್ಳಿ ರಾಮೇಶ್ವರ ದೇವಾಲಯಕ್ಕೆ ಶ್ರೀಗಳ ಭೇಟಿ

ತೀರ್ಥಹಳ್ಳಿ ರಾಮೇಶ್ವರ ದೇವಾಲಯಕ್ಕೆ ಶ್ರೀಗಳ ಭೇಟಿ
– ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕಾರ
– ಧರ್ಮ ಸಭೆಗೆ ಸಂಸದ ರಾಘವೇಂದ್ರ ಭೇಟಿ
– ಡಾ.ಮಂಜುನಾಥ ಗೌಡ, ವಿದ್ಯಾಧರ್ ಅವರಿಗೆ ಗೌರವ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನಕ್ಕೆ ಕಂಚಿ ಕಾಮಕೋಟಿ ಶ್ರೀ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ಹಾಗೂ ಶಕಟಾಪುರ ಶ್ರೀ ಜಗದ್ಗುರು ಬದರಿ ಶಂಕರಾಚಾರ್ಯ ಶ್ರೀ ಶ್ರೀ ಕೃಷ್ಣಾನಂದ ತೀರ್ಥ ಮಹಾಸ್ವಾಮಿಗಳು ಭೇಟಿ ನೀಡಿದರು. ತೀರ್ಥಹಳ್ಳಿಯ ಶ್ರೀರಾಮಚಂದ್ರಪುರ ಮಠದಲ್ಲಿ ನಡೆದ ಧರ್ಮಸಭೆ ಮುಕ್ತಾಯದ ನಂತರ ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಅರ್ಚಕರಾದ ರಾಜಶೇಖರ ಭಟ್, ಪಟ್ಟಣ ಪಂಚಾಯತ್ ಸದಸ್ಯರು ಆದ ಸೊಪ್ಪುಗುಡ್ಡೆ ರಾಘವೇಂದ್ರ, ಹಿರಿಯರಾದ ವೆಂಕಟೇಶ ಪಟವರ್ಧನ್ ನಿತ್ಯ ಅನ್ನ ಸಂತರ್ಪಣ ಸಮಿತಿಯ ಡಾ.ಜೀವಂದರ್ ಜೈನ್, ಗೋವರ್ಧನ್ ಇನ್ನಿತರರು ಫಲ ನೀಡಿ ಆಶೀರ್ವಾದ ಸ್ವೀಕರಿಸಿದರು.

ಧರ್ಮ ಸಭೆಗೆ ಸಂಸದ ರಾಘವೇಂದ್ರ ಭೇಟಿ

ತೀರ್ಥಹಳ್ಳಿ ಪಟ್ಟಣದ ರಥಬೀದಿಯಲ್ಲಿರುವ ಶ್ರೀ ರಾಮಚಂದ್ರಾಪುರ ಮಠದ ಆವರಣದಲ್ಲಿ ಏರ್ಪಡಿಸಿದ್ದ ಶ್ರೀ ಚಂದ್ರಮೌಳೇಶ್ವರ ದೇವರ ವಿಶೇಷ ಧಾರ್ಮಿಕ ಕಾರ್ಯಕ್ರಮದ ಸಂಪನ್ನವಾದ ಪ್ರಯುಕ್ತ ಹಮ್ಮಿಕೊಂಡಿದ್ದ ಧರ್ಮ ಸಭೆಯಲ್ಲಿ ಅತ್ಯಂತ ಶ್ರದ್ಧಾ ಪೂರ್ವಕವಾಗಿ ಪಾಲ್ಗೊಳ್ಳಲಾಯಿತು. ದಿವ್ಯ ಸಾನಿಧ್ಯ ವಹಿಸಿದ್ದ ಆದಿಗುರು ಶಂಕರಾಚಾರ್ಯ ಪೀಠದ ಶಾಖಾ ಮಠಗಳಾದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಹಾಗೂ ಕಂಚಿ ಕಾಮಕೋಟಿ ಪೀಠದ ಶ್ರೀ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮೀಜಿ ಅವರು ಮತ್ತು ಶಕಟಪುರ ಶ್ರೀ ವಿದ್ಯಾಪೀಠದ ಶ್ರೀ ಶ್ರೀ ಕೃಷ್ಣಾನಂದತೀರ್ಥ ಮಹಾಸ್ವಾಮೀಜಿ ಅವರ ದಿವ್ಯ ಅನುಗ್ರಹ ಪಡೆದುಕೊಳ್ಳಲಾಯಿತು. ಪ್ರಮುಖರಾದ ಶ್ರೀ ಗುರುಮೂರ್ತಿ ಅವರು, ಶ್ರೀ ಶ್ರೀನಾಥ್ ಜೋಯಿಸ್ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಡಾ.ಮಂಜುನಾಥ ಗೌಡ, ವಿದ್ಯಾಧರ್ ಅವರಿಗೆ ಗೌರವ

ಧರ್ಮಸಭೆಯಲ್ಲಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಹಾಗೂ ಕಂಚಿ ಕಾಮಕೋಟಿ ಪೀಠದ ಶ್ರೀ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮೀಜಿ ಅವರು ಮತ್ತು ಶಕಟಪುರ ಶ್ರೀ ವಿದ್ಯಾಪೀಠದ ಶ್ರೀ ಶ್ರೀ ಕೃಷ್ಣಾನಂದತೀರ್ಥ ಮಹಾಸ್ವಾಮೀಜಿ ಅವರಿಂದ ಧರ್ಮ ಸಭೆಯಲ್ಲಿ ಭಾಗಿಯಾಗಿದ್ದ ಸಹಕಾರ ನಾಯಕರಾದ ಡಾ. ಆರ್. ಎಂ. ಮಂಜುನಾಥ ಗೌಡ, ಶಿಮೂಲ್ ಅಧ್ಯಕ್ಷರಾದ ವಿದ್ಯಾಧರ ಅವರು ಆಶೀರ್ವಾದ ಪಡೆದರು. ಬಳಿಕ ಶ್ರೀಗಳು ಗೌರವಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.