ರಾಜ್ಯದಲ್ಲಿ 3 ದಿನ ಮಳೆ: ರೈತರಿಗೆ ಆತಂಕ!
– ಮಲೆನಾಡಲ್ಲಿ ಸಂಜೆ ಮಳೆ: ಇನ್ನಷ್ಟು ಮಳೆ ಸಾಧ್ಯತೆ
– ಭತ್ತ, ಅಡಿಕೆ ಕೊಯ್ಲಿಗೆ ಮಳೆ ಅಡ್ಡಿ
– ರಾಜಧಾನಿಯಲ್ಲೂ ಸುರಿಯಲಿದೆ ಮಳೆ
NAMMUR EXPRESS NEWS
ಬೆಂಗಳೂರ: ಈಗ ಮತ್ತೆ ಮಳೆ ಸುರಿಯುವ ಭೀತಿ ಎದುರಾಗಿದೆ. ಗುರುವಾರ ಹಲವೆಡೆ ಸಂಜೆ ವೇಳೆಗೆ ಮಳೆಯಾಗಿದೆ. ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮನ್ಸೂಚನೆ ನೀಡಿದೆ. ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೂಡ ಘೋಷಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಲಿದ್ದು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ರಾಜ್ಯದ ಕರಾವಳಿ, ಮಲೆನಾಡು ಭಾಗಕ್ಕೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲಿ 3 ದಿನ ಮೋಡ ಕವಿದ ವಾತಾವರಣವಿದೆ.
ಭತ್ತ, ಅಡಿಕೆ ಕೊಯ್ಲಿಗೆ ಅಡ್ಡಿ
ಕರಾವಳಿ, ಮಲೆನಾಡು ಸೇರಿ ಅನೇಕ ಕಡೆ ಭತ್ತದ ಕೊಯ್ಲು, ಅಡಿಕೆ ಕೊಯ್ಲು ನಡೆಯುತ್ತಿದೆ. ಆದ್ರೆ ಈಗ ಮಳೆ ಮೋಡ, ಮಳೆ ರೈತರನ್ನು ಆತಂಕಕ್ಕೆ ತಳ್ಳಿದೆ. ಹೇಗೆ ಅಡಿಕೆ ಕೊಯ್ಲು ಮಾಡುವುದು ಎಂಬ ಬಗ್ಗೆ ಚಿಂತೆ ಮಾಡುತ್ತಿದ್ದಾರೆ.