ರಾಜ್ಯದಲ್ಲಿ ನಾಯಿಗಳಿಗೆ ಹುಚ್ಚು ರೋಗ..!
– ನಾಯಿಗಳ ಬಗ್ಗೆ ಎಚ್ಚರ ಎಚ್ಚರ..!
– ನಾಯಿ ಕಡಿತಕ್ಕೆ ಬಲಿಯಾದ ಬಾಲಕ
– ನಿಮ್ಮ ನಾಯಿಗೂ ಲಸಿಕೆ ಕೊಡಿಸಿ.. ಜಾಗೃತಿ ವಹಿಸಿ..!
NAMMUR EXPRESS NEWS
ರಾಜ್ಯಾದಲ್ಲಿ ಹಲವು ಕಡೆಗಳಲ್ಲಿ ಹುಚ್ಚು ನಾಯಿಗಳ ಕಾಟ ಶುರುವಾಗಿದೆ. ಎಲ್ಲಿ ಅಂದರಲ್ಲಿ ಬಂದು ಮನೆಯಲ್ಲಿ ಸಾಕಿರುವ ನಾಯಿಗಳಿಗೆ ಕಚ್ಚುತ್ತಿವೆ. ಇನ್ನೊಂದೆಡೆ ಸಣ್ಣ ಮಕ್ಕಳು, ಹಾದಿ ಬೀದಿಯಲ್ಲಿ ಹೋಗುವವರಿಗೆ ನಾಯಿ ಕಡಿತದ ಕಾರಣ ಅನೇಕರು ಆಸ್ಪತ್ರೆ ಸೇರಿದ್ದಾರೆ. ಚಳಿಗಾಲದ ಸಮಯದಲ್ಲಿ ಸಾಕು ನಾಯಿಗಳಿಗೆ ಹುಚ್ಚು ಹಿಡಿಯುವುದು ಸರ್ವೇ ಸಾಮಾನ್ಯ. ಆದರೆ ಈ ವರ್ಷ ಅದು ಹೆಚ್ಚಿದೆ. ಇತ್ತೀಚೆಗೆ ಹುಚ್ಚುನಾಯಿಗಳ ಕಾಟದಿಂದ ಚಿಕ್ಕ ಚಿಕ್ಕ ಮಕ್ಕಳಿಗೆ ಒಂಟಿಯಾಗಿ ಶಾಲೆಗೆ ಹೋಗಲು ತೊಂದರೆ ಆಗಿದೆ. ಹಾಗೆಯೇ ದೊಡ್ಡವರಿಗೂ ಕೂಡ ಕೆಲಸ ಕಾರ್ಯಗಳಿಗೆ ತಲುಪುವ ವೇಳೆ ಹುಚ್ಚು ನಾಯಿಗಳು ದಾಳಿ ಮಾಡಿರುವ ಘಟನೆ ಕಂಡುಬಂದಿದೆ.
ಹುಚ್ಚು ನಾಯಿ ದಾಳಿಗೆ ಬಲಿ!
ಚಿತ್ರದುರ್ಗದ ತರುಣ್ ಎಂಬ ಬಾಲಕ ನಾಯಿ ಕಡಿತಕ್ಕೆ ಬಲಿಯಾಗಿದ್ದಾನೆ. ಹುಚ್ಚು ನಾಯಿ ಕಡಿತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಭಾನುವಾರ ಮೃತಪಟ್ಟಿದ್ದಾನೆ. ಹೀಗೆ ದಿನದಿಂದ ದಿನಕ್ಕೆ ಹುಚ್ಚು ನಾಯಿಗಳ ಕಾಟ ಜಾಸ್ತಿಯಾದರೆ ಮನುಷ್ಯನಿಗೂ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ.
ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿಸಿ..!
ನಿಮ್ಮ ಮನೆ ನಾಯಿಗೂ ಹುಚ್ಚು ನಾಯಿ ಕಚ್ಚಿದೆಯಾ ಇದರ ಬಗ್ಗೆ ಹೆಚ್ಚು ಗಮನವಹಿಸಿ. ನಾಯಿಗಳ ಆರೋಗ್ಯ ಸರಿ ಇದೆಯಾ ಎಂದು ಗಮನಿಸಿ ಹುಚ್ಚು ನಾಯಿ ಕಚ್ಚಿದೆ ಎಂಬ ಸಂದೇಹ ಬಂದಲ್ಲಿ ಪಶು ವೈದ್ಯರನ್ನು ಸಂಪರ್ಕಿಸಿ ಲಸಿಕೆ ಕೊಡಿಸಿ. ಹುಚ್ಚು ನಾಯಿ ಸಮಸ್ಯೆ ಬಗ್ಗೆ ಪಶು ವೈದ್ಯರು ಹಾಗೂ ಆರೋಗ್ಯ ಇಲಾಖೆ, ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ.