ಸರ್ಕಾರಿ ಬಸ್ ಟಿಕೆಟ್ಗೆ ಡಿಜಿಟಲ್ ಪೇ ಹಣ ಪಾವತಿ!
– ಬಿಎಂಟಿಸಿ ಬಸ್ಸುಗಳಲ್ಲಿ ಡಿಜಿಟಲ್ ಪೇಮೆಂಟ್
– ಕ್ಯೂ ಆರ್ ಕೋಡ್ ಬಳಸಿ ಟಿಕೆಟ್ ಖರೀದಿ
NAMMUR EXPRESS NEWS
ಸರಕಾರಿ ಬಸ್ಸುಗಳಲ್ಲಿ ಇನ್ನು ಫೋನ್ ಪೇ, ಗೂಗಲ್ ಪೇ, ಪೇಟಿಎಂ ಮೂಲಕ ಸುಲಭವಾಗಿ ಟಿಕೆಟ್ ಖರೀದಿಸಬಹುದು. ಈ ಹೊಸ ವ್ಯವಸ್ಥೆ ಯಾವೆಲ್ಲ ಬಸ್ಸುಗಳಲ್ಲಿ ಸಿಗಲಿದೆ? ಇಲ್ಲಿದೆ ಮಾಹಿತಿ… ಗೂಗಲ್ ಪೇ, ಪೇಟಿಎಂ ಸೇರಿದಂತೆ ಇತ್ಯಾದಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಈಗ ಗಲ್ಲಿ ಗಲ್ಲಿಯ ಗೂಡಂಗಡಿಗಳಲ್ಲೂ ಶುರುವಾಗಿದೆ. 5-10 ರೂಪಾಯಿ ವ್ಯಾಪಾರಕ್ಕೂ ಸಹ ನಗದು ಬದಲು ಫೋನ್ ಮೂಲಕ ಹಣ ಪಾವತಿಸಲಾಗುತ್ತಿದೆ. ಆದರೆ ಈ ವ್ಯವಸ್ಥೆ ಇದೀಗ ವಾಯುವ್ಯ ಕರ್ನಾಟಕ ಸರಕಾರಿ ಬಸ್ಗಳಲ್ಲಿಯೂ ಜಾರಿಯಾಗಿದೆ.
ಇದರಿಂದ ಚಿಲ್ಲರೆಗಾಗಿ ಪರದಾಡುವ ಕಂಡಕ್ಟರ್ ತಲೆಬಿಸಿ ಕಮ್ಮಿಯಾಗುವುದರ ಜತೆಗೆ ಗ್ರಾಹಕರಿಗೂ ಸಾಕಷ್ಟು ಅನುಕೂಲವಾಗುತ್ತಿದೆ. ಸದ್ಯಕ್ಕೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಡಿಯಲ್ಲಿ ಬರುವ ಐದು ಡಿಪೋಗಳ 415 ಲಾಂಗ್ ರೂಟ್ ಬಸ್ಗಳಲ್ಲಿ ಈಗಾಗಲೇ ಫೋನ್ ಪೇ, ಯುಪಿಐ ಮುಖಾಂತರ ಬಸ್ ಟಿಕೆಟ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ವಿಜಯಪುರ ಜಿಲ್ಲೆಯೊಂದನ್ನು ಹೊರತುಪಡಿಸಿ ಕಿತ್ತೂರು ಕರ್ನಾಟಕ ವ್ಯಾಪ್ತಿಯ ಆರು ಜಿಲ್ಲೆಗಳ ವ್ಯಾಪ್ತಿಯ 4,581 ಬಸ್ಗಳಲ್ಲಿಯೂ ಸಹ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಇಷ್ಟರಲ್ಲೇ ವಿಸ್ತರಣೆಯಾಗಲಿದೆ.
ಬಿಎಂಟಿಸಿ ಬಸ್ಸುಗಳಲ್ಲಿ ಡಿಜಿಟಲ್ ಪೇಮೆಂಟ್ :
ಇಷ್ಟಕ್ಕೂ ಮೊದಲ ಬಾರಿಗೆ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೊಳಿಸಿದ ಹೆಗ್ಗಳಿಕೆ ಬಿಎಂಟಿಸಿಗೆ ಸಲ್ಲುತ್ತದೆ. ಈ ಹೊಸ ವ್ಯವಸ್ಥೆಯನ್ನು ಬಿಎಂಟಿಸಿ 2020ರಲ್ಲಿ ಆರಂಭಿಸಿದೆ. ಬಿಎಂಟಿಸಿಯ ವಹಿವಾಟು ಪ್ರತೀ ತಿಂಗಳು 20 ಕೋಟಿ ರೂಪಾಯಿಗಿಂತ ಹೆಚ್ಚಿದ್ದು, ಅದರಲ್ಲಿ ನಾಲ್ಕು ಕೋಟಿಗಿಂತ ಅಧಿಕ ಹಣ ಆನ್ ಲೈನ್ ಮುಖಾಂತರವೇ ಆಗುತ್ತಿದೆ. ಎಲ್ಲ ಸಾರಿಗೆ ಸಂಸ್ಥೆಗಳಿಗಿಂತ ಬಿಎಂಟಿಸಿ ಒಂದು ಹೆಜ್ಜೆ ಮುಂದಿದ್ದು, ಈಗಾಗಲೇ Tummoc app ಮುಖಾಂತರ ಪ್ರಯಾಣವನ್ನು ಸುಲಭಗೊಳಿಸಲು ದಿನ, ವಾರ ಮತ್ತು ಮಾಸಿಕ ಬಸ್ ಪಾಸಾಗಳನ್ನು ಕೂಡ ಆನೈನ್ ಮುಖಾಂತರ ನೀಡುತ್ತಿದೆ. ಪ್ರತಿ ತಿಂಗಳು ವಿತರಣೆಯಾಗುವ ಒಂದು ಲಕ್ಷಕ್ಕಿಂತ ಅಧಿಕ ಪಾಸ್ಗಳಲ್ಲಿ ಸುಮಾರು 25% ರಷ್ಟು ವಹಿವಾಟು ಆನ್ ಲೈನ್ ಮುಖಾಂತರವೇ ನಡೆಯುತ್ತಿದೆ.
