– ನಿಶ್ಚಿತಾರ್ಥದ ಉಂಗುರ ಕಳೆದು ಹೋಗಿದ್ದಕ್ಕೆ ಆತ್ಮಹತ್ಯೆ!
– ಉಳ್ಳಾಲ : ಗ್ಯಾರೇಜಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೆಕ್ಯಾನಿಕ್
– ಪಡುಬಿದ್ರಿ: ಕೋಳಿಯಂಕಕ್ಕೆ ದಾಳಿ ಮಾಡಿದ ಪೊಲೀಸರು!
– ಕಾಸರಗೋಡು: ಆವರಣ ಗೋಡೆ ಕುಸಿದು ಇಬ್ಬರು ಸಾವು
– ಮೂಡುಬಿದ್ರೆ : ಅಕ್ರಮವಾಗಿ ಗೋ ಸಾಗಾಟ: ಇಬ್ಬರ ಬಂಧನ
NAMMUR EXPRESS NEWS
ತುಮಕೂರು: ನಿಶ್ಚಿತಾರ್ಥದ ವೇಳೆ ಹುಡುಗಿ ಕೈಬೆರಳಿಗೆ ಹಾಕಿದ್ದ ಉಂಗುರ ಕಳೆದು ಹೋಗಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ನಗರದ ದೇವರಾಯಪಟ್ಟಣದಲ್ಲಿ ನಡೆದಿದೆ. ಮೃತ ಯುವಕ ಕಮಲೇಶ್ (36) ಮೃತ ಯುವಕ. ನಿಶ್ಚಿತಾರ್ಥದ ವೇಳೆ ಹುಡುಗಿ ಕೈಬೆರಳಿಗೆ ಉಂಗುರ ಹಾಕಿದ್ದಳು. ಆದರೆ ಆ ಉಂಗುರ ಕಳೆದು ಹೋಗಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಸ್ನಾನ ಮಾಡುವ ವೇಳೆ ಉಂಗುರ ಕಳೆದು ಹೋಗಿದೆ. ಈ ವಿಚಾರ ಮನೆಯವರಿಗೆ ಹೇಳಲು ಹೆದರಿ, ವಿಷ ಸೇವನೆ ಮಾಡಿದ್ದಾನೆ ಎನ್ನಲಾಗಿದೆ.
ಗ್ಯಾರೇಜಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೆಕ್ಯಾನಿಕ್
ಗ್ಯಾರೇಜ್ ಆಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೆಕ್ಯಾನಿಕ್ ಮೃತಪಟ್ಟ ಘಟನೆ ಉಳ್ಳಾಲ ಕಂಕನಾಡಿಯ ಕಾಂಚನ ಶೋ ರೂಮ್ ವೊಂದರಲ್ಲಿ ನಡೆದಿದೆ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿರುವ ಮುಡಿಪು ಗರಡಿಪಳ್ಳ ನಿವಾಸಿ ಕಿಶೋರ್ (25) ಆತ್ಮಹತ್ಯೆ ಮಾಡಿಕೊಂಡವರು.ಜಯ ಎಂಬವರಿಗೆ ಸೇರಿದ ಮುಡಿಪುವಿನ ಕಾರಿನ ಗ್ಯಾರೇಜ್ ಒಳಗಡೆ ಕಬ್ಬಿಣದ ರಾಡಿಗೆ ನೇಣು ಹಾಕಿಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ನ.20ರಂದು ಕೆಲಸಕ್ಕೆ ಹೋದವರು ತಡರಾತ್ರಿಯಾದರೂ ಮನೆಗೆ ವಾಪಸ್ಸಾಗದೇ ಇರುವುದನ್ನು ಗಮನಿಸಿ ಮನೆಯ ಸುತ್ತ, ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿ ಬಳಿಕ ನಿತ್ಯ ಕಿಶೋರ್ ಕೆಲಸದಿಂದ ವಾಪಸ್ಸಾಗಿ ಕುಳಿತುಕೊಳ್ಳುವ ಗ್ಯಾರೇಜ್ ಸಮೀಪ ಹುಡುಕಾಡಿದಾಗ ಬೈಕ್ ಪತ್ತೆಯಾಗಿದ್ದು, ಒಳಗೆ ಗಮನಿದಾಗ ನೇಣುಹಾಕಿರುವುದು ಗಮನಕ್ಕೆ ಬಂದಿದ್ದೆ ಕಿಶೋರ್ ಕೆಲಸ ಮಾಡುತ್ತಿದ್ದ ಷೋ ರೂಮಿನ ಸೂಪರ್ ವೈಸರ್ ಆರು ತಿಂಗಳ ಹಿಂದಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಆಪ್ತಸ್ನೇಹಿತರಾಗಿದ್ದ ಕಿಶೋರ್ ಇದೇ ಘಟನೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಕೋಳಿಯಂಕ ಮೂವರು ವಶಕ್ಕೆ!
