ಮಹಿಳೆಯರಿಗೆ 3 ಲಕ್ಷ ರೂ.ಬಡ್ಡಿ ಸಾಲ, ಸಬ್ಸಿಡಿ
– ಸಾಲ ಪಡೆಯಲು ಅರ್ಹತೆಗಳೇನು?
– ಅರ್ಜಿ ಸಲ್ಲಿಕೆ ಹೇಗೆ..? ಏನು ದಾಖಲೆ ಬೇಕು ..?
NAMMUR EXPRESS NEWS
ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬಿ ಜೀವನ ಸಾಗಿಸಲು ಸರಕಾರ 3 ಲಕ್ಷ ರೂಪಾಯಿವರೆಗೂ ಸಾಲ ಸೌಲಭ್ಯ ನೀಡಲಾಗುತ್ತಿದೆ. ವಿಶೇಷವೆಂದರೆ ಈ ಸಾಲಕ್ಕೆ ಯಾವುದೇ ರೀತಿಯ ಬಡ್ಡಿ ಇಲ್ಲ! ಇನ್ನೂ ವಿಶೇಷವೆಂದರೆ ಪಡೆದ 3 ಲಕ್ಷ ರೂಪಾಯಿ ಸಾಲದಲ್ಲಿ ಅರ್ಧಕ್ಕರ್ಧ ಸಾಲಕ್ಕೆ ಸಬ್ಸಿಡಿ ಇದೆ. ಅಂದರೆ ನಿಯಮಕ್ಕೆ ಅನುಗುಣವಾಗಿ ಗರಿಷ್ಠ ಒಂದೂವರೆ ಲಕ್ಷ ರೂಪಾಯಿ ವರೆಗೂ ಸಾಲ ಮನ್ನಾ ಆಗಲಿದೆ!
ಉದ್ಯೋಗಿನಿ ಯೋಜನೆ:
ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವ ಮೂಲಕ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡುವ ಸದುದ್ದೇಶದಿಂದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ‘ಉದ್ಯೋಗಿನಿ ಯೋಜನೆ’ಯನ್ನು ಜಾರಿಗೆ ತಂದಿದೆ. ಮಹಿಳೆಯರು ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕುಗಳ ಮೂಲಕ ಸಾಲ ಮತ್ತು ನಿಗಮದ ಮೂಲಕ ಸಹಾಯಧನ ನೀಡಲಾಗುತ್ತಿದೆ. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಯೋಜನೆಯನ್ನು ಅನುಷ್ಠಾನ ಮಾಡುತ್ತಿದ್ದು, ಸದರಿ ಯೋಜನೆಯಡಿ ಒಟ್ಟು 88 ವಿಧದ ಕಿರು ಉದ್ಯಮ ಸ್ಥಾಪಿಸಲು 3 ಲಕ್ಷ ರೂಪಾಯಿ ವರೆಗೂ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ.
ಯಾರಿಗೆ ಎಷ್ಟು ಸಹಾಯಧನ?:
ಸಾಮಾನ್ಯ ವರ್ಗದ ಎಲ್ಲ ಮಹಿಳೆಯರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಇವರಿಗೆ ಘಟಕ ವೆಚ್ಚ ಗರಿಷ್ಟ 3 ಲಕ್ಷ ರೂಪಾಯಿಗಳಾಗಿದ್ದು ಶೇ.30ರಷ್ಟು ಸಹಾಯಧನ ಸಿಗಲಿದೆ. ಅಂದರೆ ಶೇ.30ರಷ್ಟು ಸಾಲವನ್ನು ಮರುಪಾವತಿಸುವಂತಿಲ್ಲ. ಆ ಹಣ ಮನ್ನಾ ಆಗಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಘಟಕ ವೆಚ್ಚ ಕನಿಷ್ಟ 1 ಲಕ್ಷದಿಂದ ಗರಿಷ್ಟ 3 ಲಕ್ಷ ರೂಪಾಯಿಗಳಾಗಿದ್ದು ಶೇ.50ರಷ್ಟು ಸಹಾಯಧನ ಸಿಗಲಿದೆ. ಅಂದರೆ ಈ ವರ್ಗದ ಮಹಿಳೆಯರು ಶೇ.50ರಷ್ಟು ಹಣ ಮರುಪಾವತಿಸುವಂತಿಲ್ಲ.
ಸಾಲ ಪಡೆಯಲು ಅರ್ಹತೆಗಳೇನು?
ಈ ಸಾಲ ಸೌಲಭ್ಯಕ್ಕೆ ಕುಟುಂಬದ ಮಹಿಳೆಯರು ಮಾತ್ರ ಅರ್ಹರಾಗಿರುತ್ತಾರೆ. 18ರಿಂದ 55 ವರ್ಷದೊಳಗಿನ ಮಹಿಳೆಯರು ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ/ ಪಂಗಡದವರಾಗಿದ್ದಲ್ಲಿ ವಾರ್ಷಿಕ ಆದಾಯ 2 ಲಕ್ಷ ರೂಪಾಯಿಗಳ ಒಳಗಿರಬೇಕು. ಸಾಮಾನ್ಯ ವರ್ಗದವರಾಗಿದ್ದಲ್ಲಿ ವಾರ್ಷಿಕ ಆದಾಯ 1.5 ಲಕ್ಷ ರೂಪಾಯಿಗಳ ಒಳಗಿರಬೇಕು. ಆದರೆ ಅರ್ಜಿ ಸಲ್ಲಿಸಲಿರುವ ಮಹಿಳೆ ಬ್ಯಾಂಕ್ಗಳಲ್ಲಿ ಸುಸ್ತಿದಾರಳಾಗಿದ್ದರೆ ಅಂಥವರಿಗೆ ಈ ಸೌಲಭ್ಯ ಸಿಗುವುದಿಲ್ಲ. ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಿರಬೇಕು.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳೇನು?
– ಜಾತಿ/ಆದಾಯ ಪ್ರಮಾಣ ಪತ್ರ
– ರೇಷನ್ ಕಾರ್ಡ್
– ಆಧಾರ್ ಕಾರ್ಡ್
– ಶಾಲಾ ವರ್ಗಾವಣೆ ಪತ್ರ
– ಎಸ್ಎಸ್ಎಲ್ಸಿ ಅಂಕ ಪಟ್ಟಿ
– ಯೋಜನಾ ವರದಿ
– ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ
– ವಿಧವೆ, ಅಂಗವಿಕಲರು, ಸಂಕಷ್ಟಗೊಳಗಾದ ಮಹಿಳೆಯರು ತಮ್ಮ ಅರ್ಜಿಯೊಂದಿಗೆ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.
ಯಾವ್ಯಾವ ಸ್ವಯಂ ಉದ್ಯೋಗಕ್ಕೆ ಸಾಲ ಸಿಗಲಿದೆ?
ಉದ್ಯೋಗಿನಿ ಯೋಜನೆಯಡಿ ಲಭ್ಯವಿರುವ 3 ಲಕ್ಷ ರೂಪಾಯಿ ಸಾಲ ಪಡೆದು ಒಟ್ಟು 88 ವಿಧದ ಸ್ವಯಂ ಉದ್ಯೋಗವನ್ನು ಕೈಗೊಳ್ಳಬಹುದು. ಬೇಕರಿ, ಮೀನು ಮಾರಾಟ, ದಿನಸಿ ಅಂಗಡಿ, ಉಪ್ಪಿನಕಾಯಿ, ಅಗರಬತ್ತಿ, ಕಾಫಿ-ಟೀ ಅಂಗಡಿ, ಟೈಲರಿಂಗ್, ಎಸ್ಟಿಡಿ ಬೂತ್, ಬ್ಯೂಟಿ ಪಾರ್ಲರ್, ಅಗರಬತ್ತಿ ತಯಾರಿಕೆ, ಕ್ಲಿನಿಕ್, ಜಿಮ್, ಸಿಹಿ ಅಂಗಡಿ, ಹಿಟ್ಟಿನ ಗಿರಣಿ, ಪೋಟೋ ಸ್ಪೂಡಿಯೋ, ಕಾಂಡಿಮೆಂಟ್ಸ್ ಚಪ್ಪಲಿ ಮಾರಾಟ ಮಳಿಗೆ ಸೇರಿದಂತೆ 88ಕ್ಕೂ ಹೆಚ್ಚು ಪ್ರಮಾಣದ ಸಣ್ಣ ಉದ್ಯಮಗಳ ಆರಂಭಕ್ಕೆ ಸಾಲ ಸಿಗಲಿದೆ.
ಹೇಗೆ ಅರ್ಜಿ ಸಲಿಸುವುದು?:
ಉದ್ಯೋಗಿನಿ ಯೋಜನೆಯ ಸೌಲಭ್ಯ ಪಡೆಯಲು ಇಚ್ಛಿಸುವ ಫಲಾಪೇಕ್ಷಿಗಳು / ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅದಕ್ಕಾಗಿ ಹತ್ತಿರದ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:
– ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 22-12- 2023
ಹೆಚ್ಚಿನ ಮಾಹಿತಿಗೆ : ಆಯಾ ಜಿಲ್ಲೆಯ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲೆಯ ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಛೇರಿ ಸಂಪರ್ಕಿಸಬಹುದಾಗಿದೆ.