ಡಿಜಿಟಲ್ ಪೇಮೆಂಟ್ ವ್ಯವಸ್ಥೆಯಿಂದ ಆಗುವ ಲಾಭಗಳನ್ನು ತಿಳಿದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೂಡ ಈಗ ತನ್ನ ವ್ಯಾಪ್ತಿಯ ಬಸ್ಸುಗಳಲ್ಲಿ ಡಿಜಿಟಲ್ ಪೇಮೆಂಟ್ ಮೂಲಕ ಟಿಕೆಟ್ ವಿತರಣೆ ಮಾಡುತ್ತಿದೆ. ಕಳೆದ ಸೆಪ್ಟೆಂಬರ್ 1ರಿಂದ ಪ್ರಾಯೋಗಿಕವಾಗಿ ಡಿಜಿಟಲ್ ಪಾವತಿ ಸೇವೆಯನ್ನು ಆರಂಭಿಸಿದ್ದು: ಇದಕ್ಕೆ ಸಿಕ್ಕ ಪ್ರಾಯಾಣಿಕರ ಸ್ಪಂದನೆಯನ್ನು ಗಮನಿಸಿ ಈ ವ್ಯವಸ್ಥೆಯನ್ನು ಐದು ಡಿಪೋಗಳಿಗೆ ಪ್ರಾಯೋಗಿಕವಾಗಿ ವಿಸ್ತರಿಸುತ್ತಿದೆ. ಆನ್ ಲೈನ್ ಪೇಮೆಂಟ್ ಆರಂಭ ಮಾಡಿದ ನಂತರ ಇಲ್ಲಿಯ ವರೆಗೆ 415 ಬಸ್ಗಳಲ್ಲಿ ನಿರ್ವಾಹಕರು 30,000 ವೈಯಕ್ತಿಕ ವೈವಾಟುಗಳನ್ನು ಮಾಡಿದ್ದು, ಸುಮಾರು 75 ಲಕ್ಷ ರೂಪಾಯಿ ಮೊತ್ತವನ್ನು ನೇರವಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಖಾತೆಗೆ ವರ್ಗಾಯಿಸಿದೆ. ಇದರಲ್ಲಿ ಸುಮಾರು 20% ನಷ್ಟು ಹಣ ಆನ್ಸೆನ್ ಮುಖಾಂತರವೇ ಆಗಿದ್ದು, ಡಿಜಿಟಲ್ ಪೇಮೆಂಟ್ಗೆ ಸಕಾರಾತ್ಮಕ ಸ್ಪಂದನೆ ಸಿಗುತ್ತಿದೆ.
ಸಂಸ್ಥೆಯ ಉಳಿದ ಬಸ್ಸುಗಳಲ್ಲಿ ಡಿಜಿಟಲ್ ಪೇಮೆಂಟ್ :
ಆರಂಭಿಸಲು ಫೋನ್ ಪೇ ಖಾಸಗಿ ಸಂಸ್ಥೆಯನ್ನು ಈಗಾಗಲೇ ಸಂಪರ್ಕಿಸಿದ್ದು, ಕಂಪನಿಯು ನಿರ್ವಾಹಕರಿಗೆ ಪೇಮೆಂಟ್ ಮಾಡಿಸಿಕೊಳ್ಳಲು ಕ್ಯೂಆರ್ ಕೋಡ್ ನೀಡಿದೆ. ಪ್ರತಿದಿನ ಆನ್ಸೆನ್ ಮುಖಾಂತರ ಆಗುವ ವಹಿವಾಟುಗಳನ್ನು ನಿರ್ವಹಣೆ ಮಾಡಲು ಮುಖ್ಯ ಕಚೇರಿಯಲ್ಲಿ ಲೈವ್ ಡ್ಯಾಶ್ ಬೋರ್ಡ್ ಸ್ಥಾಪಿಸಲಾಗಿದ್ದು ಪ್ರತಿದಿನ ವ್ಯವಹಾರಗಳು ಯಾವುದೇ ತೊಂದರೆ ಇಲ್ಲದೆ ಸುಗಮವಾಗಿ ಸಾಗುತ್ತಿವೆ ಎನ್ನುತ್ತಾರೆ NWKRTC ಅಧಿಕಾರಿಗಳು.