ಪಡುಬಿದ್ರಿ: ತೆಂಕ ಎರ್ಮಾಳು ಎಂಬುವರು ಅಕ್ರಮವಾಗಿ ನಡೆಸುತ್ತಿದ್ದ ಕೋಳಿಯಂಕಕ್ಕೆ ದಾಳಿ ಮಾಡಿದ ಪೊಲೀಸರು ಮೂವರು ಸಹಿತ ಏಳು ಕೋಳಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರು ಪಣಿಯೂರು ನಿವಾಸಿಗಳಾದ ಸುರೇಶ್, ಸುಕೇಶ್ ಹಾಗೂ ಕಾಪು ನಿವಾಸಿ ನಾಗೇಶ್. ಬಹಳಷ್ಟು ಮಂದಿ ಪೊಲೀಸ್ ದಾಳಿ ವಾಸನೆ ಬರುತ್ತಿದ್ದಂತೆ ಪಲಾಯನ ಮಾಡಿದ್ದು ಅವರ ಗುರುತು ಪತ್ತೆಯಾಗಿದೆ ಅವರನ್ನು ಶೀಘ್ರವಾಗಿ ವಶಕ್ಕೆ ಪಡೆಯಲಾಗುವುದು ಎಂಬುದಾಗಿ ಪಡುಬಿದ್ರಿ ಪೊಲೀಸರು ತಿಳಿಸಿದ್ದಾರೆ.
ಗೋಡೆ ಕುಸಿದು ಇಬ್ಬರು ಕಾರ್ಮಿಕರ ಸಾವು!
ಕಾಸರಗೋಡು: ಪೈಪ್ಲೈನ್ಗಾಗಿ ಅಗೆಯುವ ವೇಳೆ ಗೋಡೆ ಕುಸಿದು ಕಲ್ಲಿನ ಕೆಳಗೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ.
ಕಲ್ಲಿನ ಕೆಳಗೆ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ.
ಮೃತರನ್ನು ಕರ್ನಾಟಕ ಮೂಲದ ಲಕ್ಷ್ಮಪ್ಪ (43) ಮತ್ತು ಬಿಎಂ ಬಸಯ್ಯ (40) ಎಂದು ಗುರುತಿಸಲಾಗಿದೆ. ಕಾಸರಗೋಡು ಮಾರ್ಕೆಟ್ ರಸ್ತೆಯಲ್ಲಿ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಅಕ್ರಮವಾಗಿ ಗೋ ಸಾಗಾಟ , ಇಬ್ಬರ ಬಂಧನ
ಮೂಡುಬಿದಿರೆ: ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ ಎರಡು ಹಸು ಹಾಗೂ ಎರಡು ಕರುಗಳನ್ನು ರಕ್ಷಿಸಿದ ಘಟನೆ ಮೂಡುಬಿದಿರೆ ಮೂಡುಕೊಣಾಜೆ ಗ್ರಾಮದ ಕುಕ್ಕುದಕಟ್ಟೆಯಲ್ಲಿ ಮಂಗಳವಾರ ನಡೆದಿದೆ ಪೊಲೀಸ್ ಇನ್ಸೆಕ್ಟರ್ ಸಂದೇಶ್ ಕುಮಾರ್ ನೇತೃತ್ವದ ತಂಡವು ಗಸ್ತಿನಲ್ಲಿದ್ದಾಗ ಪಡುಕೊಣಾಜೆಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಪಿಕಪ್ ವಾಹನದಲ್ಲಿ ಎರಡು ಹಸು ಮತ್ತು ಎರಡು ಕರು ಪತ್ತೆಯಾಗಿವೆ.ಗೋವುಗಳು ಹಾಗೂ ಕರುಗಳನ್ನು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಚಾಲಕ ವೇಣೂರಿನ ನಡ್ತಿಕಲ್ಲು ನಿವಾಸಿ ಹೈದರ್ ಹಾಗೂ ಪಣಪಿಲದ ಶೈಲೇಶ್ ಮಡಿವಾಳನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನು ಆರೋಪಿಗಳು ಸಾಗಿಸುತ್ತಿದ್ದ ಹಸುಗಳನ್ನು ಬಜಪೆ ಗೋಶಾಲೆಗೆ ಹಸ್ತಾಂತರ ಮಾಡಲಾಗಿದೆ.